ಚಾಕುವಿನಿಂದ ತಲೆಗೆ ಹೊಡೆದು ತಮ್ಮನಿಂದ ಅಣ್ಣನ ಹತ್ಯೆ

0
82

ಕಲಬುರಗಿ: ಕ್ಷುಲ್ಲಕ ಕಾರಣವೊಂದರಲ್ಲಿ ತಮ್ಮನು ತನ್ನ ಒಡಹುಟ್ಟಿದ ಅಣ್ಣನ ತಲೆಗೆ ಚಾಕುವಿನಿಂದ ಹೊಡೆದು ಹತ್ಯೆ ಮಾಡಿದ ಘಟನೆ ನಗರದ ಆನಂದ್ ನಗರದಲ್ಲಿ ವರದಿಯಾಗಿದೆ. ಮೃತನಿಗೆ ಪ್ರಕಾಶ್ ತಂದೆ ವಿಜಯಕುಮಾರ್ (೨೮) ಎಂದು ಗುರುತಿಸಲಾಗಿದೆ. ಆತನ ತಮ್ಮ ಪ್ರಶಾಂತ್ ತಂದೆ ವಿಜಯಕುಮಾರ್ (೨೧) ಎಂಬಾತನೇ ಕೊಲೆ ಆರೋಪಿ.

ತಂದೆ, ತಾಯಿ ಊರಿಗೆ ಹೋದಾಗ ಮನೆಯಲ್ಲಿ ಅಣ್ಣ ಪ್ರಕಾಶ್ ಮತ್ತು ತಮ್ಮ ಪ್ರಶಾಂತ್ ಅವರಿಬ್ಬರೇ ಇದ್ದು, ಇಬ್ಬರ ನಡುವೆ ಕ್ಷುಲ್ಲಕ ಕಾರಣವೊಂದಕ್ಕೆ ಜಗಳ ಆರಂಭಗೊಂಡಿತು. ಜಗಳ ವಿಕೋಪಕ್ಕೆ ಹೋದಾಗ ಪ್ರಶಾಂತನು ಅಡಿಗೆ ಮನೆಯಲ್ಲಿದ್ದ ಚಾಕುವನ್ನು ತೆಗೆದುಕೊಂಡು ತನ್ನ ಅಣ್ಣ ಪ್ರಕಾಶನ ತಲೆಗೆ ಚುಚ್ಚಿದ್ದು, ಇದರಿಂದ ರಕ್ತಸ್ರಾವವಾಯಿತು. ತಕ್ಷಣವೇ ಆತ ರಕ್ತವನ್ನು ನಿಯಂತ್ರಿಸಲು ತಲೆಗೆ ಬಟ್ಟೆ ಸುತ್ತಿಕೊಂಡಿದ್ದು, ಆದ ಘಟನೆಯ ಕುರಿತು ತನ್ನ ಅಕ್ಕನಿಗೆ ದೂರವಾಣಿ ಮೂಲಕ ತಿಳಿಸಿದ್ದು, ಆಕೆ ಇಬ್ಬರಿಗೂ ಬುದ್ದಿವಾದ ಹೇಳಿದಳು ಎನ್ನಲಾಗಿದೆ.

Contact Your\'s Advertisement; 9902492681

ನಂತರ ಇಬ್ಬರೂ ಮನೆಯಲ್ಲಿರುವ ಪ್ರತ್ಯೇಕ ಕೋಣೆಗಳಲ್ಲಿ ಮಲಗಿಕೊಂಡಿದ್ದು, ಬೆಳಗಾಗುವಷ್ಟರಲ್ಲಿಯೇ ಪ್ರಕಾಶ್ ಗಂಭೀರವಾಗಿ ಗಾಯಗೊಂಡು ಅಸುನೀಗಿದ ಎನ್ನಲಾಗಿದೆ. ಸುದ್ದಿ ತಿಳಿದು ಎಂ.ಬಿ. ನಗರ ಠಾಣೆಯ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪ್ರಶಾಂತನಿಗೆ ವಶಕ್ಕೆ ತೆಗೆದುಕೊಂಡು ತನಿಖೆ ಮುಂದುವರೆಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here