ಜಯ ಕರ್ನಾಟಕ ಸಂಘಟನೆಯಿಂದ ಜನಪರ ಕಾರ್ಯ; ಚೆನ್ನಬಸವ

0
16

ಯಾದಗಿರಿ: ಕೊರೋನಾ ಬೀಗಮುದ್ರೆ ಕಾರಣ ದೇಶದಲ್ಲಿ ಬಡ ಜನರು ಸಂಕಷ್ಟದಲ್ಲಿದ್ದಾಗ ಅವರಿಗೆ ನಿತ್ಯ ಅನ್ನದಾಸೋಹ ನಡೆಸುತ್ತಿರುವ ಕಾರ್ಯ ಇತರರಿಗೆ ಮಾದರಿಯಾಗಿದೆ ಎಂದು ಪ್ರಥಮ ದರ್ಜೆ ಗುತ್ತಿಗೆದಾರರಾದ ಹನುಮೇಗೌಡ ಬೀರನಕಲ್ ಅಭಿಪ್ರಾಯಪಟ್ಟರು.

ಅವರು ಜಯ ಕರ್ನಾಟಕ ಸಂಘಟನೆಯಿಂದ ನಡೆಸುತ್ತಿರುವ ಅನ್ನದಾಸೋಹ ಕಾರ್ಯಕ್ರಮದ ೧೫ನೇ ದಿನದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿ ದೇಶದಲ್ಲಿ ಕೊರೋನಾ ರೋಗದಿಂದ ಭಯಗೊಂಡು ಹೊರಬರಲು ಹಿಂದೇಟು ಹಾಕುತ್ತಿರುವ ಸಂದರ್ಭದಲ್ಲಿ ಜಯ ಕರ್ನಾಟಕ ಸಂಘಟನೆಯಿಂದ ಕಳೆದ ೧೫ ದಿನಗಳಿಂದ ಅನ್ನದಾಸೋಹ ನಡೆಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು. ಚಾಲನೆ ನೀಡಿದ ಸಮಾಜ ಕಲ್ಯಾಣ ಅಧಿಕಾರಿ ಚೆನ್ನಬಸವ ಅವರು ಮಾತನಾಡಿ ಜಯ ಕರ್ನಾಟಕ ಸಂಘಟನೆ ಕಾರ್ಯ ಜಿಲ್ಲೆಯಲ್ಲಿಯೇ ಮಾದರಿಯಾಗಿದೆ ಎಂದು
ಶ್ಲಾಘಿಸಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾ ಮಹಿಳಾ ಅಧ್ಯಕ್ಷೆ ಶ್ರೀಮತಿ ನಾಗರತ್ನಾ ಅನಪೂರ, ಜಯ ಕರ್ನಾಟಕ ಜಿಲ್ಲಾಧ್ಯಕ್ಷ ಬಿ.ಎನ್. ವಿಶ್ವನಾಥ ನಾಯಕ, ಪ್ರ. ಕಾರ್ಯದರ್ಶಿ ವಿಜಯ ಕುಮಾರ ಮೊಗದಂಪುರ, ಶಿವರಾಜ ಗುತ್ತೇದಾರ, ಮಾರುತಿ ಮುದ್ನಾಳ, ರಮೇಶ ಗುಮಟೆ, ನಾಗೇಶ ಗದ್ದಿಗಿ, ನಾಗರಾಜರಾಮಸಮುದ್ರ, ಸಾಬರೆಡ್ಡಿ ಶೆಟ್ಟಿಗೇರಾ, ವೆಂಕಟೇಶ ಮಿಲ್ಟ್ರಿ ಇನ್ನಿತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here