ಜೇವರ್ಗಿ: ಪಟ್ಟಣದಲ್ಲಿ ನಿರ್ಮಾಣ ಹಂತದಲ್ಲಿರುವ ಕ್ರಿಡಾಂಗಣದ ಗೋಡೆ ಕುಸಿದು ಸಾವನ್ನಪ್ಪಿದ ದಿ.ಯಲ್ಲಪ್ಪನ ಕುಟುಂಬಕ್ಕೆ ಶೀಘ್ರವೇ ಸರ್ಕಾರದ ವತಿಯಿಂದ ಪರಿಹಾರ ಒದಗಿಸಬೇಕು ಎಂದು ದಲಿತ ಸಂಘರ್ಷ ಸಮಿತಿಯ(ಕ್ರಾಂತಿಕಾರಿ) ತಾಲೂಕಾಧ್ಶಕ್ಷ ಮಹೇಶ ಕೋಕಿಲೆ ಆಗ್ರಹಿಸಿದ್ದಾರೆ.
ತಹಸೀಲ್ದಾರ್ ಸಿದ್ದರಾಯ ಬೋಸಗಿ ಅವರಿಗೆ ಮನವಿ ಸಲ್ಲಿಸಿದ ಅವರುˌಮೃತ ಯಲ್ಲಪ್ಪನ ಕುಟುಂಬದ ಒಬ್ಬ ಸದಸ್ಯರಿಗೆ ಸರ್ಕಾರಿ ಕೆಲಸ ಕೊಡಬೇಕು. ಕಳಪೆ ಮಟ್ಟದ ಕಾಮಗಾರಿಗೆ ಸಂಬಂಧಿಸಿದ ಅಧಿಕಾರಿಗಳಿಗೆ ತಕ್ಷಣ ವಜಾಗೊಳಿಸಿ ಹಾಗೂ ಇಬ್ಬರ ಗುತ್ತಿಗೆದಾರರ ಲೈಸೆನ್ಸ್ ರದ್ದ ಪಡಿಸಬೇಕು. ನಿರ್ಲಕ್ಷ್ಯತನ ತೋರಿದರೆ ಕಾನೂನಿನ ಉಗ್ರ ಹೋರಾಟ ಮಾಡಲಾಗುವುದು ಮನವಿ ಮಾಡಿದರು. ಈ ವೇಳೆ ಸಂಗಪ್ಪ ಹರನೂರ ಸೇರಿದಂತೆ ಇತರರು ಇದ್ದರು.