ಕಲಬುರಗಿ: ವಸತಿನಿಲಯಗಳಲ್ಲಿ ಹಲವಾರು ವರ್ಷಗಳಿಂದ ಹೊರಗುತ್ತಿಗೆ ಕಾರ್ಮಿಕರು ಕೆಲಸ ಮಾಡುತ್ತಿದ್ದು, ಆದರೆಇವರಿಗೆ ಸೇವಾ ಭದ್ರತೆ ಹಾಗೂ ಇನ್ನಿತರ ಸೌಲಭ್ಯಗಳು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ನಗರದ ಜಿಲ್ಲಾ ಪಂಚಾಯತ್ ಕಚೇರಿ ಎದುರು ಕರ್ನಾಟಕ ರಾಜ್ಯ ಸಂಯುಕ್ತ ವಸತಿ ನಿಲಯ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ವಿ.ಜಿ. ದೇಸಾಯಿ ಪ್ರತಿಭಟನೆ ನಡೆಸಿ ಒತ್ತಾಯಿಸಿದರು.
ಅವರು ನಗರದ ಜಿಲ್ಲಾ ಪಂಚಾಯತ್ ಕಚೇರಿ ಎದುರು ಪ್ರತಿಭಟನೆ ನಡೆಸಿ, ವಸತಿನಿಲಯಗಳಲ್ಲಿ ಹಲವಾರು ವರ್ಷಗಳಿಂದ ಹೊರಗುತ್ತಿಗೆ ಕಾರ್ಮಿಕರು ಹಲವು ವರ್ಷಗಳಿಂದ ದುಡಿಯುತ್ತಿದ್ದರೂ, ಇವರಿಗೆ ಸಮರ್ಪಕ ಸಂಬಳ, ಇ.ಪಿ.ಎಫ್. ಹಾಗೂ ಇ.ಎಸ್.ಐ ಸೌಲಭ್ಯಗಳು ಕೂಡಾ ಸಿಗುತ್ತಿಲ್ಲ, ಅಲ್ಲದೆ ಪ್ರತಿ ತಿಂಗಳು 2ನೇ ತಾರಿಖಿನೊಳಗಾಗಿ ಹಾಜರಾತಿ ಕೊಡದೆ ಇರುವದರಿಂದ ನಿರಂತರವಾಗಿ ಪಿ.ಎಫ್. ಜಮಾ ಆಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದರು.
ಕಾರ್ಮಿಕರ ಬಾಕಿ ಇರುವ ವೇತನ ಈ ಕೂಡಲೇ ಬಿಡುಗಡೆ ಮಾಡಿ, ಪ್ರತಿ ತಿಂಗಳು 5ನೇ ತಾರಿಕಿನ ಒಳಗಾಗಿ ಸಂಬಳವನ್ನು ನೀಡಿ, ಪಿ.ಎಫ್ ಹಣವನ್ನು ನಿಗದಿತವಾಗಿ ಕಾರ್ಮಿಕರ ಖಾತೆಗೆ ಜಮಾ ಆಗುವಂತೆ ಕ್ರಮಕೈಗೊಳ್ಳಿ, ಇ.ಎಸ.ಐ ಕಾರ್ಡನ್ನುಕಾರ್ಮಿಕರಿಗೆ ಸಮರ್ಪಕವಾಗಿ ಒದಗಿಸಿ, ರಜೆ ಸಮಯದಲ್ಲಿ ಸಹ ಸಂಬಳ ನೀಡಿ, ಹೊರಗುತ್ತಿಗೆ ನೌಕರರಿಗೆ ಸೇವಾ ಭದ್ರತೆಯನ್ನು ಒದಗಿಸಿಬೇಕೆಂದು ಪ್ರತಿಭಟನೆಯಲ್ಲಿ ಒತ್ತಾಯಸಿದರು.
ಪ್ರತಿಭಟನೆಯಲ್ಲಿ ಕಾರ್ಮಿಕರು ಸೇರಿದಂತೆ ಸಂಘದ ಸದಸ್ಯರು ಇದ್ದರು.