ಕೊರೊನಾ ಕಲಿಸಿದ ಪಾಠ ಒಂದೇ, ಎರಡೇ? ಹೇಳತೀರದಷ್ಟು

1
339

ಗೃಹಿಣಿಯರಿಗೆ ಮತ್ತು ಉದ್ಯೋಗಸ್ಥ ಮಹಿಳೆಯರಿಬ್ಬರಿಗೂ ದಿನದ ೨೪ ಗಂಟೆಗಳನ್ನು ಹೇಗೆ ಯೋಜಿಸಿಕೊಳ್ಳಬೇಕೆಂದು ಯೋಚಿಸುವಂತೆ ಮಾಡಿದೆ.ಸಮಯವೇ ಸಿಗುತ್ತಿಲ್ಲವೆಂದು ಗೊಣಗುತ್ತಿರುವ ನನ್ನಂಥವರಿಗೆ ಎಷ್ಟು ಬೇಕೊ ಅಷ್ಟು ಸಮಯವಿದೆ. ಆದರೆ ಅದನ್ನು ಹೇಗೆ ಯೋಜಿಸಿಕೊಳ್ಳಬೇಕೆಂದು ತಿಳಯಬೇಕಂಬ ಪಾಠ ಕಲಿಸಿದೆ. “ಎನಗಿಂತ ಪ್ರೀಯವಾದ ವಿಷಯವುಂಟೆ”, ಎಂಬಂತೆ ನಮ್ಮ ಆರೋಗ್ಯಕ್ಕಿಂತ, ಜೀವಕ್ಕಿಂತ ಯಾವುದೂ ದೊಡ್ಡದಲ್ಲ ಎಂಬುದು ಎಲ್ಲರಿಗೂ ಮನವರಿಕೆಯಾಗಿದೆ. ಪ್ರಕೃತಿಯಮುಂದೆ ನಾವು ಎಷ್ಟು ಚಿಕ್ಕವರೆಂಬುದು ಸಾಬೀತಾಗಿದೆ. ಅದು ತನ್ನ ಸಮತೋಲನ ಕಾಯ್ದುಕೊಳ್ಳವ ತಂತ್ರಗಾರಿಕೆ ತಿಳಿದಿದೆ ಎಂಬುದನ್ನು ಸಾಬೀತುಪಡಿಸಿದೆ.

ಸಂಬಂಧಗಳ ಬೆಲೆ, ಕೂಡಿಬಾಳುವ ಕಲೆ ತಿಳಿಸಿಕೊಟ್ಟಿದೆ. ಆಡಂಭರ ಜೀವನ ಶೈಲಿಯ ಮಧ್ಯದಲ್ಲೂ ಸರಳ ಸುಂದರ ಬದುಕು ಸಾಧ್ಯವೆಂಬ ಸತ್ಯ ಮನವರಿಕೆ ಮಾಡಿಕೊಟ್ಟಿದೆ.

Contact Your\'s Advertisement; 9902492681

ಕುಟುಂಬದವರೊಂದಿಗೆ ಹೆಚ್ಚು ಸಮಯ ಕಳೆಯುವ ಮತ್ತು ಪರಿಸರ ಮಾಲಿನ್ಯ ನಿಯಂತ್ರಣಗಳೆಂಬ ಸೌಭಾಗ್ಯ ಕರೋನಾದಿಂದ ನಮಗೆಲ್ಲ ದೊರೆತಂತಾಗಿದೆ. ಕೆಲವರಿಗೆ (ಪೋಲಿಸರು,ವೈದ್ಯರು ಮುಂತಾದವರಿಗೆ) ತಮ್ಮ ಕರ್ತವ್ಯ ಮೆರೆಯಲು ಸುವರ್ಣಾವಕಾಶ ನೀಡಿದೆ. ಎಲ್ಲಕ್ಕೂ ಮಿಗಿಲಾಗಿ ಇಂದಿನ ಮಕ್ಕಳ ನಾಲಿಗೆ ಚಾಪಲ್ಯಕ್ಕೆ ಕಡಿವಾಣ, ಮದ್ಯವ್ಯಸನಿಗಳ ವ್ಯಸನಭಂಗ ನಿಜಕ್ಕೂ ಸಂತೋಷದ ವಿಷಯ. ಮನೆಯೇ ಮಾಂಗಲವೆಂಬ ಮಾತು ನಿರಂತರ ಸತ್ಯವೆಂಬ ಪಾಠ ಕಲಿಸಿದೆ.

ಡಾ. ಜ್ಯೋತಿಲತಾ ತಡಿಬಿಡಿ ಮಠ, ಯಾದಗಿರಿ

1 ಕಾಮೆಂಟ್

  1. ತುಂಬಾ ಚೆನ್ನಾಗಿದೆ ಈ ಕೊರೊನಾ ಬಂದ್ಬಿಟ್ಟು ಎಲ್ರಿಗೂ ಮನೆಯೇ ಮಂತ್ರಾಲಯ ಆಗಿದೆ
    ” ಮಹಿಳೆಯರ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು ,
    ಆದರೆ ನಮ್ಮ ದೇಶದಲ್ಲಿ ಪುರುಷರಿಗಂತು
    ಮನೆ ಸೆರೆ ಮನೆಯಾಗಿದೆ”.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here