ಕಲಬುರಗಿ: ಪ್ರಸ್ತುತ ಜನರಿಗೆ ಕೊರೋನಾ ವೈರಸ್ ಕುರಿತು ಸಮಗ್ರ ಮಾಹಿತಿ ಹಾಗೂ ತಿಳುವಳಿಕೆಯ ಅವಶ್ಯಕವಿದ್ದು ಅದಕ್ಕಾಗಿ ಜನರಲ್ಲಿ ಜಾಗೃತಿಯನ್ನು ಮೂಡಿಸುವುದು ಅವಶ್ಯಕವಾಗಿದೆ. ಕೊರೋನಾ ಸೋಂಕಿನ ಹರಡುವಿಕೆ, ಇದರಿಂದ ಸಮಾಜದ ಮೇಲೆ ಬೀರುವ ಪರಿಣಾಮ, ಕೊರೋನಾ ಸೋಂಕಿನ ಚಿಕಿತ್ಸಾ ವಿಧಾನದ ಸಮಗ್ರ ಮಾಹಿತಿಯುನ್ನು ಜನರಿಗೆ ತಲುಪಿಸುವುದು ಅವಶ್ಯಕವಾಗಿದೆ ಆ ನಿಟ್ಟಿನಲ್ಲಿ ಪಿ.ಡಿ.ಎ. ತಾಂತ್ರಿಕ ಮಹಾವಿದ್ಯಾಲಯದ ಮಾಹಿತಿ ವಿಜ್ಞಾನ ವಿಭಾಗವು ರೂಪಿಸಿರುವ “ಕಮಬ್ಯಾಟ್ ಕೋವಿಡ್ 19” ಆನ್-ಲಾಯಿನ್ ಪ್ರಶ್ನೋತ್ತರ ಮಾಲಿಕೆ ಜನರಿಗೆ ಈ ಮಹಾಮಾರಿಯ ತಿಳುವಳಿಕೆ ನೀಡುವ ಪ್ರಯತ್ನವಾಗಿದೆ ಎಂದು ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ. ಭೀಮಾಶಂಕರ ಸಿ. ಬಿಲಗುಂದಿ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಪ್ರಶ್ನೋತ್ತರ ಮಾಲಿಕೆಗೆ ಚಾಲನೆ ನೀಡಿದ ಅವರು ಪ್ರತಿಯೊಂದು ಪ್ರಶ್ನೆಗಳು ಜನರಲ್ಲಿ ಕೊರೋನಾ ಮಹಾಮಾರಿಯ ಬಗ್ಗೆ ಜಾಗೃತಿಯನ್ನುಂಟು ಮಾಡುವ ಪ್ರಯತ್ನ ಮಾಡಲಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಾದ ವಿಜಯಕುಮಾರ ಜೆ. ದೇಶಮುಖ, ನೀತಿನ ಬಿ. ಜವಳಿ, ಅನೀಲಕುಮಾರ ಮರಗೋಳ, ಸತೀಶ್ಚಂದ್ರ ಸಿ. ಹಡಗಲಿಮಠ ಮತ್ತು ಬಸವೇಶ್ವರ ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ. ಮಲ್ಲಿಕಾರ್ಜುನ ಎಸ್. ತೆಗನೂರ ಅವರು ಉಪಸ್ಥಿತರಿದ್ದರು.
“ಕಮಬ್ಯಾಟ್ ಕೋವಿಡ್ 19” ಆನ್-ಲಾಯಿನ್ ಪ್ರಶ್ನೋತ್ತರ ಮಾಲಿಕೆಯಲ್ಲಿ 55 ಪ್ರಶ್ನೆಗಳೊಳಗೊಂಡಿದ್ದು 60 ನಿಮಿಷದಲ್ಲಿ ಪೂರ್ಣಗೊಳಿಸಬೇಕು, ಪ್ರತಿಯೊಂದು ಪ್ರಶ್ನೆಗಳು ಮಹಾಮಾರಿಯ ಬಗ್ಗೆ ತಿಳುವಳಿಕೆ ನೀಡುವ ಪ್ರಯತ್ನವಾಗಿದ್ದು, ಈ ಪ್ರಶ್ನೆಗಳನ್ನು ಮಹಾವಿದ್ಯಾಲಯದ ಮಾಹಿತಿ ವಿಜ್ಞಾನ ವಿಭಾಗದ ಅಶೋಕ ಪಾಟೀಲ ಮತ್ತು ಎಲೆಕ್ಟ್ರಾನಿಕ್ಸ್ ವಿಭಾಗದ ಪದ್ಮಪ್ರೀಯಾ ಪಾಟೀಲ ಅವರು ರೂಪಿಸಿದ್ದಾರೆ. ಈ ಆನ್-ಲಾಯಿನ್ ಪ್ರಶ್ನೋತ್ತರ ಮಾಲಿಕೆಯಲ್ಲಿ ಸರ್ವರು ಭಾಗವಹಿಸಬಹುದಾಗಿದ್ದು ಇದು ಎಪ್ರಿಲ್ 26, 2020 ರಿಂದ 3ನೇ ಮೇ 2020ರ ವರೆಗೆ ನಡೆಸಲಾಗುವುದು.
“ಕಮಬ್ಯಾಟ್ ಕೋವಿಡ್ 19” ಆನ್-ಲಾಯಿನ್ ಪ್ರಶ್ನೋತ್ತರ ಮಾಲಿಕೆಯ ಬಗ್ಗೆ ಹರ್ಷ ವ್ಯಕ್ತಪಡಿಸಿದ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಎಸ್. ಎಸ್. ಹೆಬ್ಬಾಳ ಅವರು ಮಹಾವಿದ್ಯಾಲಯದ ವಿವಿಧ ವಿಭಾಗಗಳ ವಿದ್ಯಾರ್ಥಿಗಳು ಮಹಾಮಾರಿ ಕೊರೋನಾ ನಿಗ್ರಹಕ್ಕೆ ಪೂರಕವಾಗುವಂತಹ ಸಾಕಷ್ಟು ಪ್ರಾಜೆಕ್ಟಗಳನ್ನು ಕೂಡ ತಯ್ಯಾರಿಸುವ ನೀರಿಕ್ಷೆಯಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಮಾಹಿತಿ ವಿಜ್ಞಾನ ವಿಭಾಗದ ಮುಖ್ಯಸ್ಥೆ ಹಾಗೂ ಆನ್-ಲಾಯಿನ್ ಪ್ರಶ್ನೋತ್ತರ ಮಾಲಿಕೆಯ ಸಂಯೋಜಕರಾದ ಡಾ. ಭಾರತಿ ಹರಸೂರ ಅವರು ಆನ್-ಲಾಯಿನ್ ಪ್ರಶ್ನೋತ್ತರ ಮಾಲಿಕೆಯ ಬಗ್ಗೆ ತಮ್ಮ ಹರ್ಷವನ್ನು ವ್ಯಕ್ತಪಡಿಸಿ ಇದರಲ್ಲಿ ರಾಷ್ಟ್ರದ ವಿವಿಧ ವಿದ್ಯಾರ್ಥಿಗಳು ಭಾಗವಹಿಸುವ ನಿರಿಕ್ಷೆಯಿದೆ ಹಾಗೂ ಸರ್ವರು ಇದರ ಸದುಪಯೋಗ ಪಡೆಯಬೇಕೆಂದು ತಿಳಿಸಿದರು.
ಆನ್-ಲಾಯಿನ್ ಪ್ರಶ್ನೋತ್ತರ ಮಾಲಿಕೆಯ ಬಗ್ಗೆ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸುತ್ತ ಮಹಾಮಾರಿಯ ಬಗ್ಗೆ ಜನರಿಗೆ ಸಾಮಾನ್ಯ ತಿಳಿವಳಿಕೆಯನ್ನು ನೀಡುವ ಪ್ರಯತ್ನ ಇದಾಗಿದೆ ಎಂದು ಬಸವೇಶ್ವರ ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ. ಮಲ್ಲಿಕಾರ್ಜುನ ತೆಗನೂರ ಅವರು ತಿಳಿಸಿದರು.