ಕಲಬುರಗಿ: ಗುರುವಾರ ಕಲಬುರಗಿ ನಗರದ ಮಾತಾಮಾಣಿಕೇಶ್ವರಿ ಕಾಲೋನಿ ಹಾಗೂ ಭರತ ತಾಂಡಾಗಳಲ್ಲಿ ಕೊರೋನಾ ಸ್ವಯಂ ಸೇವಕರು ಕರೋನಾ ವೈರೆಸ್ ತಡೆಗಟ್ಟುವ ಬಗ್ಗೆ ಕಾಲೂನಿಯ ಜನರಲ್ಲಿ ಸ್ಯಾನಿಟೈಸರ್ ಬಳಿಕೆ, ಪ್ರತಿ ಹತ್ತು ನಿಮಿಷ ಹಾಗೂ ಅರ್ಧ ಗಂಟೆಗೊಮ್ಮೆ ಸಾಬೂನಿಂದ ಕೈ ತೊಳೆಯುವುದು ಹಾಗೂ ಮಾಸ್ಕ್ ಧರಿಸುವ ವಿಧಾನ ಬಗ್ಗೆ ಜನರಲ್ಲಿ ಅರಿವು ಮೂಡಿಸಿದರು.
ರಾಜ್ಯ ಸರ್ಕಾರವು ಕೊರೋನಾ ಸೋಂಕು ಹರಡುವಿಕೆ ತಡೆಯಲು ಹಾಗೂ ನಿಯಂತ್ರಣಕ್ಕಾಗಿ ಹಲವಾರು ಮುಂಜಾಗ್ರತಾ ಕ್ರಮಗೊಳ್ಳುತ್ತಿದೆ. ಇದ ಅಂಗವಾಗಿ ಕೊರೋನಾ ವೈರಸ್ ಬಗ್ಗೆ ಹರಡುವ ವದಂತಿಗಳು ಹಾಗೂ ಅಪಪ್ರಚಾರಗಳನ್ನು ತಡೆದು ಜನರಿಗೆ ನೈಜ ಮಾಹಿತಿ ಒದಗಿಸುವ ನಿಟ್ಟಿನಲ್ಲಿ ಭಾರತೀಯ ರೆಡ್‍ಕ್ರಾಸ್ ಸಂಸ್ಥೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ರಾಜ್ಯ ಕಾರ್ಮಿಕ ಅಧ್ಯಯನ ಸಂಸ್ಥೆ ಸಹಯೋಗದೊಂದಿಗೆ ಈಗಾಗಲೇ ಜನಜಾಗೃತಿ ಕಾರ್ಯಕ್ರಮಕ್ಕೆ ಪ್ರಾರಂಭಿಸಲಾಗಿದೆ.
ಯಾವುದೇ ವ್ಯಕ್ತಿ ಕೆಮ್ಮುವಾಗ, ಸೀನುವಾಗ ಕಡ್ಡಾಯವಾಗಿ ಕರವಸ್ತ್ರ ಉಪಯೋಗಿಸಬೇಕು. ಪರಸ್ಪರ ಮಾತಾಡುವಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಆಗಾಗ ಸಾಬೂನಿನಿಂದ ಕೈಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳಬೇಕು ಮತ್ತು ಹೆಚ್ಚಿನ ಜನಸಂದಣಿಯಲ್ಲಿ ಭಾಗವಹಿಸದಂತೆ ಎಚ್ಚರಿಕೆ ವಹಿಸಿದಲ್ಲಿ ಕೊರೋನಾ ಸೊಂಕು ತಡೆಗಟ್ಟಬಹುದಾಗಿದೆ ಎಂದು ಮಾಹಿತಿ ನೀಡಿದರು.
ಮನೆಯಲ್ಲಿ ಯಾರಿಗಾದರೂ ಕೆಮ್ಮು, ಜ್ವರ, ಸೀತ ಲಕ್ಷಣಗಳು ಕಂಡು ಬಂದಲ್ಲಿ ಸ್ವಯಂ ಪ್ರೇರಿತರಾಗಿ ಆರೋಗ್ಯ ಇಲಾಖೆಯ ಸಹಾಯವಾಣಿ 104 ಕರೆ ಮಾಡಿ ಚಿಕಿತ್ಸೆ ಒಳಪಡಿಸುವ ಬಗ್ಗೆ ತಿಳಿ ಹೇಳಿದರು. ತಮ್ಮ ಅಕ್ಕಪಕ್ಕದ ಮನೆಯಲ್ಲಿ ಹೊರದೇಶ, ರಾಜ್ಯ ಹಾಗೂ ಜಿಲ್ಲೆಯಿಂದ ಬಂದಿದ್ದರೆ ಕೂಡಲೇ ಕೊರೋನಾ ಸಹಾಯವಾಣಿ ಸಂಖ್ಯೆ 08472-278648/ 278698 / 278604/ 278677. ಡಿ.ಎಸ್.ಯು ಹೆಲ್ಪ್‍ಲೈನ್ ಸಂಖ್ಯೆ: 08472-268648 ಇರುತ್ತದೆ. ರೋಗದ ಲಕ್ಷಣ ಕಂಡುಬಂದಲ್ಲಿ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಬೇಕು ಅಥವಾ ಹೆಲ್ಪ್‍ಲೈನ್ ಸಂಖ್ಯೆ: 104 ಕರೆ ಮಾಡಿ ಸಹಾಯ ಪಡೆಯಬಹುದಾಗಿದೆ.