ಲಾಕ್‌ಡೌನ್ ಸಮಸ್ಯೆಯಲ್ಲೂ ಮಗು, ಬಾಣಂತಿಗೆ ಆಸ್ಪತ್ರೆಗೆ ಸೇರಿಸಿದ ಸಂಸದ

0
22

ಕಲಬುರಗಿ: ಮಹಾಮಾರಿ ಕೊರೋನಾ ಅಟ್ಟಹಾಸ ನಿಯಂತ್ರಣಕ್ಕಾಗಿ ಲಾಕ್‌ಡೌನ್ ಜಾರಿಯಲ್ಲಿದ್ದು, ಈ ಸಂದರ್ಭದಲ್ಲಿ ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಬಾಣಂತಿ ಹಾಗೂ ನವಜಾತ ಶಿಶುವನ್ನು ಸಕಾಲದಲ್ಲಿ ಆಸ್ಪತ್ರೆಗೆ ಸೇರಿಸುವ ಮೂಲಕ ಸಂಸದ ಡಾ. ಉಮೇಶ್ ಜಾಧವ್ ಅವರು ಮಾನವೀಯತೆ ಮೆರೆದ ಘಟನೆ ಶನಿವಾರ ವರದಿಯಾಗಿದೆ.

ಜಿಲ್ಲೆಯ ಯಡ್ರಾಮಿ ತಾಲ್ಲೂಕಿನ ಮಳ್ಳಿ ಗ್ರಾಮದ ಅಕ್ಷತಾ ಗಂಡ ಸಂಗಣ್ಣ ಎಂಬ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡು ಮಗು ಜನಿಸಿತು. ಈ ಸಂದರ್ಭದಲ್ಲಿ ಮಹಿಳೆಗೆ ತೀವ್ರ ರಕ್ತಸ್ರಾವವಾದಾಗ ಆಕೆಯನ್ನು ಅಂಬುಲೆನ್ಸ್‌ನಲ್ಲಿ ನಗರಕ್ಕೆ ಕರೆತರಲಾಯಿತು. ಅಂಬುಲೆನ್ಸ್‌ನಲ್ಲಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಸಂಚರಿಸುತ್ತಿರುವುದು ಸಂಸದ ಡಾ. ಉಮೇಶ್ ಜಾಧವ್ ಅವರ ಗಮನಕ್ಕೆ ಬಂದು ತಕ್ಷಣವೇ ಬಾಣಂತಿ ಹಾಗೂ ಮಗುವನ್ನು ಸಂಗಮೇಶ್ವರ್ ಆಸ್ಪತ್ರೆಗೆ ಸೇರಿಸಿದರು.

Contact Your\'s Advertisement; 9902492681

ಆಸ್ಪತ್ರೆಯಲ್ಲಿ ತಾಯಿ ಮತ್ತು ಮಗು ಸುರಕ್ಷಿತವಾಗಿದ್ದು, ಆರೋಗ್ಯದಿಂದ ಇದ್ದಾರೆ. ಸಕಾಲದಲ್ಲಿ ಸಂಸದ ಡಾ. ಉಮೇಶ್ ಜಾಧವ್ ಅವರು ಆಸ್ಪತ್ರೆಗೆ ಸೇರಿಸಿದ್ದರಿಂದ ಮಹಿಳೆಯ ಮನೆಯವರು ಸಂಸದರನ್ನು ಮನದುಂಬಿ ಕೊಂಡಾಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here