ಕಲಬುರಗಿ: ಶಿಕ್ಷಕರ ನೇಮಕಾತಿಯಲ್ಲಿ ಇಂಜಿನಿಯರಿಂಗ್ ಮತ್ತು ಡಿಪ್ಲೊಮಾ ಅಭ್ಯಾರ್ಥಿಗಳಿಗೆ ಶಿಕ್ಷಕರ ಹುದ್ದೆಗೆ ಆಯ್ಕೆ ಮಾಡುವ ಸರಕಾರದ ಆದೇಶ ವಾಪಸ್ ಪಡೆದು, ಬಿ.ಎ ಮತ್ತು ಬಿ.ಎಸ್ ಪದವಿಧರರನ್ನು ಮಾತ್ರ ನೇಮಕ ಮಾಡಬೇಕೆಂದು ಈಶಾನ್ಯ ಶಿಕ್ಷಕರ ಸಂಘದ ವೇದಿಯ ಅಧ್ಯಕ್ಷರಾದ ಎಂ.ಬಿ ಅಂಬಲಗಿ ಶಿಕ್ಷಣ ಸಚಿವರಿಗೆ ಆಗ್ರಹಿಸಿದ್ದಾರೆ.
ಇಂದು ಮಾತನಾಡಿದ ಅವರು ಶಿಕ್ಷಣ ಸಚಿವರಾದ ಸುರೇಶ್ ಕುಮಾರ ಅವರು ಯಾವುದೇ ಕಾರಣಕ್ಕೂ ಶಿಕ್ಷಕರ ನೇಮಕಾತಿಯಲ್ಲಿ ಶಿಕ್ಷಕರ ಪದವಿಧರರನ್ನು ಹೊರತು ಪಡಿಸಿ ಬೇರೆ ಪದವಿಧರರಿಗೆ ನೇಮಕ ಮಾಡುವುದಿಲ್ಲ ಎಂದು ಹೇಳಿದರು. ಆದರೆ ಶಿಕ್ಷಕರ ನೇಮಕಾತಿಯಲ್ಲಿ ಇಂಜನಿಯರಿಂಗ್ ಮತ್ತು ಡಿಪ್ಲೊಮಾ ಪದವಿಧರರಿಗೆ ಶಿಕ್ಷಕರಾಗಿ ನೇಮಕ ಮಾಡಿಕೊಳ್ಳಲು ಮುಂದಾಗುತ್ತಿರುವುದು ಖಂಡನೀಯವಾಗಿದೆ ಎಂದರು.
ಸಚಿವರ ನಿರ್ಧಾರದಿಂದ ಲಕ್ಷಾಂತರ ಶಿಕ್ಷಕ ಪದವಿಧರ ಅಭ್ಯಾರ್ಥಿಗಳಿಗೆ ಅನ್ಯಾಯ ಉಂಟಾಗುತ್ತಿದೆ ಎಂದು ತಿಳಿಸಿದ್ದರು. ಅದೇ ರೀತಿಯಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಹಲವು ರೀತಿಯ ಬದಲಾವಣೆಗಳು ಮಾಡಬೇಕೆಂದು ಈ ಸಂದರ್ಭದಲ್ಲಿ ಒತ್ತಾಯಿಸಿದರು.