ಸಾಮಾಜಿಕ ಅಂತರ ಕಾಪಾಡಲು ಲೇಡಿ ಪಿಎಸ್‌ಐ ಹರಸಾಹಸ

0
41

ವಾಡಿ: ವಾರದ ಸಂತೆಯಲ್ಲಿ ಗ್ರಾಹಕರ ಮಧ್ಯೆ ಸಾಮಾಜಿಕ ಅಂತರ ಕಾಪಾಡಲು ಲೇಡಿ ಪಿಎಸ್‌ಐವೊಬ್ಬರು ತ್ರೀವ್ರ ಹರಸಾಹಸ ಪಟ್ಟ ಪ್ರಸಂಗ ನಡೆಯಿತು.

ಪಟ್ಟಣದಲ್ಲಿ ಗುರುವಾರ ನಡೆದ ವಾರದ ಸಂತೆಯಲ್ಲಿ ತರಕಾರಿ ಕೈಬಂಡಿಗಳಿಗೆ ಮುಗಿಬಿದ್ದಿದ್ದ ಗ್ರಾಹಕರನ್ನು ಚದುರಿಸಲು ಪಿಎಸ್‌ಐ ದಿವ್ಯಾ ಮಹಾದೇವ್ ಅವರು ಲಘು ಲಾಠಿ ಪ್ರಹಾರ ಮಾಡುವ ಮೂಲಕ ಕಷ್ಟಪಡಬೇಕಾಯಿತು. ಕೊರೊನಾ ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಸಾಮಾಜಿಕ ಅಂತರ ಕಾಪಾಡಲು ಸಾಕಷ್ಟು ಜಾಗೃತಿ ಮೂಡಿಸಿದರೂ ಕ್ಯಾರೆ ಎನ್ನದ ಗ್ರಾಹಕರು, ತರಕಾರಿ ಮತ್ತು ಕಿರಾಣಿ ಪಡೆಯಲು ಒಬ್ಬರಮೇಲೊಬ್ಬರು ಮುಗಿಬಿದ್ದು ಖರೀದಿಸುತ್ತಿರುವ ಸಿದ್ದಿ ತಿಳಿದ ಪಿಎಸ್‌ಐ ದಿವ್ಯಾ, ಜಾಗಿಂಗ್ ಉಡುಪಿನಲ್ಲೇ ಪೇದೆ ದತ್ತಾತ್ರೆಯ ಜಾನೆ ಅವರೊಂದಿಗೆ ಕರ್ತವ್ಯಕ್ಕೆ ಮುಂದಾಗಿದ್ದು ಕಂಡುಬಂದಿತು. ಬೆಳಗಿನ ನಸುಕಿನ ಜಾವದಿಂದಲೇ ಮಾರುಕಟ್ಟೆಯಲ್ಲಿ ಲಾಠಿ ಬೀಸಲು ಶುರುಮಾಡಿದ್ದರು. ಅಂತರ ನಿಂತು ತರಕಾರಿ ಖರೀದಿಸುವಂತೆ ಜನರಿಗೆ ಪರಿಪರಿಯಾಗಿ ಕೇಳಿದರೂ ಪರಸ್ಥಿತಿ ಮಾತ್ರ ತಿಳಿಗೊಳ್ಳಲಿಲ್ಲ. ಪರಿಣಾಮ ಅನಿವಾರ್ಯವಾಗಿ ಕೆಲ ಗ್ರಾಹಕರು ಲಾಠಿ ರುಚಿ ನೋಡಬೇಕಾಯಿತು.

Contact Your\'s Advertisement; 9902492681

ದಿನೇದಿನೆ ಕೊರೊನಾ ವೈರಸ್ ಒಬ್ಬರಿಂದ ಒಬ್ಬರಿಗೆ ಹರಡುತ್ತಿದೆ. ಹಲವರಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದೆ. ಜನರ ಪ್ರಾಣ ಅಪಾಯದಲ್ಲಿದೆ. ಇಡೀ ಜಿಲ್ಲಾಡಳಿತ ಕೊರೊನಾ ಜಾಗೃತಿಯಲ್ಲಿ ತೊಡಗಿದೆ. ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಕಡ್ಡಾಯವಾಗಿ ಜನರು ಮನೆಯಲ್ಲಿರಬೇಕು. ಅನಿವಾರ್ಯ ಕಾರಣಗಳಿಂದ ಹೊರಗಡೆ ಬಂದವರು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು.

ಇದ್ಯಾವುದನ್ನೂ ಲೆಕ್ಕಿಸದೆ ಜನರು ಸಂತೆಯಲ್ಲಿ ಮುಗಿಬಿದ್ದು ಖರೀದಿಗೆ ಮುಂದಾಗುತ್ತಿದ್ದಾರೆ. ಇದೆಲ್ಲಾ ನೋಡಿದರೆ ಜನರಿಗೆ ಈ ಮಹಾಮಾರಿ ರೋಗದ ಕುರಿತು ಭಯವೇ ಇಲ್ಲ ಎಂಬುದು ತಿಳಿಯುತ್ತಿದೆ. ಲಾಕ್‌ಡೌನ್ ಹಗುರವಾಗಿ ಕಾಣುತ್ತಿದ್ದಾರೆ. ಆನರು ಎಚ್ಚೆತ್ತುಕೊಳ್ಳದಿದ್ದರೆ ಪರಸ್ಥಿತಿ ಕೈಮೀರುತ್ತದೆ ಎಂದು ವಾಡಿ ಠಾಣೆಯ ಪಿಎಸ್‌ಐ ದಿವ್ಯಾ ಉದಯವಾಣಿ ಮುಂದೆ ಜನರ ಮೇಲಿನ ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸರ ವಾಹನದ ಸೈರನ್ ಶಬ್ದಕ್ಕೆ ಹೆದರಿ ಅನೇಕ ಕೈಬಂಡಿ ತರಕಾರಿ ವ್ಯಾಪಾರಿಗಳು ನಂತರ ಬಡಾವಣೆಗಳಿಗೆ ತೆರಳಿ ವ್ಯಾಪಾರ ಮುಂದುವರೆಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here