ಯಾದಗಿರಿ: ಮಾದಿಗ ದಂಡೋರ ರೀಜರವೇಷನ್ ಮೀಸಲಾತಿ ಹೋರಾಟ ಸಮಿತಿ ವತಿಯಿಂದ ೪ನೇ ದಿನವಾದ ಶನಿವಾರದಂದು ಸಹ ನಗರದ ವಿವಿಧೆಡೆ ಅನ್ನದಾನ ಮಾಡಲಾಯಿತು.
ಎಂ.ಆರ್.ಎಚ್.ಎಸ್. ಜಿಲ್ಲಾಧ್ಯಕ್ಷ ರಾದ ರಾಜಣ್ಣ ದಾಸನಕೇರಿ ನೇತೃತ್ವದಲ್ಲಿ ತೆರಳಿದ ಕಾರ್ಯಕರ್ತರು ಹಸಿದವರಿಗೆ ಅನ್ನದಾನ ಮಾಡಿದರು. ನಗರದಲ್ಲಿ ಇರುವ ಸರಕಾರಿ ಜಿಲ್ಲಾ ಆಸ್ಪತ್ರೆ , ಆಶೀರ್ವಾದ ಆಸ್ಪತ್ರೆ ಹಾಗೂ ಶಿವ ಸ್ಕ್ಯಾನಿಂಗ್ ಸೆಂಟರ್ ಗಳಲ್ಲಿ ಇರುವ ರೋಗಿಗಳಿಗೆ ಮತ್ತು ರೋಗಿಗಳ ಜೊತೆ ಯಲ್ಲಿ ಇರುವ ಕುಟುಂಬದ ವರಿಗೆ ಉಪಹಾರ ನೀಡಲಾಯಿತು.
ಈ ಸಂದರ್ಭದಲ್ಲಿ ಆನಂದ ಗೋಡಿಹಾಳ, ರಾಜು ದೊಡ್ಡಮನಿ, ಭೀಮರೆಡ್ಡಿ ಮಾಳಿಕೇರಿ, ಜಗದೀಶ ವಡವಾಟ, ಶಂಕರ ನಾಯಕ ಇನ್ನಿತರು ಪಾಲ್ಗೊಂಡಿದ್ದರು.