ಸುರಪುರ: ಕೊರೊನಾ ಮಹಾಮಾರಿಯಿಂದ ಜಗತ್ತು ಪಾರಾಗಲೆಂದು ದೇವರ ಮೊರೆ ಹೋದ ತಾಲೂಕಿನ ಬೇವಿನಾಳ ಎಸ್.ಹೆಚ್ ಗ್ರಾಮದ ಯುವಕರು.೭೦ಕ್ಕೂ ಹೆಚ್ಚು ಜನ ಯುವಕರು ಸೇರಿ ಗ್ರಾಮದಲ್ಲಿನ ಎಲ್ಲಾ ದೇವರಿಗೆ ಹರಕೆ ಹೊತ್ತು ಕೃಷ್ಣಾ ನದಿಗೆ ಹೋಗಿ ಸ್ನಾನ ಮಾಡಿ,ನಂತರ ನದಿಯಿಂದ ಬಿಂದಿಗೆಯಲ್ಲಿ ನೀರನ್ನು ತಂದು ಗ್ರಾಮದಲ್ಲಿನ ಎಲ್ಲಾ ದೇವರ ಗುಡಿಗಳ ಪಾವಟಿಗೆ ಮತ್ತು ಗುಡಿಯಲ್ಲಿನ ದೇವರಿಗೆ ಗಂಗಾ ಸ್ನಾನ ಮಾಡಿಸಿ ಕೊರೊನಾ ಎಂಬ ವೈರಸ್ ಜಗತ್ತಿನಿಂದ ನಿರ್ಮೂಲನೆಯಾಗಲಿ ಎಂದು ಪ್ರಾರ್ಥಿಸಿದರು.