ಕಲಬುರಗಿ: ನಗರದ ಗುಲ್ಬರ್ಗಾ ವಿಶ್ವ ವಿದ್ಯಾಲಯ ಮತ್ತು ಗ್ರಾಮೀಣ ಪೊಲಿಸ್ ಠಾಣೆಯ ವ್ಯಾಪ್ತಿ ಪ್ರದೇಶಗಳಲ್ಲಿ ಇಂದು ಎರಡು ಪೊಲೀಸ್ ಠಾಣೆಗಳಿಂದ ಕೋವಿಡ್ -19 ಸೇವರ ತಂಡ ಮತ್ತು ಪೊಲೀಸರಿಂದ ವಿವಿಧ ಬಡಾವಣೆಗಳಲ್ಲಿ ಲಾಕ್ ಡೌನ್ ನಿಯಮ ಪಾಲನೆಗಾಗಿ ಪ್ರದಕ್ಷಿಣೆ ಮಾರ್ಚ್ ನಡೆಸುವ ಮೂಲಕ ಜಾಗೃತಿ ಮೂಡಿಸಿದರು.
ಎಸಿಪಿ ಸುಬೇದಾರ ಅವರ ನೇತೃತ್ವದಲ್ಲಿ ಈ ಮಾರ್ಚ್ ನಡೆದಿದ್ದು, ನಗರದ ಹಾಗರಗಾ ಚೌಕ್ ನಲ್ಲಿ ಫ್ಯಾಲ್ಗ್ ಮಾರ್ಚ್ ನಡೆಸಿ ನಂತರ ವಿವಿ ಠಾಣೆ ಪಿ.ಎಸ್.ಐ ಹಿರೇಮಠ್ ಮತ್ತು ಗ್ರಾಮೀಣ ಪೊಲೀಸ್ ಠಾಣೆಯ ತಂಡದೊಂದಿಗೆ ಹಾಗರಗಾ ರೋಡ್ ಮಾರ್ಗವಾಗಿ, ಫೀರದೋಸ್ ನಗರ, ಅಬುಬಕರ್ ಕಾಲೋನಿ, ಉಮರ್ ಕಾಲೋನಿ, ಆಜಾದಪುರ ರೋಡ್, ಟೀಪ್ಪು ಸುಲ್ತಾನ್ ಚೌಕ್ ವರೆಗೆ ಪೊಲೀಸ್ ಮತ್ತು ಕೋವಿಡ್-19 ಸೇವಕರ ತಂಡದಿಂದ ಠಾಣೆ ವ್ಯಾಪ್ತಿಯ ಬಡಾವಣೆ ನಿವಾಸಿಗಳಿಗೆ ಸಾಮಾಜಿ ಅಂತರ, ಲಾಕ್ ಡೌನ್ ನಿಯಮ ಕಡ್ಡಾಯವಾಗಿ ಪಾಲಿಸಿ ಮತ್ತು ರಂಜಾನ್ ನಮಾಜ್ ಮನೆಯಲ್ಲೆ ಆಚರಿಸಬೇಕೆಂದು ಪ್ರದಕಿಣೆ ಮಾರ್ಚ್ ನಡೆಸಿ ಜನರಿಗೆ ಕರೆ ನೀಡಿ ಸೂಚಿಸಲಾಯಿತು.
ಈ ವೇಳೆಯಲ್ಲಿ ಪೊಲೀಸ್ ಮತ್ತು ಕೋವಿಡ್-19 ಸೇವಕರ ಪ್ರದಕ್ಷಿಣೆ ಮಾರ್ಚ್ ಗೆ ಸ್ಥಳೀಯ ಬಡವಾಣೆಯ ನಿವಾಸಿಗಳು ಹೂವುಗಳ ಸುರಿ ಮಳೆ ಸುರಿಸುವ ಮೂಲಕ ಸ್ವಾಗತಿಸಿ ಪೊಲೀಸರ ಕಾರ್ಯಕ್ಕೆ ಚಪ್ಪಾಳೆ ತಟ್ಟಿ ಅಭಿನಂದಿಸಿದರು.