ಸುರಪುರ: ಕೊರೊನಾ ಎಂಬ ಮಹಾಮಾರಿ ಜಗತ್ತನ್ನು ಕಾಡುತ್ತಿರುವುದರಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಮೇ.3 ರ ವರೆಗೆ ದೇಶದಾದ್ಯಂತ ಲಾಕ್ ಡೌನ್ ವಿಸ್ತರಣೆ ಮಾಡಿರುವುದರಿಂದ ಜನರು ಮನೆಯಲ್ಲಿಯೇ ಇದ್ದು ತಮ್ಮ ಕುಟುಂಬವನ್ನು ರಕ್ಷಿಸಿಕೊಳ್ಳಬೇಕು ಹಾಗೆ ಸರ್ಕಾರಗಳು ನಿಮ್ಮ ಆರೋಗ್ಯದ ದೃಷ್ಠಿಯಿಂದ ಕೆಲವು ಕಠಿಣ ನಿರ್ಣಯಗಳನ್ನು ತೆಗೆದುಕೊಂಡಿವೆ ಜನರು ದಯವಿಟ್ಟು ಸಹಕರಿಸಿ ವಿನಾಕಾರಣ ಹೊರಗೆ ತಿರುಗಾಡುವುದನ್ನು ಬಿಟ್ಟು ಮನೆಯಲ್ಲಿಯೆ ಇರಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಜನರಲ್ಲಿ ಮನವಿ ಮಾಡಿದರು.
ನಗರದ ತಾಲೂಕು ಪಂಚಾಯತ ಕಛೇರಿ ಸಭಾಂಗಣದಲ್ಲಿ ಆಯೋಜಿಸಿದ ಟಾಸ್ಕ ಫೆÇರ್ಸ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ತಹಶೀಲ್ದಾರ್ ನಿಂಗಣ್ಣ ಬಿರಾದರ ಅವರಿಗೆ ಕರೊನಾ ವೈರಸ್ ಕುರಿತು ತಾಲೂಕು ಆಡಳಿತದ ಕಛೇರಿಯಲ್ಲಿ ಕಂಟ್ರೋಲ್ ರೊಮ್ ತೆಗೆಂiÀಲು ಸೂಚಿಸಿದರು. ಇನ್ನು ಆರೋಗ್ಯ ಸೇತು ತಂತ್ರಾಂಶದ ಕುರಿತು ಅರಿವು ಮೂಡಿಸಲು ಅಗತ್ಯ ಕ್ರಮ ವಹಿಸಿ ಹಾಗೆ ಡೀಲರ್ ಗಳು ರೇಷನ್ ಹಂಚುವಲ್ಲಿ ಜನರಿಂದ ಹಣ ಪಡೆಯುತ್ತಿದ್ದಾರೆ ಎನ್ನುವ ಆರೋಪಗಳು ಕೇಳಿಬರುತ್ತಿವೆ ಅಧಿಕಾರಿಗಳು ಅತಂಹವರ ಪರವಾನಿಗೆಯನ್ನು ರದ್ದು ಮಾಡಿ ಇತಂಹ ಪ್ರಕರಣಗಳು ಮರುಕಳಿಸದಂತೆ ನೊಡಿಕೊಳ್ಳಬೇಕು ಹಾಗೆ ಎಲ್ಲಾ ರೇಷನ್ ಅಂಗಡಿಗಳಲ್ಲಿ ಫ್ರೀ ರೇಷನ್ ಹಂಚಲಾಗುತ್ತಿದೆ ಎಂದು ಫಲಕಗಳನ್ನು ಅಡವಳಿಸುವಂತೆ ಡೀಲರ್ ಗಳಿಗೆ ತಿಳಿಸಿ ಎಂದು ಸೂಚಿಸಿದರು.
ತಾಲೂಕಿನಲ್ಲಿ ಲಾಕ್ ಡೌನ್ ಇದ್ದರು ಸಹ ಜನರು ಹಾಗೆ ತಿರುಗಾಟ ನಡೆಸುತ್ತಿರುವುದನ್ನು ಗಮನಿಸುತ್ತಾ ಬಂದಿದ್ದೇನೆ. ಸುಖಾ ಸುಮ್ಮನೆ ತಿರಾಗುಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕಿತ್ತು ತಾಲೂಕಿನಲ್ಲಿ ಲಾಕ್ ಡೌನ್ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಅನಿಸುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು. ಪೆÇಲೀಸ ಇಲಾಖೆಯವರು ಇವುಗಳ ಗಂಭಿರತೆಯನ್ನು ಅರಿತು ಕೆಲಸವನ್ನು ಮಾಡಬೇಕು ಸುಕಾ ಸುಮ್ಮನೆ ತಿರುಗಾಡುವವರ ವಿರುದ್ಧ ಸೂಕ್ತ ಕಾನುನು ಕ್ರ ಜರುಗಿಸಿ ಎಂದು ಹೇಳಿದರು.
ಸಭೆಯಲ್ಲಿದ್ದ ಶಾಸಕ ನರಸಿಂಹ ನಾಯಕ (ರಾಜುಗೌಡ) ಮಾತನಾಡಿ,ಅಕ್ರಮ ನಡೆಸುವ ರೇಷನ್ ಅಂಗಡಿ ಯಾರದಾದರು ಕಠಿಣ ಕ್ರಮ ಕೈಗೊಳ್ಳುವ ಜೊತೆಗೆ 420 ಕೇಸ್ ಹಾಕಲಾಗುವುದು.ಈಗಾಗಲೆ ರಾಜುಗೌಡ ಟೀಂ ಎಲ್ಲೆಡೆ ಬಡ ಜನರಿಗೆ ಆಹಾರ ಮತ್ತು ಅಗತ್ಯ ವಸ್ತುಗಳ ವಿತರಿಸುತ್ತಿದೆ.ಅಲ್ಲದೆ ಸುರಪುರ ಮತ್ತು ಹುಣಸಗಿ ತಾಲೂಕಿನ ಯಾವುದೆ ಗ್ರಾಮದಲ್ಲಿ ಕುಡಿಯುವ ನೀರಿನ ತೊಂದರೆ ಆಗದಂತೆ ಕ್ರಮವಹಿಸಲಾಗಿದೆ ಎಂದು ಸಚಿವರಿಗೆ ವಿವಿರಣೆ ನೀಡಿದರು.
ಇದೇ ಸಂದರ್ಭದಲ್ಲಿ ಸಚಿವರು ತಾಲುಕಿನಲ್ಲಿ ಹೊರ ರಾಜ್ಯ,ದೇಶ ಹಾಗೂ ಜಿಲ್ಲೆಯಿಂದ ಬಂದಿರುವ ಜನರಿಗೆ ಎನೆನೂ ಕ್ರಮ ತೆಗೆದುಕೊಂಡಿರುವ ಕುರಿತು ಆರೋಗ್ಯ ಅಧಿಕಾರಿಗಳಿಂದ ಹಾಗೂ ಪೆÇಲೀಸ್ ಇಲಾಖೆ, ಜೆಸ್ಕಾಂ, ಕೃಷಿ ಇಲಾಖೆ, ಶಿಶು ಅಭಿವೃದ್ಧಿ ಇಲಾಖೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಸಭೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳಾದ ಡಿವೈಎಸ್‍ಪಿ ವೆಂಕಟೇಶ ಹುಗಿಬಂಡಿ,ಸುರಪುರ ತಹಸೀಲ್ದಾರ ನಿಂಗಣ್ಣ ಬಿರಾದಾರ್, ಹುಣಸಗಿ ತಹಶಿಲ್ದಾರ ವಿನಕುಮಾರ ಪಾಟೀಲ, ತಾಪಂ ಇಓ ಅಂಬ್ರೇಶ, ಆರೋಗ್ಯಾಧಿಕಾರಿ ಡಾ.ಆರ್.ವಿ.ನಾಯಕ, ಪಿಐ ಎಸ್.ಎಮ್.ಪಾಟೀಲ್, ಈರಣ್ಣ ಹಳಿಚಂಡ್, ಹಣಮಂತಪ್ಪ,ನಗರಸಭೆಯ ಎಲ್ಲಪ್ಪ ನಾಯಕ, ಸುನೀಲ್, ಅಂಬ್ರೇಶ ಗೌಡ,ಸಿಎಇಪಿಒ ಲಾಲಸಾಬ, ದೇವಿಂದ್ರ ಹೆಗಡೆ, ಸುರೇಶ ಹಚ್ಚಡ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳಿದ್ದರು.