ಸುರಪುರ: ದೇಶದಲ್ಲಿ ಲಾಕ್‍ಡೌನ್ ಘೋಷಣೆಯಾದಾಗಿನಿಂದ ನಿರಂತರ ಕಾರ್ಯಾಚರಣೆ ನಡೆಸಿ ಜನತೆ ಮನೆಯಿಂದ ಹೊರ ಬರದಂತೆ ತಿಳಿಸುತ್ತಿದ್ದ ಪೊಲೀಸ್ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯವರ ಕಣ್ತಪ್ಪಿಸಿ ಹೊರಗೆ ಬಂದು ಅಲೆಯುತ್ತಿದ್ದ ಜನತೆಗೆ ಇಂದು ಪೊಲೀಸ್ ಇಲಾಖೆ ಲಾಕ್‍ಡೌನ್ ನೈಜ ದರ್ಶನ ಮಾಡಿಸಿತು.
ನಗರದಿಂದ ಹೊರ ಹೋಗುವ ಎಲ್ಲಾ ರಸ್ತೆಗಳಾದ ಹಸನಾಪುರ ಪೆಟ್ರೋಲ್ ಬಂಕ್ ರಸ್ತೆ,ಕುಂಬಾರಪೇಟೆ ವೃತ್ತ,ಕೆಂಭಾವಿ ರಸ್ತೆ,ವೆಂಕಟಾಪುರ ರಸ್ತೆ ಎಲ್ಲವುಗಳನ್ನು ಸಂಪೂರ್ಣ ಲಾಕ್‍ಡೌನ್ ಮಾಡಿ ಪೊಲೀಸ್ ಬ್ಯಾರಿಕೇಡ್‍ಗಳನ್ನು ಅಳವಡಿಸಿ ಪೊಲೀಸ್ ಸಿಬ್ಬಂದಿಯನ್ನು ನೇಮಕಗೊಳಿಸಿ ಜನತೆ ಹೊರ ಹೋಗದಂತೆ ಮತ್ತು ನಗರದ ಒಳಗೆ ಬಾರದಂತೆ ನಿರ್ಬಂಧಿಸಿದ್ದಾರೆ.ನಗರದೊಳಗೆ ಕೇವಲ ಆರೋಗ್ಯ ಸಮಸ್ಯೆಯವರನ್ನು ಚಿಕಿತ್ಸೆಗಾಗಿ ಮತ್ತು ಸರಕಾರಿ ನೌಕರರನ್ನು ಹೊರತು ಪಡಿಸಿ ಇನ್ನುಳಿದವರಿಗೆ ನಗರ ಪ್ರವೇಶವನ್ನು ನಿಷೇಧಗೊಳಿಸಿದರು.
ಎಲ್ಲಾ ರಸ್ತೆಗಳಲ್ಲಿ ಅಳವಡಿಸಲಾದ ಬ್ಯಾರಿಕೆಡ್ ವರೆಗು ಬಂದ ಜನರು ನಗರ ಪ್ರವೇಶಕ್ಕೆ ಹೊತೊರದಾರೂ ಪೊಲೀಸರು ಪ್ರವೇಶ ತಡೆದುದರಿಂದ ಕೆಲವರು ಪೊಲೀಸರೊಂದಿಗೆ ವಾಗ್ವಾದ ನಡೆಸಿದ ಘಟನೆಗಳು ಜರಗಿದವು.ಯಾವುದೇ ವಗ್ವಾದ ಮತ್ತು ಬೇರೆಯವರ ರೆಕ್ಮೆಂಡ್‍ಗಳಿಗು ಜಗ್ಗದೆ ಎಲ್ಲರನ್ನು ಮರಳಿ ಕಳುಹಿಸಿದ ಪೊಲೀಸರ ಕೆಲಸ ಜನರಲ್ಲಿ ಪ್ರಶಂಸೆ ಮೂಡಿಸದೆ.
ಇಂದಿನ ಲಾಕ್‍ಡೌನ್ ಕಟ್ಟುನಿಟ್ಟಿನ ಜಾರಿ ಕುರಿತು ಡಿವೈಎಸ್ಪಿ ವೆಂಕಟೇಶ ಹುಗಿಬಂಡಿ ಮಾತನಾಡಿ,ಇಂದಿನಿಂದ ಮೇ 3ರ ವರೆಗೆ ಇದೇ ರೀತಿಯ ಲಾಕ್‍ಡೌನ್ ವ್ಯವಸ್ಥೆ ಮುಂದು ವರೆಯಲಿದೆ.ನಾವು ಮಾಡುತ್ತಿರುವುದು ಜನತೆಯ ಸುರಕ್ಷತೆಗಾಗಿ.ಆದ್ದರಿಂದ ಜನರು ಅನಾವಶ್ಯಕವಾಗಿ ಹೊರಗೆ ಬರದೆ ನಮ್ಮ ಕೆಲಸಕ್ಕೆ ಸಹಕರಿಸಬೇಕು ಎಂದರು.
ನಗರದಲ್ಲಿಯೂ ಜನತೆ ಸುಖಾ ಸುಮ್ಮನೆ ಹೊರಗಡೆ ಬರುವುದನ್ನು ನಿಲ್ಲಿಸಬೇಕಿದೆ,ಇಲ್ಲವಾದಲ್ಲಿ ನಗರದಲ್ಲಿಯೂ ಹೊರಗಡೆ ಬಂದವರ ಬೈಕ್ ಸೀಜ್ ಮಾಡುವ ಕಾರ್ಯಾಚರಣೆ ನಿರಂತರ ಜಾರಿಯಲ್ಲಿರಲಿದೆ ಎಂದು ಜನತೆಗೆ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಪೊಲೀಸ್ ಇನ್ಸ್ಪೇಕ್ಟರ್ ಎಸ್.ಎಂ.ಪಾಟೀಲ್ ಇದ್ದರು.