ಕಲಬುರಗಿ: ಲಾಕ್ ಡೌನ್ ನಡುವೆಯೇ ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ವಾಡಿಯ ಎಸಿಸಿ ಕಾರ್ಖಾನೆ ಆರಂಭಕ್ಕೆ ಯತ್ನ ನಡೆದಿದ್ದು, ಪುರಸಭೆ ಸದಸ್ಯರು ಮತ್ತು ಸ್ಥಳೀಯ ಮುಖಂಡರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಎಸಿಸಿ ಸಿಮೆಂಟ್ ಕಾರ್ಖಾನೆ ಪುನರಾರಂಭಕ್ಕೆ ಸಿದ್ಧತೆ ನಡೆದಿದ್ದು, ಸಿಮೆಂಟ್ ತುಂಬಿಕೊಂಡು ಹೋಗಲು ಟ್ಯಾಂಕರ್ ಗಳು ಬಂದು ನಿಂತಿವೆ. ಏಷ್ಯಾದಲ್ಲಿಯೇ ಅತಿದೊಡ್ಡ ಸಿಮೆಂಟ್ ಕಾರ್ಖಾನೆ ಎಂಬ ಹೆಗ್ಗಳಿಕೆ ಹೊಂದಿರುವ ಎಸಿಸಿ ಲಾಕ್ ಡೌನ್ ಹಿನ್ನೆಲೆಯಲ್ಲಿ ಉತ್ಪಾದನೆ ಸ್ಥಗಿತಗೊಳಿಸಿತ್ತು. ಇದೀಗ ಮತ್ತೆ ಪುನರಾರಂಭಕ್ಕೆ ಸಿದ್ಧತೆ ನಡೆಸಿದೆ. ಆದರೆ ಕೊರೋನಾ ಸೋಂಕಿಗೆ ತುತ್ತಾದ ಎರಡು ವರ್ಷದ ಬಾಲಕನ ಪೋಷಕರ ಮನೆ ಇರೋ ಪ್ರದೇಶದಲ್ಲಿಯೇ ಸಿಮೆಂಟ್ ಕಾರ್ಖಾನೆ ಬರಲಿದೆ. ಪಿಲಕಮ್ ಏರಿಯಾ ಸೇರಿದಂತೆ ನಾಲ್ಕು ವಾರ್ಡ್ ಗಳನ್ನು ಈಗಾಗಲೇ ಸೀಲ್ ಡೌನ್ ಮಾಡಲಾಗಿದೆ.
ಹೀಗಿರಬೇಕಾದರೆ ಕಾರ್ಖಾನೆ ಪುನರಾರಂಭಿಸಲು ಮುಂದಾಗಿರುವುದಕ್ಕೆ ಸ್ಥಳೀಯರು ಮತ್ತು ಪುರಸಭೆ ಸದಸ್ಯರು ವಿರೋಧ ವ್ಯಕ್ತಪಡಿಸಿದದಾರೆ. ಕಾರ್ಖಾನೆ ಪುನರಾರಂಭಿಸಿದರೆ ಸೋಂಕು ಹರಡೋ ಸಾಧ್ಯತೆಗಳಿವೆ. ಮೇ 10ರವರೆಗೆ ಯಾವುದೇ ಕಾರಣಕ್ಕೂ ಕಾರ್ಖಾನೆ ಪುನರಾರಂಭ ಮಾಡಬಾರದು. ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಪುರಸಭೆ ಸದಸ್ಯರು ಜಿಲ್ಲಾಧಿಕಾರಿಗಳಿಗೆ ಆಗ್ರಹಿಸಿದ್ದಾರೆ.
ಕಾರ್ಮಿಕರು ಸಂಬಂಳ ನೀಡದ ಆರೋಪ: ಲಾಕ್ ಡೌನ ಹಿನ್ನೆಲೆ ದೇಶದ ಎಲ್ಲಾ ಕಾರ್ಖಾನೆಗಳನ್ನು ಬಂದ್ ಮಾಡಲಾಗಿದೆ. ಕೆಲಸ ಸ್ಥಗಿತಗೊಳಿಸಿದರು ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರಿಗೆ ವೇತನ ನೀಡುವಂತೆ ಕೇಂದ್ರ ಸರ್ಕಾರ ಆದೇಶಿಸಿದೆ ಆದ್ರೆ ಏಷ್ಯಾದ ನಂಬರಗ ಒನ್ ಕಂಪನಿ ಎಂದೆನಿಸಿಕೊಂಡ ಎಸಿಸಿ ಸಿಮೆಂಟ್ ಕಂಪನಿ ಕಾರ್ಮಿಕರಿಗೆ ಸಂಬಂಳ ನೀಡದೆ ಸತಾಯಿಸುತ್ತಿದೆ ಎಂದು ಪುರಸಭೆ ಸದಸ್ಯ ಪೃಥ್ವಿರಾಜ್ ಸೂರ್ಯವಂಶಿ ಆರೋಪಿಸಿದ್ದಾರೆ.
ವಿಶ್ವದಲ್ಲಿ ಅತಿ ದೊಡ್ಡ ಸಿಮೆಂಟ್ ಕಾರ್ಖಾನೆ ಎಂಬ ಹೆಗ್ಗಳಿಕೆ ಹೊಂದಿರುವ ವಾಡಿ ಎಸಿಸಿ ಸಿಮೆಂಟ್ ಕಾರ್ಖಾನೆ ಲಾಕ್ಡೌನ್ ಆರಂಭವಾಗಿ ಎರಡು ತಿಂಗಳು ಸಮಿಪಿಸುತ್ತಿದ್ದರ ವಾಡಿ ಪಟ್ಟಣ ಹಾಗೂ ಸುತ್ತಲಿನ ಹಳ್ಳಿಜನರ ಸಹಾಯಕ್ಕೆ ಮುಂದೆ ಬಂದಿಲ್ಲ. ದಿನಕ್ಕೆ 20 ಟನ್ ಸಿಮೆಂಟ್ ಉತ್ಪಾದನೆ ಮಾಡುವ ಇಸಮಿನಿ ಕಾರ್ಖಾನೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಕಾರ್ಮಿಕರು ದುಡಿಯುತ್ತಾರೆ ಆದ್ರೆ ಲಾಕ್ ಡೌನ್ ನಿಂದಾಗಿ ಇಲ್ಲಿನ ಜನ ಭಾಗದ ಬಡ ಕುಟುಂಬಗಳಿಗೆ ನಯಾಪೈಸ ಆಸರೆಯಾಗಿಲ್ಲ ಎಂದು ಆರೋಪಿಸಿದ್ದಾರೆ. ಕೊಡಲೆ ಎಸಿಸಿ ಆಡಳಿತ ಮಂಡಳಿ ಈ ಭಾಗದ ಜನರ ಕಷ್ಟಕ್ಕೆ ನೆರವಾಗಬೇಕು ಎಂದು ಆಗ್ರಹಿಸಿದ್ದಾರೆ.
ಪುರಸಭೆ ಸದಸ್ಯರಾದ ತಿಮ್ಮಯ್ಯ ಪವರ್, ಮಹಮ್ಮದ್ ಗೌಸ್, ಮರಗಪ್ಪ ಕಲಕುಟ್ಟಗಿ, ಸ್ಥಳಿಯ ಮುಖಂಡರಾದ ನಾಗೇಂದ್ರ ಜೈಗಂಗಾ, ತುಕಾರಾಂ ರಾಠೋಡ್, ವಿಜಯ್ ಸಿಂಗೆ,ಶ್ರಾವಣಕುಮಾರ ಮೋಸಲಗಿ, ರಾಜಾ ಪಟೇಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.