ಕಲಬುರಗಿ: ವಿಶ್ವವ್ಯಾಪಿ ವಕ್ಕರಿಸಿರುವ ಕೊರೋನಾ ಮಹಾಮಾರಿಗೆ ವಿರುದ್ಧದ ಹೋರಾಟದಲ್ಲಿ ವೈದ್ಯರು, ಪೊಲೀಸರು, ಆಶಾ-ಅಂಗನವಾಡಿ ಕಾರ್ಯಕರ್ತೆಯರು ಮತ್ತು ಅಧಿಕಾರಿ ವರ್ಗ ಮುಂಚೂಣಿಯಲ್ಲಿದರೆ ಲಾಕ್ ಡೌನ್ ಪರಿಣಾಮ ಮನೆಯಲ್ಲಿರುವ ಸಾರ್ವಜನಿಕರಿಗೆ ನಿರಂತರ ವಿದ್ಯುತ್ ಪೂರೈಸುವ ಮೂಲಕ ಏಕಾಂತಕ್ಕೆ ತೆರೆ ಎಳೆಯುವ ಮೂಲಕ ಜೆಸ್ಕಾಂ ಸಂಸ್ಥೆ ಪರದೆಯ ಹಿಂದೆ ತನ್ನ ಎಂದಿನ ಜನಸೇವೆ ಮುಂದುವರೆಸಿದೆ.
ಕೋವಿಡ್-19 ಹೋರಾಟದಲ್ಲಿ ಜಿಲ್ಲಾಡಳಿತ, ಆರೋಗ್ಯ, ಪೊಲೀಸ್, ಕಂದಾಯ, ಗ್ರಾಮೀಣಾಭಿವೃದ್ಧಿ, ಸ್ಥಳೀಯ ಸಂಸ್ಥೆಗಳು ಹೀಗೆ ಅನೇಕ ಅವಶ್ಯಕ ಸೇವೆಗಳನ್ನು ಪೂರೈಸುವ ಇಲಾಖೆಗಳ ನೌಕರರ ವರ್ಗ ದಿನದ 24 ಗಂಟೆಗಳು ಕಾರ್ಯನಿರ್ವಹಿಸುವ ಮೂಲಕ ಮಾನವ ಸಂಕುಲಕ್ಕೆ ಕುತ್ತಾಗಿ ಪರಿಣಮಿಸಿರುವ ಕೊರೋನಾ ಮಹಾಮಾರಿ ಹೊಡೆದೋಡಿಸಲು ಹಗಲಿರುಳು ಶ್ರಮಿಸುತ್ತಿದ್ದು, ಇಂಧನ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳ ವೃಂದ ಆಸ್ಪತ್ರೆ ಮತ್ತು ಗೃಹಪಯೋಗಿ ಬಳಕೆಗೆ ನಿರಂತರ ವಿದ್ಯುತ್ ಪೂರೈಸುವಲ್ಲಿ ನಿರತವಾಗಿದೆ. ವಿಶೇಷವಾಗಿ ಲೈನ್‍ಮೆನ್‍ಗಳ ಕಾರ್ಯ ಪ್ರಶಂಸನೀಯವಾಗಿದೆ.
ಅಧುನಿಕ ಜೀವನದಲ್ಲಿ ವಿದ್ಯುತ್ ಇಲ್ಲ್ಲದ ಜಗತ್ತು ಮತ್ತು ಜನಜೀವನ ಊಹಿಸಲು ಅಸಾಧ್ಯ. ಸ್ಮಾರ್ಟ್‍ಫೋನ್, ಟೆಲಿವಿಷನ್, ಕಂಪ್ಯೂಟರ್, ಎ.ಸಿ., ಏರ್ ಕೂಲರ್, ಲ್ಯಾಪಟಾಪ್, ಫ್ಯಾನ್, ಫ್ರೀಜರ್ ಹೀಗೆ ವಿದ್ಯುತ್ ಚಾಲಿತ ಮುಂತಾದ ವಸ್ತುಗಳು ಮಾನವನ ದೈನಂದಿನ ಜೀವನದ ಅಗತ್ಯತೆ ತಿಳಿಸುತ್ತದೆ. ಇವುಗಳು ಇಲ್ಲದಿದ್ದರೆ ಒಂದು ನಿಮಿಷ ಕಳೆಯುವದು ತುಂಬಾ ಕಷ್ಠ. ಈ ಕಷ್ಠ ನಿವಾರಣೆಗೆ ಮೂಲ ವಿದ್ಯುತ್ ಪೂರೈಕೆ ಎಂಬುದನ್ನು ಯಾರು ಮರೆಯುವಂತಿಲ್ಲ.
ಕೋವಿಡ್-19ರ ಹಿನ್ನೆಲೆಯಲ್ಲಿ ದೇಶವೇ ಲಾಕ್‍ಡೌನ್‍ನಿಂದಾಗಿ ಜನರು ಮನೆಯಲ್ಲೇ ಉಳಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಯಾವುದೇ ಕೆಲಸ ಕಾರ್ಯಗಳಿಲ್ಲ್ಲದೇ ಮನೆಯಲ್ಲಿ ಕಾಲ ಕಳೆಯುತ್ತಿರುವ ಜನರಿಗೆ ನಿರಂತರ ವಿದ್ಯುತ್ ಪೂರೈಸಿ ಸಾರ್ವಜನಿಕರ ದೈನಂದಿನ ಜೀವನಕ್ಕೆ ಧಕ್ಕೆಯಾಗದಂತೆ ವಿದ್ಯುತ್ ಇಲಾಖೆ ಅವಿರತವಾಗಿ ಕಾರ್ಯನಿರ್ವಹಿಸುತ್ತಿದೆ.
ಎರಡು ನಿಮಿಷ ವಿದ್ಯುತ್ ಇಲ್ಲ್ಲದಿದ್ದರೂ ಜೆಸ್ಕಾಂಗೆ ಶಾಪ ಹಾಕುವ ಜನತೆಗೆ ನಿರಂತರ ವಿದ್ಯುತ್ ಪೂರೈಸಲು ವಿದ್ಯುತ್ ನೌಕರರು ತಮ್ಮ ಕುಟುಂಬವನ್ನು ಲೆಕ್ಕಿಸದೇ ಪ್ರತಿದಿನ ಮನೆಯಿಂದ ಹೊರಟು ಎಲ್ಲೆಡೆ ಮಾಸ್ಕ್ ಸೇರಿದಂತೆ ಸುರಕ್ಷತಾ ಸಾಮಾಗ್ರಿಗಳನ್ನು ಧರಿಸಿ ವಿದ್ಯುತ್ ಒದಗಿಸಲು ಶ್ರಮಿಸುತ್ತಿದ್ದಾರೆ. ಮಳೆ, ಬಿಸಿಲೆನ್ನದೇ ಕಾರ್ಯನಿರ್ವಹಿಸುವ ವಿದ್ಯುತ್ ನೌಕರರಿಗೆ ಕೊರೋನಾ ಸಂದರ್ಭದಲ್ಲಿನ ಕೆಲಸ ಸವಾಲಾಗಿ ಪರಿಣಮಿಸಿದ್ದು, ಇದನ್ನು ವರು ಸಮರ್ಥವಾಗಿ ನಿರ್ವಹಿಸುತ್ತಿದ್ದಾರೆ.
ಸರ್ಕಾರವು ಕೃಷಿ ಚಟುವಟಿಕೆ ಜರುಗಲು ಲಾಕ್‍ಡೌನ್‍ದಿಂದ ಸಡಿಲಿಕೆ ನೀಡಿದ್ದರಿಂದ ಜಮೀನುಗಳಲ್ಲಿ ಕೃಷಿ ಮತ್ತು ವಾಣಿಜ್ಯ ಬೆಳೆಗಳನ್ನು ಬೆಳೆಯಲು ನೀರೆತ್ತುವ ಯಂತ್ರಗಳಿಗೆ ವಿದ್ಯುತ್ ಪೂರೈಸದ್ದರೆ ಅನ್ನದಾತನ ಹಿಡಿಶಾಪ ತಪ್ಪಿದಲ್ಲ. ಇದನ್ನರಿತ ಜೆಸ್ಕಾಂ ಸಿಬ್ಬಂದಿಗಳು 24 ಗಂಟೆಗಳ ಸೇವೆಗೆ ಯಾವಾಗಲು ಅಣಿಯಾಗಿರುತ್ತಾರೆ.
ಇದಲ್ಲದೆ ಜೋರಾಗಿ ಗಾಳಿ, ಮಳೆ, ಗುಡುಗು, ಸಿಡಿಲು ಮಿಂಚಿನಿಂದ ಹಲವು ಕಡೆ ಗಿಡ, ಮರ, ಕಂಬಗಳು ಉರುಳಿ ಬಿದ್ದು ವಿದ್ಯುತ್ ಅಡಚಣೆ ಉಂಟಾದಾಗ ತ್ವರಿತವಾಗಿ ರಕ್ಷಣಾ ಕಾರ್ಯದಲ್ಲಿ ಭಾಗಿಯಾಗಿ ಸಾರ್ವಜನಿಕರಿಗೆ ವಿದ್ಯುತ್ ಒದಗಿಸಲು ಇವರು ಪಡುವ ಕಷ್ಠ ಹೇಳತೀರದಾಗಿದೆ. ಲಾಕ್ ಡೌನ್ ಸಂದರ್ಭದಲ್ಲಿಯೂ ತಮ್ಮೆ ಸೇವಾ ಮನೋಭಾವ ಹಾಗೇ ಉಳಿಸಿಕೊಂಡಿರವ ಲೈನ್‍ಮೆನ್‍ಗಳನ್ನು ಕಂಡರೆ ಜನ ತುಂಬಾ ಗೌರವದಿಂದ ನೋಡುತ್ತಿರುವುದು ಇವರ ಜನಸೇವೆಗೆ ಸಾಕ್ಷಿಯಾಗಿದೆ.