ಕಲಬುರಗಿ: ಲಾಕ್ಡೌನ್ ಗೆ ಬಳಲಿ ಬೆಂಡಾದ ಬಡ ಹಾಗೂ ಕೂಲಿ ಕಾರ್ಮಿಕರ ಕುಟುಂಬಕ್ಕೆ ಗೆಳೆಯರ ಬಳಗವೊಂದು ದಿನಸಿ ಸಾಮಗ್ರಿಗಳನ್ನು ನೀಡುವ ಮೂಲಕ ಮಾನಯತೆಗೆ ಸಾಕ್ಷಿಯಾಗಿದ್ದಾರೆ.
ಜಿಲ್ಲೆಯ ವಾಡಿ ಪಟ್ಟದಲ್ಲಿ ವಿಶ್ವರಾಧ್ಯ ತಂಗಡಗಿ, ಅನೀಲಕುಮಾರ ಧೋತ್ರೆ, ಜಾಲಿಂದರ್ ಕೋರಿ, ಲಕ್ಷ್ಮೀಕಾಂತ ಗೋಡಬೋಲೆ ಎಂಬ ನಾಲ್ಕು ಜನ ಗೆಳೆಯರು ತಮ್ಮ ಸ್ವಂತ ದುಡ್ಡಿನಲ್ಲಿ ಕೂಲಿಯನ್ನೆ ಆಧರಿಸಿ ಜೀವನ ನಡೆಸುತ್ತಿದ್ದ ಬಡ ಹಾಗೂ ಕೂಲಿಕಾರ್ಮಿಕ ಕುಟುಂಬಗಳಿಗೆ ಅಕ್ಕಿ,ಬೇಳೆ ಅಡುಗೆ ಎಣ್ಣೆ ಸೇರಿದಂತೆ ಆಹಾರ ತಯಾರಿಕೆಗೆ ಬೇಕಾಗುವಷ್ಟು ಅಗತ್ಯ ಸಾಮಗ್ರಿಗಳನ್ನು ವಿತರಿಸುವ ಮೂಲಕ ಮಾನವಿಯತೆ ಮೆರೆದಿದ್ದಾರೆ.
ದಿನಗೂಲಿಯನ್ನೇ ಅವಲಂಬಿಸಿ ಬದುಕುವವರು, ಕೆಲಸ ಕಳೆದುಕೊಂಡು ಹಸಿವಿನಿಂದ ಬಳಲುತ್ತಿರುವವರ ಗುರುತಿಸಿ ಹಸಿವು ನಿಗಿಸುವ ತೀರುವ ಈ ಗೆಳೆಯರ ಬಳಗದ ಕಾರ್ಯ ಇತರರಿಗೆ ಮಾದರಿಯಾಗಿದೆ.