ಕಲಬುರಗಿಯಲ್ಲಿ ಕೊರೋನಾಗೆ ಮತ್ತೊಬ್ಬ ವೃದ್ಧ ಬಲಿ: ಸಾವಿನ ಸಂಖ್ಯೆ 5ಕ್ಕೆ ಏರಿಕೆ

0
297

ಕಲಬುರಗಿ: ಜಿಲ್ಲೆಯಲ್ಲಿ ಕೊರೋನಾ ಸೋಂಕಿನಿಂದ ಕಲಬುರಗಿ 65 ವರ್ಷದ ವೃದ್ದ ಮೃತಪಟ್ಟ ಘಟನೆ ನಿನ್ನೆ ರಾತ್ರಿ ನಡೆದಿದ್ದು,ರಾಜ್ಯದಲ್ಲಿ ಕೊರೋನಾ ದಿಂದ ಮೃತಪಟ್ಟವರ ಸಂಖ್ಯೆ 5ಕ್ಕೆ ಏರಿಕೆಯಾಗಿದೆ. ಜಿಲ್ಲೆಯ ಎರಡನೇ ವ್ಯಕ್ತಿ ಮೃತಪಟ್ಟಿದ್ದಾರೆ.

ಮೃತನಿಗೆ ಕೊರೋನಾ ಸೋಂಕು ಇರುವುದು ನಿನ್ನೆ ದೃಢಪಟ್ಟಿದ್ದು. ಕಳೆದ ಎರಡು ತಿಂಗಳಿದಂದ ಯಾವುದೇ ಟ್ರಾವೇಲ್ ಹಿಸ್ಟ್ರಿ ಇಲ್ಲ ಎಂದು ತಿಳಿದುಬಂದಿದೆ. ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿರುವ ಇವರು ನಿನ್ನೆ ರಾತ್ರಿ ಮೃತಪಟ್ಟಿದ್ದಾರೆಂದು ತಿಳಿದುಬಂದೆ. ಪಾಸಿಟಿವ್ ವರದಿ ಬರುವ ಮುಂಚೆ ವೃದ್ಧ ಖಾಸಿಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆದಿದ್ದರು ಎನ್ನಲಾಗಿತ್ತು. ಸದ್ಯ ಈಗ ಖಾಸಗಿ ಆಸ್ಪತ್ರೆಯನ್ನು ಸಂಪೂರ್ಣ ಬಂದ್ ಮಾಡಲಾಗಿದೆ.

Contact Your\'s Advertisement; 9902492681

ಮೃತ ವೃದ್ಧ ಕುಟುಂಬವನ್ನು ಕ್ವಾರೆಂಟೈನ್ ನಲ್ಲಿ ಇಡಲಾಗಿದ್ದು, ಅವರಿಗೂ ಚಿಕಿತ್ಸೆಗೆ ಒಳಪಡಿಸಲಾಗುತ್ತಿದೆ.

ಈ ಹಿಂದೆ ಕಲಬುರಗಿಯಲ್ಲಿ 76 ವರ್ಷದ ವೃದ್ಧ ಕೊರೋನಾದಿಂದ ಸಾವನಪ್ಪದರು, ನಿನ್ನೆ ರಾತ್ರಿ 65 ವರ್ಷದ ವೃದ್ಧ ಮೃತಪಟ್ಟಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here