ಯಡ್ರಾಮಿ: ಪಟ್ಟಣದಲ್ಲಿ ಧರ್ಮಸಿಂಗ್ ಫೌಂಡೇಶನ್ ವತಿಯಿಂದ ಬಡವರಿಗೆ ಮತ್ತು ನಿರ್ಗತಿಕರಿಗೆಆಹಾರವನ್ನು ತಯಾರಿಸಿ ವಿತರಿಸಲಾಯಿತು.
ಈ ವೇಳೆ ಮಾತನಾಡಿದಕಾಂಗ್ರೆಸ್ಯುವ ಮುಖಂಡ ಮಲ್ಹಾರಾವಕುಲಕರ್ಣಿ, ಲಾಕ್ಡೌನ್ದಿಂದತೀವ್ರ ಸಂಕಷ್ಟಕ್ಕೀಡಾದ ಕುಟುಂಬಗಳಿಗೆ ಧರ್ಮಸಿಂಗ್ ಫೌಂಡೇಶನ್ ವತಿಯಿಂದ ನಿರಂತರವಾಗಿ ಆಹಾರವನ್ನು ತಯಾರಿಸಿ ನೀಡಲಾಗುತ್ತಿದೆ. ಇಡೀ ತಾಲೂಕಿನಾದ್ಯಂತ ಇರುವ ನಿರ್ಗತಿಕರಿಗೆ ಧರ್ಮಸಿಂಗ್ ಫೌಂಡೇಶನ್ ವತಿಯಿಂದ ಆಹಾರವನ್ನು ತಯಾರಿಸಿ ಹಂಚಲಾಗುತ್ತಿದೆ.
ಬಡವರುತಮ್ಮ ಹೊಟ್ಟೆಯನ್ನು ತುಂಬಿಸಿಕೊಳ್ಳುವುದು ಕಷ್ಟವಾಗುತ್ತಿದೆ ಎಂದು ಅರಿತು ಇದನ್ನು ಪ್ರಾರಂಭಿಸಲಾಗಿದೆ. ತಾಲೂಕಿನಲ್ಲಿಯೂ ಬಡವರು, ನಿರ್ಗತಿಕರು ಸಾಕಷ್ಟು ಜನರುಇರುವುದರಿಂದಅಂತಹ ಕುಟುಂಬಗಳ ಮನೆಗೆ ಹೋಗಿ ಆಹಾರವನ್ನು ವಿತರಿಸಲಾಗುತ್ತಿದೆ. ಗುಡಿಸಲುವಾಸಿಗಳು ಹೆಚ್ಚಿರುವ ಪ್ರದೇಶಗಳಾದ ಪಟ್ಟಣದ ಚಿನ್ನಮಡ್ಡಿ, ವಿಶ್ವರಾಧ್ಯಗುಡಿಯ ಹತ್ತಿರವಿರುವ ಬಡವರಿಗೆ ಆಹಾರವನ್ನು ವಿತರಣಿ ಮಾಡುವುದು ಅವರ ಕಷ್ಟದಲ್ಲಿ ನಾವು ಭಾಗಿಯಾಗುತ್ತೇವೆ ಎಂಬ ಸಂದೇಶ ನೀಡಲಾಗುತ್ತಿದೆಎಂದರು.
ಈ ಸಂದರ್ಭದಲ್ಲಿಪಿಎಲ್ಡಿ ಬ್ಯಾಂಕ್ ಮಾಜಿಅಧ್ಯಕ್ಷಅಬ್ದುಲ್ರಜಾಕ ಮನಿಯಾರ, ಮಲ್ಹಾರಾವಕುಲಕರ್ಣಿ,ಗೌರಮ್ಮ, ನಿಂಗಣ್ಣ ಸೇರಿದಂತೆಇತರರುಇದ್ದರು.