ಸೇಡಂ: ತಾಲ್ಲೂಕಿನ ರೇಷನ್ ಕಾರ್ಡ ಇಲ್ಲದವರಿಗೆ 7 ಕೆಜಿ ಅಕ್ಕಿ ಮತ್ತು 1 ಕೆಜಿ ತೊಗರಿ ಬೇಳೆ 2000 ಆಹಾರ ಕಿಟ್ಟು ಸಹಾಯಕ ಆಯುಕ್ತರಾದ ರಮೇಶ್ ಎಸ್ ಕೋಲಾರ ಅವರಿಗೆ ಮಾಜಿ ಸಚಿವರು ಡಾ.ಶರಣಪ್ರಕಾಶ ಅರ್ ಪಾಟೀಲ್ ಅವರು ಹಸ್ತಾಂತರಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ತಾಲೋಕಿನ 1720 ಹಾಗೂ ಸೇಡಂ ಮತ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಚಿಂಚೋಳಿ ತಾಲ್ಲೂಕಿನ 180 ಜನರನ್ನು ಗುರುತಿಸಿ 2000 ಆಹಾರ ಧಾನ್ಯ ಕಿಟ್ ಗಳನ್ನು ನೀಡಲಾಗಿದೆ ಎಂದು ಹೇಳಿದರು.
“ಸಿಮೆಂಟ್ ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಎರಡು ತಿಂಗಳ ವೇತನವನ್ನು ನೀಡುವಂತೆ ಸರಕಾರ ಕಂಪನಿಗಳಿಗೆ ಅದೇಶ ಹೊರಡಿಸಬೇಕು” ಎಂದು ಹೇಳಿದರು.
ಈ ಸಂದರ್ಭದಲ್ಲಿ ಹಾಪಕಾಮ್ಸ್ ರಾಜ್ಯ ಅಧ್ಯಕ್ಷರು ಬಸವರಾಜ ಪಾಟೀಲ್ ಊಡಗಿ, ಬ್ಲಾಕ್ ಕಾಂಗ್ರೆಸ್ ಅದ್ಯಕ್ಷರು ನಾಗೇಶ್ವರ ರಾವ್ ಮಾಲಿಪಾಟೀಲ್ , ಅಬ್ದುಲ್ ಗಪೂರ್ ,ಅಬ್ದುಲ್ ಸತ್ತಾರ ನಾಡೇಪಲ್ಲಿ, ಸುದರ್ಶನ್ ರೆಡ್ಡಿ ಪಾಟೀಲ್, ಮುನ್ನಾ ಪಾಟೀಲ್, ವಿಲಾಸ್ ಗೌತಮ ನಿಡಗುಂದ,ಸಂಪತಕುಮಾರ ಭಾಂಜಿ, ಧತ್ತು ಐನಾಪುರ, ಬಸವರಾಜ ಕಾಳಗಿ ಮತ್ತು ಅನೇಕ ಕಾಂಗ್ರೆಸ್ ಕಾರ್ಯಕರ್ತರು ಇದ್ದರು.
- ಶಪೀಕ್ ಊಡಗಿ.