ಸುರಪುರದಲ್ಲಿ ತಂಗಿದ್ದ ಹೈದರಾಬಾದ್ ಮೂಲದ ಕುಟುಂಬಕ್ಕೆ ನ್ಯಾಯಾಧೀಶರ ಭೇಟಿ

0
101

ಸುರಪುರ: ಸುರಪುರ ನಗರದ ಕುಂಬಾರಪೇಟ ಬಳಿಯಲ್ಲಿ ೨೦ ದಿನಗಳ ಬಾಣಂತಿಯ ಕುಟುಂಬವೊಂದು ಗಂಡ ಮತ್ತು ಮಕ್ಕೊಳ್ಳೊಂದಿಗೆ ವಾಸಿಸುತ್ತಿರುವುದು ನಮ್ಮ ಗಮನಕ್ಕೆ ಬಂದಿತ್ತು, ಅವರ ಆರೋಗ್ಯ ತಪಾಸಣೆಗಾಗಿ ತಾಲೂಕು ಆಸ್ಪತ್ರೆ ವೈದ್ಯರಿಗೆ ತಿಳಿಸಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು,ಈ ಕುಟುಂಬಕ್ಕೆ ಎಲ್ಲಾ ರೀತಿಯ ಅನೂಕೂಲ ಕಲ್ಪಿಸುವಂತೆ ಈಗಾಗಲೆ ತಾಲೂಕು ಆಡಳಿತಕ್ಕೆ ಸೂಚಿಸಲಾಗಿದೆ ಎಂದು ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾದೀಶ ಪ್ರಕಾಶ ಅರ್ಜುನ ಬನಸೋಡೆ ತಿಳಿಸಿದರು.

ನಗರದ ತಾಲೂಕು ಆಸ್ಪತ್ರೆಯಲ್ಲಿದ್ದ ಹೈದರಾಬಾದ್ ಮೂಲದ ಶಾಂತಕುಮಾರ್ ಜ್ಯೋತಿಬಾಯಿ ಕುಟುಂಬವನ್ನು ಭೇಟಿ ಮಾಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಕುಟುಂಬವು ಲಾಕ್ ಡೌನಿಂದಾಗಿ ತುಂಬಾ ಸಂಕ್ಷಷ್ಟ ಅನುಭವಿಸಿತ್ತು. ಹೆರಿಗೆಗೆಂದು ಮಹಿಳೆಯು ತವರು ಮನೆಗೆ ಬಂದಿದ್ದು ಹೆರಿಗೆಯಾಗಿ ಕೆಲವು ದಿನಗಳ ವರೆಗೂ ತಂದೆಯ ಮನೆಯಲ್ಲಿಯೆ ಇದ್ದರು ಕೆಲವು ಕೌಟುಂಬಿಕ ಕಾರಣಗಳಿಂದ ತವರು ಮನೆ ಯವರೊಡನೆ ಮನಸ್ತಾಪವಾಗಿ ತವರು ಮನೆಯಿಂದ ಹೊರಗೆ ಬಂದು ಗಂಡನೊಂದಿಗೆ ಅಲ್ಲಿಯೆ ಇರುವ ನೀರು ಶುದ್ಧಿಕರಣ ಘಟಕದಲ್ಲಿ ವಾಸವಾಗಿದ್ದರು. ಆಸ್ಪತ್ರೆಯಿಂದ ತೆರಳಿದ ನಂತರ ಊಳಿದುಕೊಳ್ಳಲು ವ್ಯವಸ್ಥೆಯನ್ನುಮಾಡಲು ತಿಳಿಸಲಾಗಿದೆ ಹಾಗೂ ವೈದ್ಯರೊಂದಿಗೆ ತಾಯಿ ಮತ್ತು ಮಗುವಿನ ಆರೋಗ್ಯದ ಕುರಿತು ಮಾಹಿತಿ ಪಡೆಯಲಾಗಿದೆ ಎಂದು ತಿಳಿಸಿದರು.

Contact Your\'s Advertisement; 9902492681

ಸುರಪುರ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾದೀಶೆ ತಯ್ಯಬಾ ಸುಲ್ತಾನ, ಪ್ರಧಾನ ಸಿವಿಲ್ ನ್ಯಾಯಾದೀಶ ಚಿದಾನಂದ ಬಡಗೇರ, ಹೆಚ್ಚುವರಿ ಸಿವಿಲ್ ನ್ಯಾಯಾದೀಶ ಅಮರನಾಥ ಬಿ.ಎನ್ ಹಾಗೂ ತಹಶಿಲ್ದಾರ ನಿಂಗಣ್ಣ ಬಿರಾದರ, ತಾಲೂಕು ಆರೋಗ್ಯಾಧಿಕಾರಿ, ಡಾ.ಆರ್.ವಿ.ನಾಯಕ, ಶಿಶು ಅಭಿವೃದ್ಧಿ ಅಧಿಕಾರಿ ಲಾಲಸಾಬ ಪೀರಾಪುರ ಸೇರಿದಂತೆ ಇನ್ನಿತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here