ಕಲಬುರಗಿ: ಶ್ರೀ ಜಗದ್ಗುರು ಪಂಚಪೀಠಾಧೀಶ್ವರರು, ಶ್ರೀ ಜಗದ್ಗುರು ವಿರಕ್ತ ಮಠಾಧೀಶರರು, ಶಿವಾಚಾರ್ಯರು, ಹರ-ಗುರು ಚರಮೂರ್ತಿಗಳು, ವೀರಶೈವ ಲಿಂಗಾಯತ ಸಮುದಾಯದ ಎಲ್ಲಾ ಸದ್ಭಕ್ತರಿಗೆ ಆದೇಶಿಸಿ ಇದೇ ಏಪ್ರಿಲ್ 13 ರಂದು ಸಂಜೆ 7 ಗಂಟೆಗೆ ನಿಮ್ಮ ನಿಮ್ಮ ಮನೆಯಲ್ಲಿಯೇ/ಮಠದಲ್ಲಿಯೇ ಸಾಮೂಹಿಕ ಇಷ್ಟಲಿಂಗ ಪೂಜೆಯನ್ನು ಮಾಡುವುದರೊಂದಿಗೆ ಕೊರೊನಾ ವೈರಸ್ ತಡೆಗಟ್ಟುವಲ್ಲಿ ಭಗವಂತನನ್ನು ಪ್ರಾರ್ಥಿಸಲು ಇಡೀ ಸಮುದಾಯಕ್ಕೆ ತಿಳಿಸಿದ್ದಾರೆಂದು ಅಖಿಲ ಭಾರತ ವೀರಶೈವ ಮಹಾಸಭಾ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಶಾಂತ್ ರೆಡ್ಡಿ ಪೆಟ್ ಸಿರೂರ್ ತಿಳಿ
ಶ್ರೀಗಳವರ ಸೂಚನೆಯಂತೆ ಸಮಸ್ತ ವೀರಶೈವ-ಲಿಂಗಾಯತ ಸಮುದಾಯದವರೆಲ್ಲ ಸಾಮೂಹಿಕವಾಗಿ ಏಪ್ರಿಲ್ 13ರಂದು ಸಂಜೆ 7 ಗಂಟೆಗೆ ಇಷ್ಟಲಿಂಗ ಪೂಜೆಮಾಡುವುದರ ಮೂಲಕ ಕೊರೊನಾ ವೈರಸ್ ತಡೆಗಟ್ಟಲು ಭಗವಂತನನ್ನು ಪ್ರಾರ್ಥಿಸೋಣ ಎಂದು ಕರೆ ನೀಡಿದ್ದಾರೆ.