ಸುರಪುರ: ದೇಶದಲ್ಲಿ ಕೊರೊನಾ ಸೊಂಕು ನಿರ್ಮೂಲನೆಗಾಗಿ ಲಾಕ್‌ಡೌನ್ ಘೋಷಣೆಯಾಗಿದ್ದರಿಂದ ದೇಶದಾದ್ಯಂತ ಅನೇಕ ಜನರು ವಿವಿಧ ರೀತಿಯ ಕಷ್ಟಕ್ಕೆ ಸಿಲುಕಿದ್ದಾರೆ.ಅದರಂತೆ ಸುರಪುರ ನಗರದಲ್ಲಿ ಅಂತಹದ್ದೆ ಲಾಕ್‌ಡೌನ್ ಕಷ್ಟಕ್ಕೆ ಸಿಲುಕಿ ಕಳೆದ ಹತ್ತು ದಿನಗಳಿಂದ ರಸ್ತೆ ಬದಿಯಲ್ಲಿ ಹತ್ತು ದಿನದ ಕೂಸಿನೊಂದಿಗೆ ಬದುಕುತ್ತಿರುವ ಕುಟುಂಬವೊಂದರ ಕಣ್ಣೀರ ಕತೆಯಿದೆ.
ನಗರದ ಕುಂಬಾರಪೇಟೆಯಲ್ಲಿನ ತನ್ನ ಮಾವನ ಮನೆಗೆ ಬಂದಿದ್ದ ಹೈದರಾಬಾದ್‌ನ ಲಂಗಾರಹೌಸ್ ಪ್ರದೇಶದ ಶಂಕರ ಎಂಬುವವರು ತನ್ನ ಗರ್ಭೀಣಿ ಪತ್ನಿಯನ್ನು ಮಾತನಾಡಿಸಿಕೊಂಡು ಹೋಗಲು ಬಂದಿದ್ದು,ತನ್ನ ಮಾವ ಮತ್ತು ಶಂಕರ ಮದ್ಯೆ ಬಂದ ಮನಸ್ತಾಪದಿಂದಾಗಿ ಶಂಕರ ಹಾಗು ಆತನ ಗರ್ಭೀಣಿ ಪತ್ನಿ ಮತ್ತು ಆತನ ಮೂರು ಜನ ಮಕ್ಕಳನ್ನು ಅವರ ಮಾವ ಮನೆಯಿಂದ ಹೋರಗೆ ಹಾಕಿದ್ದು,ಶಂಕರ ಹೆಂಡತಿ ಮಕ್ಕಳನ್ನು ಕರೆದುಕೊಂಡು ಮನೆಯಿಂದ ಹೊರ ಬರುವ ಹೊತ್ತಿಗೆ ದೇಶದಲ್ಲಿ ಲಾಕ್‌ಡೌನ್ ಘೋಷಣೆಯಾಗಿತ್ತು,ಇದರಿಂದ ಹೈದರಾಬಾದಿಗೆ ಹೋಗಲಾಗದೆ ಇತ್ತ ಮಾವನ ಮನೆಯು ಇಲ್ಲದೆ ಶಂಕರ ಕುಟುಂಬ ಸಂಕಷ್ಟಕ್ಕೆ ಸಿಲುಕಿರುವ ಸಂದರ್ಭದಲ್ಲಿಯೆ ಶಂಕರ ಪತ್ನಿ ಭಾಗ್ಯಮ್ಮಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಅವರನ್ನು ನಗರದ ಸರಕಾರಿ ಆಸ್ಪತ್ರೆಗೆ ಕರೆದೊಯ್ದು ಹೆರಿಗೆ ಮಾಡಿಸಲಾಗಿದೆ.ಆಸ್ಪತ್ರೆಯಲ್ಲಿ ಎರಡು ದಿನ ಇಟ್ಟುಕೊಂಡಿದ್ದ ವೈದ್ಯರು ಇವರನ್ನು ಡಿಶ್ಚ್ಯಾರ್ಜ್ ಮಾಡಿ ಕಳುಹಿಸಿದ್ದಾರೆ.
ಮಾದ್ಯಮ ಒಂದರಿಂದ ಹೈದರಾಬಾದ್ ಮೂಲದ ಈ ಕುಟುಂಬ ಹತ್ತು ದಿನಗಳಿಂದ ಇಲ್ಲಿ ಇರುವುದು ಗೊತ್ತಾಗಿದ್ದು ರಾತ್ರಿಯೆ ಬಂದು ಅವರಿಗೆ ಅಗತ್ಯ ನೆರವು ನೀಡುವುದಾಗಿ ತಿಳಿಸಿದ್ದು,ಈಗ ಅಗತ್ಯ ವಸ್ತುಗಳ ಜೊತೆಗೆ ಇವರಿಗೆ ಲಾಕ್‌ಡೌನ್ ಮುಗಿಯುವ ವರೆಗೆ ಉಳಿದುಕೊಳ್ಳಲು ಅಂಗನವಾಡಿ ಕೇಂದ್ರದಲ್ಲಿ ಆಶ್ರಯ ಕಲ್ಪಿಸಲಾಗುವುದು. -ಲಾಲಸಾಬ್ ಪೀರಾಪುರ ಸಿಡಪಿಒ ಸುರಪುರ
ಇತ್ತ ಹೊಗಲು ಮನೆಯು ಇಲ್ಲ,ಹೈದರಾಬಾದ್‌ಗೆ ಹೋಗಲು ವಾಹನದ ಸೌಕರ್ಯವಿಲ್ಲ ಜೊತೆಗೆ ಲಾಕ್‌ಡೌನ್ ಕಾರಣದಿಂದ ಹೋಗಲು ಅವಕಾಶವಿಲ್ಲದ್ದರಿಂದ ನಗರದ ಹಸನಾಪುರ ಪೆಟ್ರೋಲ್ ಬಂಕ್ ಬಳಿಯ ಮುಖ್ಯ ಹೆದ್ದಾರಿ ಬದಿಯಲ್ಲಿ ಎರಡು ದಿನಗಳು ಕಳೆದ ಶಂಕರ ಕುಟುಂಬಕ್ಕೆ ಯಾರಾದರೂ ಊಟ ಕೊಟ್ಟರೆ ಊಟ,ಇಲ್ಲದಿದ್ದಲ್ಲಿ ತಣ್ಣೀರು ಬಟ್ಟೆಯೆ ಗತಿ ಎಂಬಂತಾಗಿದೆ.ಅಲ್ಲಿಂದ ಯಾರೋ ಹೇಳಿದ್ದರಿಂದ ಕುಂಬಾರಪೇಟೆ ಬಳಿಯ ವಾಟರ್ ಫೀಲ್ಟರ್ ಟ್ಯಾಂಕ್ ಹತ್ತಿರ ಬಂದು ವಾಟರ್ ಟ್ಯಾಂಕ್ ಕೆಳಗೆ ಆಶ್ರಯ ಪಡೆದಿದ್ದಾರೆ.ಈ ಕುಟುಂಬದ ಸ್ಥಿತಿಯನ್ನು ತಿಳಿದ ಟೀಂ ರಾಜುಗೌಡ ಸೇವಾ ಸಮಿತಿ ಕಳೆದ ಹತ್ತು ದಿನದಿಂದ ನಿತ್ಯವು ಅನ್ನ ನೀರಿನ ವ್ಯವಸ್ಥೆ ಮಾಡಿದೆ.
ಶಂಕರ ಕುಟುಂಬದ ಸ್ಥಿತಿಯನ್ನು ಮಹಿಳಾ ಮತ್ತು ಮಕ್ಕಳ ಅಭೀವೃಧ್ಧಿ ಇಲಾಖೆಯ ಗಮನಕ್ಕೆ ಮಾದ್ಯಮ ಒಂದರಿಂದ ಬಂದ ನಂತರ ಸಂತ್ರಸ್ತರ ಬಳಿಗೆ ಹೋದ ಸಿಡಿಪಿಒ ಲಾಲಸಾಬ್ ಪೀರಾಪುರ್ ಈ ಕುಟುಂಬಕ್ಕೆ ಬೇಕಾದ ಅಗತ್ಯ ವಸ್ತುಗಳ ನೆರವು ಕಲ್ಪಿಸಿದೆ.ಕಳೆದ ಹತ್ತು ದಿನಗಳಿಂದ ಕಷ್ಟ ಹೆದರಿಸಿದ್ದ ಶಂಕರ ಕುಟುಂಬ ಈಗ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.ಈ ಸಂದರ್ಭದಲ್ಲಿ ಕುಂಬಾರಪೇಟೆಯ ಅಂಗನವಾಡಿ ಕಾರ್ಯಕರ್ತೆ ಹಾಗು ಟೀಂ ರಾಜುಗೌಡ ಸೇವಾ ಸಮಿತಿಯ ಪರಶುರಾಮ ನಾಟೇಕಾರ್ ಇತರರಿದ್ದರು.