ಶಹಾಬಾದ : ರಾಮನವಮಿಯನ್ನು ಶ್ರೀರಾಮನನ್ನು ಪೂಜಿಸಲು ಅತ್ಯುತ್ತಮ ದಿನವಾಗಿದೆ. ರಾಮನವಮಿ ಹಬ್ಬವು ಹಿಂದೂ ಧರ್ಮದ ಜನರಿಗೆ ಬಹಳ ವಿಶೇಷವಾದದ್ದು, ಯುಗಾದಿಯ ಎಂಟು ದಿನಗಳ ನಂತರ ಚೈತ್ರ ಮಾಸದ ಶುಕ್ಲ ಪಕ್ಷದಲ್ಲಿ ಪ್ರತಿ ವರ್ಷ ಆಚರಿಸುತ್ತಿದ್ದು, ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಆ ದಿನ ಸರಳವಾಗಿ ಆಚರಿಸದ್ದವೆ ಎಂದು ಉದ್ಯಮಿ ನರೇಂದ್ರ ವರ್ಮಾ ಹೇಳಿದರು.
ಅವರು ನಗರದ ಶ್ರೀರಾಮ ನವಮಿ ಉತ್ಸವ ಸಮಿತಿ ವತಿಯಿಂದ ಆಯೋಜಿಸಲಾದ ಶೋಭಾಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಶ್ರೀ ಶರಣಬಸವೇಶ್ವರ ದೇವಸ್ಥಾನದಿಂದ ಶ್ರೀರಾಮನ ಪ್ರತಿಮೆಗೆ ರಾವೂರಿನ ಸಿದ್ಧಲಿಂಗೇಶ್ವರ ಮಠದ ಪೂಜ್ಯರಾದ ಸಿದ್ದಲಿಂಗ ಮಹಾಸ್ವಾಮಿಗಳು ಪೂಜೆ ಸಲ್ಲಿಸಿ ಮೆರವಣಿಗೆ ಚಾಲನೆ ನೀಡಿ ದರು.
ಶೋಭಾ ಯಾತ್ರೆ ರೈಲ್ವೆ ನಿಲ್ದಾಣ, ಮಜೀದ ಚೌಕ್, ಮತ್ತು ಶ್ರೀರಾಮ ಚೌಕ, ವಿ.ಪಿ.ಚೌಕ್ ಮೂಲಕ ಮೆರವಣಿಗೆ ಮಾಡಿ ಭಾರತ ಚೌಕ್ ನಲ್ಲಿ ಸಮರೂಪ ಗೊಳಿಸುವ ಮೂಲಕ ರಾಮಭಕ್ತರು ಸಾವಿರಾರು ಸಂಖ್ಯೆಯಲ್ಲಿ ಸೇರಿ ಅದ್ದೂರಿ ಮತ್ತು ಸಂಭ್ರಮದಿಂದ ಶನಿವಾರ ರಾಮನ ಪ್ರತಿಮೆಯನ್ನು ಮೆರವಣಿಗೆ ಮಾಡುವ ಮೂಲಕ ರಾಮನವಮಿ ಆಚರಿಸಿದರು.
ಸುಡುಬಿಸಿಲು ರಾಮ ಭಕ್ತರಿಗೆ ತಟ್ಟಲಿಲ್ಲ, ಮತ್ತು ಆರ್ಭಟಿಸಿದ ಡಿಜೆ ಶಬ್ದ ಕೂಡ ಲೆಕ್ಕಿಸದೆ ರಾಮನನ್ನು ನೆನೆಯುತ್ತಾ ಕುಣಿದು ಕುಪ್ಪಳಿಸಿ ಸಂಭ್ರಮಿಸಿದ ಸಾವಿರಾರು ಹಿಂದು ಭಕ್ತರು.
ಈ ಸಂದರ್ಭದಲ್ಲಿ ಉದ್ಯಮಿ ನರೇಂದ್ರ ವರ್ಮಾ, ಅಣವೀರ ಇಂಗಿನಶೆಟ್ಟಿ, ದಿವ್ಯಾ ಹಾಗರಗಿ, ಬಸವರಾಜ ಬಿರಾದಾರ, ಅರುಣಕುಮಾರ ಪಟ್ಟಣಕರ, ರವಿ ರಾಠೋಡ,ಬಸವರಾಜ ಸಾತಿಹಾಳ, ಸಿದ್ರಾಮ ಕುಸಾಳೆ, ದೇವದಾಸ ಜಾಧವ, ದಿನೇಶ್ ಗೌಳಿ, ಮಹಾದೇವ ಗೊಬ್ಬುರಕರ, ದತ್ತಾ ಪಂಡ, ರಾಮು ಕುಸಾಳೆ ಸಿರಿದಂತೆ ಸಾವಿರಾರು ರಾಮಭಕ್ತರು ಪಾಲ್ಗೊಂಡಿದ್ದರು.