ಸುರಪುರ: ತಾವೆಲ್ಲ ಪ್ರಯಾಣ ಮಾಡುವವರು ಮೊದಲು ನಿಮ್ಮ ಆರೋಗ್ಯದ ಕಡೆಗೆ ಗಮನ ನೀಡಿ,ಮುಖಕ್ಕೆ ಕಡ್ಡಾಯವಾಗಿ ಮಾಸ್ಕ್ ಧರಿಸಿ ಮತ್ತು ಆಗಾಗ ನಿಮ್ಮ ಕೈಗಳನ್ನು ತೊಳೆಯುತ್ತಿರಿ ಅಥವಾ ಸ್ಯಾನಿಟೈಜರ್ ಹಚ್ಚಿಕೊಳ್ಳುವಂತೆ ತಹಸೀಲ್ದಾರ್ ನಿಂಗಣ್ಣ ಬಿರಾದಾರ್ ಜನತೆಗೆ ಅರಿವಿ ಪಾಠ ಮಾಡಿದರು.
ತಾಲೂಕಿನ ಬಂಡೊಳ್ಳಿ ಬಳಿಯಲ್ಲಿ ನಿರ್ಮಿಸಲಾದ ಕೋವಿಡ್-೧೯ ಪೊಲೀಸ್ ಚೆಕ್‌ಪೋಸ್ಟ್‌ಗೆ ಭೇಟಿ ನೀಡಿದ ಸಮಯದಲ್ಲಿ ಬೈಕ್ ಸವಾರನೊಬ್ಬ ಮಾಸ್ಕ್ ಧರಿಸದೆ ಓಡಾಡುವುದನ್ನು ಕಂಡು ಬೈಕ್ ಸವಾರನನ್ನು ನಿಲ್ಲಿಸಿ ಅವನ ಅಂಗಿಯನ್ನು ಬಿಚ್ಚಿಸಿ ಮುಖಕ್ಕೆ ಕಟ್ಟಿಸುವ ಮೂಲಕ ಮಾಸ್ಕ್‌ನ ಅವಶ್ಯಕತೆ ಮತ್ತು ಅದರಿಂದಾಗುವ ಸುರಕ್ಷತೆಯ ಬಗ್ಗೆ ತಿಳಿಹೇಳಿ ಮಾತನಾಡಿ,ಕೊರೊನಾ ವೈರಸ್ ಮಹಾಮಾರಿಯಾಗಿದ್ದು ಇದಕ್ಕೆ ಯಾವುದೇ ಅಧೀಕೃತವಾದ ಮದ್ದಿಲ್ಲ. ಆದ್ದರಿಂದ ಮುಂಜಾಗ್ರತೆಯೊಂದೆ ಇದಕ್ಕಿರುವ ಮದ್ದಾಗಿರುವುದರಿಂದ ನಮ್ಮ ರಕ್ಷಣೆ ನಾವೇ ಮಾಡಿಕೊಳ್ಳಬೇಕೆಂದು ಚೆಕ್‌ಪೋಸ್ಟ್ ಮೂಲಕ ಹೋಗಿ ಬರುವವರ ನಿಲ್ಲಿಸಿ ತಿಳವಳಿಕೆ ಮೂಡಿಸಿದರು.
ಈ ಸಂದರ್ಭದಲ್ಲಿ ತಹಸೀಲ್ ಸಿರಸ್ತೆದಾರ್ ಅಶೋಕ ಸುರಪುರಕರ್,ಭೀಮು ಯಾದವ್ ಹಾಗೂ ಪೊಲೀಸ್ ಸಿಬ್ಬಂದಿಗಳಿದ್ದರು.