ಕೊರೋನಾ ಸ್ವಯಂ ಸೇವಕರಿಂದ ನಗರದ ವಿವಿಧ ಪ್ರದೇಶಗಳಲ್ಲಿ ಅರಿವು ಕಾರ್ಯಕ್ರಮ

0
49

ಕಲಬುರಗಿ: ಶುಕ್ರವಾರ ಕಲಬುರಗಿ ನಗರದ ನಂದಿ ಕಾಲೋನಿ ಹಾಗೂ ರಾಮನಗರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೊರೋನಾ ಸ್ವಯಂ ಸೇವಕರು ಕರೋನಾ ವೈರೆಸ್ ತಡೆಗಟ್ಟುವ ಬಗ್ಗೆ ಕಾಲೂನಿಯ ಜನರಲ್ಲಿ ಸ್ಯಾನಿಟೈಸರ್ ಬಳಿಕೆ, ಪ್ರತಿ ಹತ್ತು ನಿಮಿಷ ಹಾಗೂ ಅರ್ಧ ಗಂಟೆಗೊಮ್ಮೆ ಸಾಬೂನಿಂದ ಕೈ ತೊಳೆಯುವುದು ಹಾಗೂ ಮಾಸ್ಕ್ ಧರಿಸುವ ವಿಧಾನ ಬಗ್ಗೆ ಜನರಲ್ಲಿ ಅರಿವು ಮೂಡಿಸಿದರು.

ಯಾವುದೇ ವ್ಯಕ್ತಿ ಕೆಮ್ಮುವಾಗ, ಸೀನುವಾಗ ಕಡ್ಡಾಯವಾಗಿ ಕರವಸ್ತ್ರ ಉಪಯೋಗಿಸಬೇಕು. ಪರಸ್ಪರ ಮಾತಾಡುವಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಆಗಾಗ ಸಾಬೂನಿನಿಂದ ಕೈಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳಬೇಕು ಮತ್ತು ಹೆಚ್ಚಿನ ಜನಸಂದಣಿಯಲ್ಲಿ ಭಾಗವಹಿಸದಂತೆ ಎಚ್ಚರಿಕೆ ವಹಿಸಿದಲ್ಲಿ ಕೊರೋನಾ ಸೊಂಕು ತಡೆಗಟ್ಟಬಹುದಾಗಿದೆ ಎಂದು ಮಾಹಿತಿ ನೀಡಿದರು.

Contact Your\'s Advertisement; 9902492681

ಮನೆಯಲ್ಲಿ ಯಾರಿಗಾದರೂ ಕೆಮ್ಮು, ಜ್ವರ, ಸೀತ ಲಕ್ಷಣಗಳು ಕಂಡು ಬಂದಲ್ಲಿ ಸ್ವಯಂ ಪ್ರೇರಿತರಾಗಿ ಆರೋಗ್ಯ ಇಲಾಖೆಯ ಸಹಾಯವಾಣಿ 104 ಕರೆ ಮಾಡಿ ಚಿಕಿತ್ಸೆ ಒಳಪಡಿಸುವ ಬಗ್ಗೆ ತಿಳಿ ಹೇಳಿದರು. ತಮ್ಮ ಅಕ್ಕಪಕ್ಕದ ಮನೆಯಲ್ಲಿ ಹೊರದೇಶ, ರಾಜ್ಯ ಹಾಗೂ ಜಿಲ್ಲೆಯಿಂದ ಬಂದಿದ್ದರೆ ಕೂಡಲೇ ಕೊರೋನಾ ಸಹಾಯವಾಣಿ ಸಂಖ್ಯೆ 08472-278648/ 278698 / 278604/ 278677. ಡಿ.ಎಸ್.ಯು ಹೆಲ್ಪ್‍ಲೈನ್ ಸಂಖ್ಯೆ: 08472-268648 ಇರುತ್ತದೆ. ರೋಗದ ಲಕ್ಷಣ ಕಂಡುಬಂದಲ್ಲಿ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಬೇಕು ಅಥವಾ ಹೆಲ್ಪ್‍ಲೈನ್ ಸಂಖ್ಯೆ: 104 ಕರೆ ಮಾಡಿ ಸಹಾಯ ಪಡೆಯಬಹುದಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here