ಇಮಾಮ್ ಮೇಲೆ ಹಲ್ಲೆ ಪ್ರಕರಣ: ಎಎಸ್ಐ ವಿರುದ್ಧ ಪ್ರಕರಣ ದಾಖಲಿಸಲು ಆಗ್ರಹ

0
171

ಕಲಬುರಗಿ: ಹುಮನಾಬಾದ್ ನಲ್ಲಿ ವಿನಾಕಾರಣ ಮಸಜೀದ್ ಇಮಾಮ್ ಮೇಲೆ ಮರಣಾಂತಿಕ ಹಲ್ಲೆ ನಡೆಸಿದ ಹುಮನಾಬಾದ್ ಎಎಸ್ಐ ಬಸವರಾಜ್ ವಿರುದ್ಧ ಎಫ್ಐಆರ್ ದಾಖಲಿಸಿ ತನಿಖೆ ನಡೆಸಬೇಕೆಂದು ಎಸ್.ಡಿ.ಪಿ.ಐ ಹಾಗೂ ಪಾಪ್ಯೂಲರ್  ಫ್ರಂಟ್ ಆಫ್ ಇಂಡಿಯಾದ ಸಂಘಟನೆಯ ನೇತೃತ್ವದಲ್ಲಿ ಇಂದು ಕಲಬುರಗಿ ಉತ್ತರ ವಲಯ ವಿಭಾಗದ ಐಜಿಪಿ ಅವರ ಕಚೇರಿಗೆ ಭೇಟಿ ನೀಡಿ ಮನವಿ ಸಲ್ಲಿಸಿದರು.

ಘಟನೆ ನಡೆದ 3 ದಿನ ಕಳೆದರೂ ಇದುವರೆಗೆ ಹಲ್ಲೆ ನಡೆಸಿದ ಪೊಲೀಸ್ ಅಧಿಕಾರಿ ವಿರುದ್ಧ ಎಫ್ಐಆರ್ ದಾಖಲಾಗಿಲ್ಲ. ಸಂತ್ರಸ್ತೆಯ ಹೇಳಿಕೆ ಪಡೆಯಲು ಹುಮ್ನಾಬಾದ್ ಪೊಲೀಸರು ವಿಳಂಬ ಮಾಡುತ್ತಿರುವುದು ಖಂಡನಿಯ, ಎಎಸ್ಐ ಅವರಿಗೆ ಅಮಾನತು ಪರಿಹಾರವಲ್ಲ, ಪ್ರಕರಣ ದಾಖಲಿಸಿ ಶಿಕ್ಷೆಗೆ ಗುರಿಪಡಿಸಬೇಕೆಂದು ಅವರು ಆಗ್ರಹಿಸಿದ್ದಾರೆ.

Contact Your\'s Advertisement; 9902492681

ಈ ಸಂದರ್ಭದಲ್ಲಿ ಇಮಾಮ್ ಶೇಖ್ ನಸೀರುದ್ದೀನ್, ಎ.ಎಸ್.ಡಿ.ಪಿ.ಐ ರಾಜ್ಯ ನಾಯಕರಾದ ಅಬ್ದುಲ್ ರಹೀಮ್ ಪಟೇಲ್, ಪಾಪ್ಯೂಲರ್  ಫ್ರಂಟ್ ಆಫ್ ಇಂಡಿಯಾದ ಖಜಾಂಚಿ ಶಾಹಿದ್ ನಸೀರ್ ಹುಮ್ನಾಬಾದ್ ಜಾಮಿಯಾ ಮಸೀದಿ ಇಮಾಮ್ ಹಫೀಜ್ ಶೈಕ್ ಮೆಹಬೂಬ್ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here