ವಾಡಿ ಪಿಎಸ್ಐ ವಿಜಯಕುಮಾರ್ ಬಾವಗಿಗೆ ಪುನಃ ನೇಮಕಕ್ಕೆ ಆಗ್ರಹ

0
78

ಕಲಬುರಗಿ: ವಾಡಿ ಠಾಣೆ ಪಿಎಸ್ಐ ವಿಜಯಕುಮಾರ್ ಬಾವಗಿ ಅಮಾನತು ಹಿಂಪಡೆಯುವಂತೆ ಆಗ್ರಹಿಸಿ ಇಂದು ಮಾದಿಗ ಸಮುದಾಯದ ಮುಖಂಡರಾದ ಮಲ್ಲಿಕಾರ್ಜುನ ಸೈದಾಪುರ ನೇತೃತ್ವದಲ್ಲಿ ಎಸ್ಪಿ ಯಡಾ ಮಾರ್ಟಿನ್ ಅವರಿಗೆ ಮನವಿ ಸಲ್ಲಿಸಿದರು.

ಈ ವೇಳೆಯಲ್ಲಿ ಮಾತನಾಡಿದ ಮುಖಂಡರು, ದಕ್ಷ ಪೊಲೀಸ್ ಅಧಿಕಾರಿ ವಿಜಯಕುಮಾರ್ ಬಾವಗಿ ಅವರನ್ನು ವಾಡಿ ಠಾಣೆಗೆ ಪುನಃ ನಿಯೋಜಿಸುವಂತೆ ಈ ಸಂದರ್ಭದಲ್ಲಿ ಒತ್ತಾಯಿಸಿದರು.

Contact Your\'s Advertisement; 9902492681

ಇತ್ತೀಚಿಗೆ ರಾವೂರ ಗ್ರಾಮದಲ್ಲಿ ನಡೆದ ನಿಷೇಧಾಜ್ಞೆ ಉಲ್ಲಂಘಿಸಿ ರಥೋತ್ಸವ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ಲೋಪ‌ ಆರೋಪದಡಿ ಅಮಾನತು ಮಾಡಲಾದ ಪಿಎಸ್ ಐ ಬಾವಗಿ ಅವರು ಜಾತ್ರೆ ಸಮಿತಿಯವ ಬಳಿ ಮುಚ್ಚಳಿಕೆ ಕರೆಸಿಕೊಳ್ಳುವ ಮೂಲಕ ತಮ್ಮ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ‌. ಉದ್ದೇಶ ಪೂರಕವಾಗಿ ಅವರನ್ನು ಪ್ರಕರಣದಲ್ಲಿ ಸಿಲುಕಿಸಲಾಗಿದೆ. ಪಿ.ಎಸ್.ಐ ಬಾವಗಿ ಲಾಕ್ ಡೌನ್ ಘೋಷಣೆಯಿಂದ ಕೊರೋನಾ ವಾರಿಯರನಂತೆ ಊಟ ನಿದ್ದೆ ನಿಟ್ಟು ಶ್ರಮಿಸಿದ್ದು, ಇಂತಹ ದಕ್ಷ, ನಿಷ್ಠಾವಂತ ಅಧಿಕಾರಿಯನ್ನು ಪುಸಲಾಯಿಸಿ ಬಲಿಪಶು ಮಾಡಲಾಗಿದೆ ಎಂದರು.

ಪ್ರಕರಣದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಿ, ಯಾವುದೇ ತಪ್ಪು ಮಾಡದೆ ಶಿಕ್ಷೆಗೆ ಗುರಿಯಾಗಿರುವ ಬಾವಗಿ ಅವರ ಅಮಾನತು ಆದೇಶವನ್ನು ಹಿಂಪಡೆದು ಪುನಃ ಕರ್ತವ್ಯಕ್ಕೆ ಹಾಜರು ಪಡಿಸಬೇಕೆಂದು ಯುವ ಮುಖಂಡರಾದ ಜಗದೀಶ್ ಮುಕ್ಕನಾಳ ಒತ್ತಾಯಿಸಿದರು. ಈ ಸಂದರ್ಭದಲ್ಲಿ ಅನೇಕರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here