ಮುಸ್ಲೀಂ ಕೌನ್ಸಿಲ್ ಸಂಘದ ಕಚೇರಿಯಲ್ಲಿ ಅಂಬೇಡ್ಕರರ ೧೨೯ನೇ ಜಯಂತಿ ಆಚರಣೆ

0
42

ಸುರಪುರ: ನಗರದ ಖುರೇಶಿ ಮೊಹಲ್ಲಾದಲ್ಲಿರುವ ಮುಸ್ಲೀಂ ಕೌನ್ಸಿಲ್ ಸಂಘದ ತಾಲೂಕು ಕಚೇರಿಯಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಅವರ ೧೨೯ನೇ ಜಯಂತಿಯನ್ನು ಅಚರಿಸಲಾಯಿತು.ಬೆಳಿಗ್ಗೆ ನಡೆದ ಕಾರ್ಯಕ್ರಮದಲ್ಲಿ ಮೊದಲಿಗೆ ಬಾಬಾ ಸಾಹೇಬ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ನಮಿಸಿದರು.

ಈ ಸಂದರ್ಭದಲ್ಲಿ ಸಂಘದ ತಾಲೂಕು ಅಧ್ಯಕ್ಷ ಖಾಜಾ ಜಮೀರ್ ಖುರೇಶಿ ಮಾತನಾಡಿ, ಭಾರತ ಸ್ವಾತಂತ್ರ್ಯದ ನಂತರ ದೇಶದ ಆಡಳಿತಕ್ಕೆ ಯಾವುದೆ ಮಾರ್ಗಸೂಚಿಗಳಿಲ್ಲದ ಸಂದರ್ಭದಲ್ಲಿ ಜಗತ್ತಿನ ಅನೇಕ ರಾಷ್ಟ್ರಗಳ ಸಂವಿಧಾನ ಓದಿ ನಂತರ ಜಗತ್ತೆ ಮೆಚ್ಚುವಂತ ಮಹಾನ್ ಸಂವಿಧಾವನ್ನು ಬರೆದು ಕೊಟ್ಟ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ದೇಶದ ಪ್ರತಿಯೊಬ್ಬರು ನೆನೆಯುವುದು ಅವಶ್ಯವಾಗಿದೆ ಎಂದರು.

Contact Your\'s Advertisement; 9902492681

ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಪಟೇಲ್ ಮಾತನಾಡಿ,ದೇಶದಲ್ಲಿ ಕೊರೊನಾ ವೈರಸ್ ಭೀತಿಯಿಂದಾಗಿ ಇಮದು ಬಾಬಾ ಸಾಹೇಬರ ಜಯಂತಿಯನ್ನು ಸರಳವಾಗಿ ಆರಿಸಲಾಗುತ್ತಿದ್ದು,ನಾವೆಲ್ಲರು ಸರಕಾರದ ಆದೇಶವಾದ ಲಾಕ್‌ಡೌನ್ ಪಾಲಿಸುವ ಮೂಲಕ ಅಂಬೇಡ್ಕರರ ಜಯಂತಿಗೆ ಗೌರವ ಸಲ್ಲಿಸೋಣ ಎಂದರು. ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ರಮೀಜ್ ರಾಜಾ,ಅಂಬೇಡ್ಕರ್ ಸೇನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಾಕೀರ್ ಹುಸೇನ್,ಭಡೆಸಾ ಹರೂನ್,ಇಬ್ರಾಹಿಂ ಆಸಿಫ್ ಮಹಿಬೂಬ ಇತರರಿದ್ದರು.

ವಿವಿಧೆಡೆ ಅಂಬೇಡ್ಕರ ಜಯಂತಿ: ತಾಲೂಕಿನ ಬಿಜಾಸಪುರ ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ ಅವರ ನಾಮಫಲಕಕ್ಕೆ ಪುಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ಜಯಂತಿ ಆಚರಿಸಲಾಯಿತು.ಅದೇರೀತಿಯಾಗಿ ನಗರದ ಪರಿಶಿಷ್ಟ ಜಾತಿ ಮತ್ತು ಪಂಗಡದ ವಸತಿ ನಿಲಯದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ ಅವರ ೧೨೯ನೇ ಜಯಂತಿ ಆಚರಿಸಲಾಯಿತು.ರತ್ತಾಲ ಗ್ರಾಮದಲ್ಲಿ ಅಂಬೇಡ್ಕರರ ನಾಮಫಲಕಕ್ಕೆ ಮಾಲಾರ್ಪಣೆ ಮಾಡಿ,ಮಕ್ಕಳಿಗೆ ಸಿಹಿ ಹಂಚಿ ಜಯಂತಿ ಆಚರಿಸಲಾಯಿತು.

ದೇವಾಪುರ ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ ವೃತ್ತದಲ್ಲಿನ ನಾಮಫಲಕಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ಜಯಂತಿ ಆಚರಿಸಿದರು.ಮಂಗಳೂರು ಗ್ರಾಮದಲ್ಲಿ ಅಂಬೇಡ್ಕರರ ನಾಮಫಲಕಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ಆಚರಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here