ಚಿತ್ತಾಪುರ: ಪಟ್ಟಣದಲ್ಲಿ ಕೆಲದಿನಗಳ ಹಿಂದೆ ನಡೆದ ಸಭೆಯಲ್ಲಿ ಸಂಸದರಾದ ಡಾ ಉಮೇಶ್ ಜಾದವ್ ನಮಗೆ ಯಾವುದೇ ಸೂಚನೆ ನೀಡದೆ ಪಟ್ಟಣದಲ್ಲಿ ಸಭೆ ನಡೆಸಿದರೆ ಕ್ಷೇತ್ರದ ಶಾಸಕರ ಜೊತೆ ಸಭೆ ನಡೆಸಿದರೆ ಇಲ್ಲಿಯ ಜನರ ಕುಂದು ಕೊರತೆಗಳ ಬಗ್ಗೆ ಹೇಳಬಹುದಾಗಿತ್ತು ಎಂದು ಶಾಸಕ ಪ್ರಿಯಾಂಕ ಖರ್ಗೆ ಸಭೆಯಲ್ಲಿ ಮಾತನಾಡಿರುವುದನ್ನು ಮಾಜಿ ಶಾಸಕ ವಾಲ್ಮೀಕಿ ನಾಯಕ ಪತ್ರಿಕಾಗೋಷ್ಠಿ ನಡೆಸಿ ಯಾವುದೇ ಅಭಿವೃದ್ಧಿಯ ಪರ ಮಾತನಾಡದೆ ರಾಜಕೀಯ ಪ್ರೇರಿತವಾಗಿ ಮಾತನಾಡಿ ಸಂಸದರು ಸಭೆ ನಡೆಸಲು ಯಾರ ಶಾಸಕರ ಅನುಮತಿ ಬೇಕಾಗಿಲ್ಲ ಪ್ರಿಯಾಂಕ ಖರ್ಗೆ ಅವರಿಗೆ ಅನುಭವದ ಕೊರತೆಯಿದೆ ಹೇಳಿಕೆ ನೀಡಿದರು ಆದರೆ ನಿಜಕ್ಕೂ ಮಾಜಿ ಶಾಸಕ ವಾಲ್ಮೀಕಿ ನಾಯಕಗೆ ಅನುಭವದ ಕೊರತೆ ಇದೆ ಎಂದು ಜಿಲ್ಲಾ ಪಂಚಾಯತ್ ಸದಸ್ಯ ಶಿವಾನಂದ್ ಪಾಟೀಲ್ ತಿರುಗೇಟು ನೀಡಿದರು.
ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಬುದುವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಶಾಸಕರು ಮುಖ್ಯಮಂತ್ರಿ ಪರಿಹಾರ ನಿಧಿಗೆ 2 ತಿಂಗಳ ಸಂಬಳ ದೇಣಿಗೆ ಹಾಗೂ ಕೆಪಿಸಿಸಿ ಪರಿಹಾರ ನಿಧಿಗೂ 2ಲಕ್ಷ ರೂ, ಪಟ್ಟಣದಲ್ಲಿ 15000 ಮಾಸ್ಕ್ ಗಳು, 1000 .N95 ಮಾಸ್ಕ್ ಗಳು, 50 ಕ್ಯಾನ್ ನೆಲಹಾಸು ಸ್ವಚ್ಛಗೊಳಿಸಲು ಕೆಮಿಕಲ್, 1000 ಕೆಜಿ ಬ್ಲೀಚಿಂಗ್ ಪೌಡರ್, ಪೌರಕಾರ್ಮಿಕರ ಬಳಕೆಗಾಗಿ 5000 ಹ್ಯಾಂಡ್ ಗ್ಲೌಸ್, ಕಲ್ಬುರ್ಗಿ ಜಿಲ್ಲೆಯಿಂದ ಬೆಂಗಳೂರಿಗೆ ಕೂಲಿನಾಲಿ ಮಾಡಲು ಹೋಗಿ ಲಾಕ್ ಡೌನ್ ನಲ್ಲಿ ಸಿಕ್ಕಿಕೊಂಡ 600 ಬಡಕುಟುಂಬಗಳಿಗೆ ಆಹಾರಧಾನ್ಯ ನೀಡಿದ್ದಾರೆ. ಆದರೆ ವಾಲ್ಮೀಕಿ ನಾಯಕರ ಸೇವೆ ಏನು ಎಂದು ಪ್ರಶ್ನಿಸಿ ಮಾತನಾಡಿದರು.
ಈ ವೇಳೆಯಲ್ಲಿ ತಾಲೂಕು ಪಂಚಾಯತ್ ಅಧ್ಯಕ್ಷ ಜಗನಗೌಡ ಪಾಟೀಲ್, ಜಿಲ್ಲಾ ಪಂಚಾಯತ್ ಸದಸ್ಯ ಶಿವರುದ್ರ ಬೇಣಿ, ನರಸಯ್ಯ ಗುತ್ತೇದಾರ್, ದೇವಿಂದ್ರ ಅಣಕಲ್, ಭೀಮು ಹೋತಿನಮಡಿ, ಬಸವರಾಜ್ ಚಿಮನ್ನಳ್ಳಿ ಶಿವಯೋಗಿ ರಾವೂರ, ರವಿಸಾಗರ, ಸೇರಿದಂತೆ ಇತರರಿದ್ದರು.