ಸುರಪುರ: ಇಂದು ದೇಶವೆ ಒಂದು ರೀತಿಯ ಸಂಕಷ್ಟದಲ್ಲಿದೆ ಇಂತಹ ಸಂದರ್ಭದಲ್ಲಿ ಯಾರೂ ಹೊರಗೆ ಬರದೆ ಮನೆಯಲ್ಲಿರುವ ಮೂಲಕ ಕೊರೊನಾ ಸೊಂಕು ನಿರ್ಮೂಲನೆಗೆ ಸಹಕರಿಸೋಣ ಎಂದು ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಧರ್ಮರಾಜ ಬಡಿಗೇರ ತಿಳಿಸಿದರು.
ತಾಲೂಕಿನ ಬಾದ್ಯಾಪುರ ಗ್ರಾಮದ ಅಂಗನವಾಡಿ ಕೇಂದ್ರ ೨ರಲ್ಲಿ ಹಮ್ಮಿಕೊಂಡಿದ್ದ ಗರ್ಭೀಣಿ ಮಹಿಳೆಯರಿಗೆ ಹಾಗು ಮಕ್ಕಳಿಗೆ ಪೌಷ್ಠೀಕ ಆಹಾರ ಸಾiಗ್ರಿಗಳ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿ,ಗರ್ಭೀಣಿ ಮಹಿಳೆಯರು ಮತ್ತು ಮಕ್ಕಳಿಗಾಗಿ ಸರಕಾರ ಅನೇಕ ರೀತಿಯ ಸೌಲಭ್ಯಗಳನ್ನು ನೀಡಿದೆ,ಅದರಲ್ಲಿ ಪೌಷ್ಠೀಕ ಆಹಾರ ವಿತರಣೆಯು ಒಂದಾಗಿದ್ದು,ತಾವೆಲ್ಲರು ಪೌಷ್ಠಿಕ ಆಹಾರ ಸೇವನೆಗಾಗಿ ಇಲ್ಲಿ ನೀಡುವ ಎಲ್ಲಾ ಸಾಮಾಗ್ರಿಗಳನ್ನು ಪಡೆದು ಮನೆಗಳಲ್ಲಿ ಪದಾರ್ಥ ತಯಾರಿಸಿಕೊಂಡು ಸೇವಿಸುವ ಮೂಲಕ ಇದೆಲ್ಲವನ್ನು ಸದುಪಯೋಗ ಮಾಡಿಕೊಳ್ಳುವಂತೆ ತಿಳಿಸಿದರು.
ನಂತರ ಗರ್ಭೀಣಿ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಅಕ್ಕಿ ಬೆಲ್ಲ ಶೇಂಗಾ ಬೇಳೆ ಮತ್ತಿತರೆ ಪದಾರ್ಥಗಳನ್ನು ವಿತರಿಸಲಾಯಿತು.ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಸದಸ್ಯ ದೊಡ್ಡ ಕೊತಲೆಪ್ಪ ಹಾವಿನ್,ಪಿಡಿಒ ಸತೀಶ್,ಕೃಷ್ಣಾ ಹಾವಿನ್,ಸಕ್ರೆಪ್ಪ ಕವಲ್ದಾರ್,ಮಲ್ಲಿಕಾರ್ಜುನ ಪೊಲೀಸ್ ಪಾಟೀಲ್,ಅಂಗನವಾಡಿ ಕಾರ್ಯಕರ್ತೆ ಬಸವರಾಜೇಶ್ವರಿ ಬಡಿಗೇರ,ಸಹಾಯಕಿ ಭೀಮಬಾಯಿ ಮಾನಸಗಲ್ ಸೇರಿದಂತೆ ಅನೇಕರಿದ್ದರು.