ಓದುಗರ ವೇದಿಕೆ: ಸುಳ್ಳು ಸುದ್ದಿ ಪ್ರಸಾರ ಮಾಡುವ ಮಾಧ್ಯಮಗಳ ಮೇಲೆ ಕ್ರಮ ಅಗತ್ಯ

0
71

ಕನ್ನಡದ ಸುದ್ದಿ ಮಾಧ್ಯಮವೊಂದು ಹಲಿಕ್ಯಾಪಟರ್ ಮುಖಾಂತರ ಜನರಿಗೆ ಹಣದ ಸುರಿಮಳೆ ಸುರಿಸಲ್ಲಿದಾರೆಂದು ಸುಳ್ಳು ಸುದ್ದಿ ಪ್ರಕಟೀಸಿರುವುದು ಖಂಡನೀಯವಾಗಿದೆ ಈಗಾಗಲೇ ಲಾಕ್ ಡೌನ್ ದಿಂದ ಕೆಲಸ ಕಾರ್ಯ ಇಲ್ಲದೆ ಕೈಯಲ್ಲಿ ಮೂರು ಕಾಸ ಇಲ್ಲದೆ ಖಾಲಿ ಜೇಬಿನಲ್ಲಿ ಸರ್ಕಾರದ ಕಡೆಗೆ ಮುಖ ಮಾಡುತ್ತಿರುವ ಜನರು.

ಸರ್ಕಾರದಿಂದ ಏನಾದರು ಸೌಲಭ್ಯಗಳು ನೀಡುತಾರೆಂದು ನಿರಿಕ್ಷೇಯಲ್ಲಿ ಕಾದು ಕುಳಿತ್ತಿದ್ದಾರೆ. ಇದರ ಮದ್ಯೆದಲ್ಲಿ ಮಾಧ್ಯಮವು ಜನರಿಗೆ ಸರ್ಕಾರವು ಹೇಪ್ಯಾಡ್ ನಿಂದ ದುಡ್ಡು ಸುರಿಯುತಾರೆಂದು ಸುಳ್ಳು ವರದಿ ಪ್ರಸಾರ ಮಾಡಿ ಜನರಿಗೆ ದಾರಿ ತಪ್ಪಿಸುವ ಕೆಲಸ ಮಾಡುವ ಮಾಧ್ಯಮದ ವಿರುಧ ಕಠಿಣ ಕ್ರಮ ಕೈಗೋಳಬೇಕಾಗಿದೆ.

Contact Your\'s Advertisement; 9902492681

ಇಂತಹ ಸುಳ್ಳು ಅಶ್ವಾಸನೆ ನೀಡುವ ಮಾಧ್ಯಮದಿಂದ ಜನರು ಕಾಣದ ದಾರಿಗೆ ಹೋಗುವಂತೆ ಆಗುತ್ತದೆ. ಈ ಹಿಂದೆಯೂ ಪ್ರತಿಷ್ಠಿತ ಕನ್ನಡ ಪತ್ರಿಕೆಯೊಂದು ಸತ್ತವರು ಒಂದೆ ಸಮುದಾಯದವರೆಂದು ಧರ್ಮ ಒಡೆಯುವ  ಕೋಮುವಾದಂತಹ ವರದಿ ಪ್ರಕಟಿಸಿತು.

ಇತ್ತೀಚಿಗೆ ಮಾಧ್ಯಮಗಳು ಜನರಿಗಾಗಿ ಸಮಾಜಕ್ಕಾಗಿ ದುಡಿಯುತ್ತಿಲ್ಲ. ಸಮಾಜದ ವಿರುದ್ಧ ದಿಕ್ಕಿನಲ್ಲಿ ವರದಿ ಪ್ರಕಟಿಸಿ ಕಲಹ ಗಲಭೆಗಳು ಸೃಷ್ಠಿ ಮಾಡುತ್ತೀವೆ. ಇಂತಹ ನೀಚ ಕೃತ್ಯ ವೇಸಗುವ ಮಾಧ್ಯಮಗಳು ಸಮಾಜಕ್ಕೆ ಧಕ್ಕೆ ತರುತ್ತೀವೆ. ಸರಕಾರ ಶೀಘ್ರ ಇಂತಹ ಮಾಧ್ಯಮಗಳ ವಿರುದ್ಧ ಕಠಿಣ ಕ್ರಮ ಕೈಗೊಂಡು ತಪ್ಪಿತಸ್ಥರಿಗೆ ಶಿಕ್ಷೆ ನೀಡಿ ಕೋಮುವಾದ ಸೃಷ್ಠಿ ಮಾಡುವ ಮಾಧ್ಯಮಗಳನ್ನು ಬ್ಯಾನ್ ಮಾಡಬೇಕಾಗಿದೆ.

ಸಂತೋಷ ಜಾಬೀನ್ ಸುಲೇಪೇಟ

ಸಾಮಾಜಿಕ ಚಿಂತಕ ಹಾಗೂ ಹೋರಾಟಗಾರ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here