ಸುರಪುರ: ಇಂದು ಕೊರೊನಾ ಎಂಬ ವೈರಸ್ ತನ್ನ ಮರಣ ಮೃದಂಗದಿಂದಾಗಿ ಜಗತ್ತೆ ನಲುಗಿಹೋಗಿದೆ.ಇಂತಹ ಸಂದರ್ಭದಲ್ಲಿ ನಮಗಾಗಿ ಹಗಲಿರಳು ಶ್ರಮಿಸುತ್ತಿರುವ ಇಲಾಖೆಗಳಿಗೆ ಎಲ್ಲರು ಕೃತಜ್ಞತೆ ಸಲ್ಲಿಸುವುದು ನಮ್ಮ ಕರ್ತವ್ಯವಾಗಿದೆ ಎಂದು ಟಿಪ್ಪು ಸುಲ್ತಾನ ಯುವಕ ಸಂಘದ ರಾಜ್ಯಾಧ್ಯಕ್ಷ ಅರ್ಷದ ದಖನಿ ಮಾತನಾಡಿದರು.
ನಗರಸಭೆ ಪೌರಾಯುಕ್ತ ಜೀವನ್ ಕುಮಾರ ಕಟ್ಟಿಮನಿಯವರನ್ನು ಸನ್ಮಾನಿಸಿ ಮಾತನಾಡಿ,ಕೊರೊನಾ ವೈರಸ್ ಎಂಬುದು ಪ್ರತಿಯೊಬ್ಬರ ಜೀವಕ್ಕೆ ಅಪಾಯದ ಗಂಟೆಯಾಗಿರುವಂತಹದ್ದು,ಇಂತಹ ಅಪಾಯದ ವೈರಸ್ ಬಗ್ಗೆ ಯಾವುದೆ ಚಿಂತೆ ಇಲ್ಲದೆ ತಮ್ಮ ಮನೆ ಮಠ,ಮಕ್ಕಳು ಬದುಕಿನ ಜೊತೆಗೆ ಜೀವದ ಹಂಗು ತೊರೆದು ಇಂದು ಪೊಲೀಸ್ ಇಲಾಖೆ,ವೈದ್ಯಕೀಯ ಇಲಾಖೆ, ನಗರಸಭೆ, ಮಾದ್ಯಮ, ಆಶಾ ಕಾರ್ಯಕರ್ತೆಯರು,ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಇನ್ನಿತರೆ ಇಲಾಖೆಯವರು ಹಗಲಿರಳು ಜನರ ರಕ್ಷಣೆಗಾಗಿ ಕೆಲಸ ಮಾಡುತ್ತಿದ್ಧಾರೆ.ಇಂತಹ ಎಲ್ಲಾ ಇಲಾಖೆಯ ಸಿಬ್ಬಂದಿಗಳಿಗೆ ನಾವೆಲ್ಲರು ಋಣಿಯಾಗಿರಬೇಕಿದೆ ಎಂದರು.
ಅಲ್ಲದೆ ಈ ಎಲ್ಲಾ ಇಲಾಖೆಯ ಮುಖ್ಯಸ್ಥರನ್ನು ಸನ್ಮಾನಿಸಿ ಗೌರವಿಸುವ ಜೊತೆಗೆ ಮಾಸ್ಕ್ ನೀಡಿ ಕೃತಜ್ಞತೆ ಸಲ್ಲಿಸಲಾಗಿದೆ ಎಂದರು.ಈ ಸಂದರ್ಭದಲ್ಲಿ ಪೌರಾಯುಕ್ತ ಜೀವನ ಕುಮಾರ ಕಟ್ಟಿಮನಿ,ಸಂಘದ ಸದಸ್ಯರಾದ ಶರ್ಮುದ್ಧೀನ್ ಖುರೇಶಿ, ವಾಜೀದ್ ನಗನೂರಿ,ಮೊಹಿನ್ ಪಗಡಿ,ಸದ್ದಾಂ ಹುಸೇನ್,ಮುಸಾ ಭಾಯಿ ಸೇರಿದಂತೆ ಅನೇಕರಿದ್ದರು.