ಕಲಬುರಗಿ: ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ 129 ನೆಯ ಜನ್ಮ ದಿನಾಚರಣೆಯ ಈ ಸಂದರ್ಭದಲ್ಲಿ 40 ವರ್ಷದ ಹಳೆಯ ಫೋಟೋ ಮಾಜಿ ಸಚಿವ, ಶಾಸಕ ಪ್ರಿಯಾಂಕ್ ಖರ್ಗೆ ಶೇರ್ ಮಾಡಿದ್ದಾರೆ.
ಸಧ್ಯ ವಿಧಾನ ಸೌಧದ ಮುಂದೆ ಪ್ರತಿಷ್ಠಾಪಿಸಲಾಗಿರುವ ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ ಅವರ ಪ್ರತಿಮೆ ನಿರ್ಮಾಣ ಹಂತದ ಪರಿಶೀಲನೆಗಾಗಿ ಕಾಂಗ್ರೇಸ್ ನಾಯಕರಾದ ಹಿರಿಯ ಮುತ್ಸದ್ದಿ ಹಾಗೂ ಮಾಜಿ ಕೇಂದ್ರ ಸಚಿವರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ಮತ್ತೋರ್ವ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಎನ್. ಧರ್ಮಸಿಂಗ್ ಅವರು 40 ವರ್ಷಗಳ ಹಿಂದೆ ಮುಂಬೈಗೆ ತೆರಳಿದಾಗ ತೆಗೆದ ಅಪರೂಪದ ಚಿತ್ರವನ್ನು ಶಾಸಕರು ತಮ್ಮ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.
Found this 4 decade old pic of Sri @kharge & Sri Dharam Singh. They had gone to Mumbai to check on the progress of #BabasahebAmbedkar Statue that was to be installed in front of Vidhana Soudha. This statue now stands in front of High Court/Vidhana Soudha#AmbedkarJayanti2020 pic.twitter.com/p13u7NKa5z
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) April 14, 2020