ಯಾದಗಿರಿ: ಕೊರೋನಾ ಕಾರಣ ದೇಶಾದ್ಯಂತ ಬೀಗಮುದ್ರೆ ಯಿಂದಾಗಿ ತೊಂದರೆಗೊಳಗಾಗಿರುವ ಬಡ ಕೂಲಿಕಾರರಿಗೆ ಅಗತ್ಯ ಸೇವೆ ನೀಡುತ್ತಿರುವ ಕೊರೋನಾ ಸೈನಿಕರಿಗೆ, ಪೊಲೀಸರಿಗೆ ನಗರದ ನವನಂದಿ ಟ್ರಸ್ಟ್ ವತಿಯಿಂದ ಮಂಗಳವಾರ ಅನ್ನದಾನ ನಡೆಯಿತು.
ಕಾರ್ಯಕ್ರಮಕ್ಕೆ ಬಿಜೆಪಿ ಯುವ ಮುಖಂಡ ಮಹೇಶ ರೆಡ್ಡಿ ಮುದ್ನಾಳ ಹೇಮರೆಡ್ಡಿ ಮಲ್ಲಮ್ಮ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ರುದ್ರಗೌಡ ಪಾಟೀಲ್ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪತ್ರಕರ್ತ ಲಕ್ಷ್ಮೀಕಾಂತ ಕುಲಕರ್ಣಿ, ದೇಶ ಸಂಕಷ್ಟ ಪರಿಸ್ಥಿತಿ ಎದುರಿಸುತ್ತಿರುವ ಸಮಯದಲ್ಲಿ ಕಡುಬಡವರಿಗೆ ಅನ್ನದಾನ ಮಾಡುವಂತಹ ಶ್ರೇಷ್ಠ ಕಾರ್ಯ ಕೈಗೊಂಡ ನವನಂದಿ ಶಿಕ್ಷಣ ಸಂಸ್ಥೆ ಕಾರ್ಯ ಇತರರಿಗೆ ಮಾದರಿಯಾಗಿದೆ ಎಂದು ಶ್ಲಾಘಿಸಿದರು.
ಅನ್ನದಾನದ ಜೊತೆಗೆ ಜನರಿಗೆ ಕೊರೋನಾ ತಡೆಯ ಕುರಿತು ಜಾಗೃತಿ ಮೂಡಿಸಬೇಕು, ಮನೆಯಲ್ಲಿಯೇ ಇರಬೇಕು, ಗಂಟೆಗೊಮ್ಮೆ ಕೈತೊಳೆಯಬೇಕು ಸ್ವಚ್ಛತೆ ಕಾಪಾಡಬೇಕೆಂದು ಅವರು ತಿಳಿವಳಿಕೆ ನೀಡಿದರು. ಮಂಗಳವಾರದ ಅನ್ನದಾನಕ್ಕೆ ದವಸ ಧಾನ್ಯ ದೇಣಿಗೆ ನೀಡಿದ ಶಾಲಾ ಪಾಲಕರಾದ ವಿಷ್ಣು ವಿನೋದಕುಮಾರ ಬೀರಾದಾರ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಯಿತು.
ಶಿವು ಸಾಹುಕಾರ, ಚೆನ್ನಾರೆಡ್ಡಿ ಅಬ್ಬೆತುಮಕೂರು, ದೈಹಿಕ ಶಿಕ್ಷಕ ಮಲ್ಲೇಶ ನಾಯಕ, ನರಸಪ್ಪ ಬೆಟ್ಟದ, ಕೈಲಾಸ ಅನವಾರ, ಗಿರೀಶ ಖಾನಾಪೂರ, ನರಸಪ್ಪ ನಾಯಕ ಬುಡಯಿನೋರ್, ವಿಜಯ ಮೊರಡೆ, ನರೇಶ ಅನವಾರ, ಆನಂದ, ಸಿದ್ದುಗೌಡ ಇನ್ನಿತರರು ಇದ್ದರು.