ಕಲಬುರಗಿ: ಪೋಲಿಸರು ಮಾಡದ ಕೆಲಸವನ್ನು ಜನರೇ ಮಾಡಿದ ಘಟನೆ ನಗರದ ರಾಘವೇಂದ್ರ ನಗರ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ಕಳೆದ ಶುಕ್ರವಾರ ಮಧ್ಯರಾತ್ರಿ ೧೨ ಗಂಟೆಯ ಸುಮಾರಿಗೆ ನಡೆದಿದೆ.
ನಗರದ ರಾಘವೇಂದ್ರ ಕಾಲೋನಿಯಲ್ಲಿ ರಾತ್ರೋ ರಾತ್ರಿ ಮನೆಯೊಂದರಲ್ಲಿ ಕಳ್ಳತನ ಮಾಡಲು ಖದೀಮ ಆವರಣದ ಗೋಡೆಯನ್ನು ಹಾರುವಾಗ ಅಲ್ಲಿನ ಜನರು ನೋಡಿ ಆತನಿಗೆ ಹಿಡಿದು ಪೋಲಿಸರಿಗೆ ಒಪ್ಪಿಸಿದ್ದಾರೆ.
ಈ ಹಿಂದೆ ಇದೇ ಖದೀಮ ಹಲವು ಮನೆಗಳಲ್ಲಿ ಕಳ್ಳತನ ಮಾಡಿದ್ದು, ಈ ಬಾರಿ ಅಲ್ಲಿನ ಜನರೇ ಆತನಿಗೆ ಕಳ್ಳತನ ಮಾಡುವಾಗ ಹಿಡಿದು ನೇರವಾಗಿ ರಾಘವೇಂದ್ರನಗರ ಪೋಲಿಸ್ ಠಾಣೆಗೆ ಒಪ್ಪಿಸಿದ್ದಾರೆ.
ಜನರ ಕೈಗೆ ಸಿಕ್ಕಿಬಿದ್ದ ಕಳ್ಳನಿಗೆ ಹಲವಾರು ಜನರು ಕುಪಿತಗೊಂಡು ಆತನಿಗೆ ಹೊಡೆಯಲು ಹೋದಾಗ ಹಿಡಿದವರೇ ಅವರನ್ನು ನಿಯಂತ್ರಿಸಿ ಯಾವುದೇ ರೀತಿಯಲ್ಲಿ ಹಲ್ಲೆ ಮಾಡದಂತೆ ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಜನರು ಹಿಡಿದಾಗ ಆತ ತಪ್ಪಿಸಿಕೊಳ್ಳಲು ಯತ್ನಿಸಿದ್ದರಿಂದ ಆತನ ಅಂಗಿ ಹಾಗೂ ಬನಿಯನ್ ಹರಿದಿದ್ದು, ಅದೇ ಸ್ಥಿತಿಯಲ್ಲಿಯೇ ಸಾರ್ವಜನಿಕರು ಆತನಿಗೆ ಪೋಲಿಸರಿಗೆ ಒಪ್ಪಿಸಿದರು. ಈ ಕುರಿತು ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.