ಶಹಾಬಾದ: ನಗರದಲ್ಲಿ ಇಬ್ಬರು ಕರೋನಾ ವೈರಸ್ ಪತ್ತೆಯಾಗಿರುವ ಹಿನ್ನೇಲೆಯಲ್ಲಿ ನಗರ ಪೊಲೀಸರು ಲಾಕ್ಡೌನ್ ಉಲ್ಲಂಘಿಸಿದವರ ಮೇಲೆ ಭಾರಿ ಪ್ರಮಾಣದ ಕ್ರಮ ಕೈಗೊಂಡಿದ್ದು, ಸುಮಾರು ೫೪ ವಾಹನಗಳನ್ನು ಜಪ್ತಿ ಮಾಡಿದ್ದಾರೆ.
ಪಿಐ. ಬಿ.ಅಮರೇಶ, ಪಿಎಸ್ಐ ಮಹಾಂತೇಶ ಪಾಟೀಲ ನೇತೃತ್ವದಲ್ಲಿ ಸಿಬ್ಬಂದಿಗಳಾದ ಅರ್ಜುನ್, ಹುಸೇನ್ ಭಾಷಾ, ಸೋಮು ರಾಠೋಡ, ಸಂತೋಷ ರಸ್ತೆಗೆ ಇಳಿದ ಮತ್ತು ಅನಾವಶ್ಯಕವಾಗಿ ಲಾಕ್ಡೌನ್ ಉಲ್ಲಂಘಿಸಿ ರಸ್ತೆಗೆ ಬಂದ ಸುಮಾರು ೫೪ ದ್ವಿಚಕ್ರ ವಾಹನಗಳನ್ನು, ಮೂರು ಕಾರು, ಮೂರು ಅಟೋಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಹಿಂದೆ ೫ ದ್ವಿಚಕ್ರ ವಾಹನಗಳನ್ನು ವಶಪಡಿಸಕೊಂಡಿದ್ದರು, ಅಲ್ಲಲ್ಲಿ ಅನಾವಶ್ಯಕವಾಗಿ ಅಲೆಯುತ್ತಿದ್ದವರ ಮೇಲೆ ಲಾಠಿ ಬಿಸಿದ್ದು, ರಸ್ತೆಗೆ ಇಳಿದವರಿಗೆ ಬೈಟಕ್ ಹೊಡಿಸಿ, ಎಚ್ಚರಿಕೆ ನೀಡಿದ್ದಾರೆ.
ಎಚ್ಚರಿಕೆ: ಲಾಕ್ಡೌನ್ ಉಲ್ಲಂಘಿಸಿ ಅನಾವಶ್ಯಕವಾಗಿ ಸಾರ್ವಜನಿಕರು, ದ್ವಿಚಕ್ರ ವಾಹನ, ಇತರ ವಾಹನಗಳು ರಸ್ತೆಗೆ ಬಂದರೆ ಜಪ್ತಿ ಮಾಡಲಾಗುವದು ಎಂದು ಪಿಐ ಬಿ.ಅಮರೇಶ ಸಾರ್ವಜನಿರಕರಿಗೆ ಎಚ್ಚರಿಕೆ ನೀಡಿದ್ದಾರೆ.