ಕಲಬುರಗಿ: ಇತ್ತೀಚೆಗೆ ದೆಹಲಿಯ ನಿಜಾಮುದ್ದೀನ್‍ನಲ್ಲಿ ಜರುಗಿದ ತಬ್ಲಿಘಿ ಮಾರ್ಕಾಜ್ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿ ಜಿಲ್ಲೆಗೆ ಮರಳಿದ ವ್ಯಕ್ತಿಯ ಕುಟುಂಬದ ಓರ್ವ ಮಹಿಳೆಗೆ ಕೊರೋನಾ ಪಾಸಿಟಿವ್ ಪತ್ತೆಯಾಗಿದ್ದು, ವೈದ್ಯಕೀಯ ವರದಿಯಿಂದ ದೃಢವಾಗಿದೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ಅವರು ಗುರುವಾರ ತಿಳಿಸಿದ್ದಾರೆ.
ಅದ್ಯಾಗೂ ನವದೆಹಲಿಗೆ ಸಾಮೂಹಿಕ ಪ್ರಾರ್ಥನೆಗೆ ತೆರಳಿದ ಸದರಿ ವ್ಯಕ್ತಿಗೆ ನೆಗೆಟಿವ್ ಕಂಡುಬಂದಿದೆ. ಇದರಿಂದ ಜಿಲ್ಲೆಯಲ್ಲಿ ಮೃತ ವ್ಯಕ್ತಿ ಸೇರಿದಂತೆ ಇದೂವರೆಗೆ 5 ಕೊರೋನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ ಎಂದು ಡಿ.ಸಿ. ಶರತ್ ಬಿ. ತಿಳಿಸಿದರು.