ಲಾಕ್ ಡೌನ್ ತಂದ ವರ: ನಳ ನಳಿಸಿದ ಮರ, ಹೀಗೊಂದು ಎನ್.ಕೆ.ಎಸ್.ಆರ್

0
212

ಕಲಬುರಗಿ: ಮಹಾಮಾರಿ ಕರೊನದ ಅಟ್ಟಹಾಸಕ್ಕೆ ಇಡೀ ಭೂಮಂಡಲವೆ ತಲ್ಲಣಗೊಂಡಿದ್ದು,  ಬಹುತೇಕ ಎಲ್ಲ ರಾಷ್ಟ್ರಗಳು ಲಾಕ್ ಡೌನ್ ಘೋಷಿಸಿವೆ. ಇದಕ್ಕೆ ಭಾರತವೂ ಹೊರತಲ್ಲ.ಇಂತ ಸಮಯದಲ್ಲಿ ಜನರ ಜೀವನಾಡಿ, ರಾಜ್ಯದ ಜನತೆಯ ಸಂಪರ್ಕ ಸೇತುವೆಯಾಗಿ ಸೇವೆ ಸಲ್ಲಿಸುತ್ತಿರುವ “ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ”ಯು ಲಾಕ್ ಡೌನ್ ನಿಂದ ಕಂಗೆಟ್ಟರೂ ತುರ್ತು ಸೇವೆ ಒದಗಿಸುವಲ್ಲಿ ಸದಾ ಸಿದ್ದ.

ಇಂತಹ ಲಾಕ್ಡೌನ್  ಸಮಯದಲ್ಲಿ ನಮ್ಮ ಕುಕನೂರು ಬಸ್ ಘಟಕದಲ್ಲಿ ತುರ್ತು ಸೇವೆಯಲ್ಲಿರುವ  ಸಿಬ್ಬಂದಿಗಳು, ಘಟಕದಲ್ಲಿರುವ ಬೇವು  ಮಾವು ನೆಲ್ಲಿ ತೆಂಗು ಹಾಗೂ ತೇಗದ ಸಸಿಗಳನ್ನು ಬೆಳೆಸುವತ್ತ ಮುತುವರ್ಜಿ ವಹಿಸಿದ್ದಾರೆ. ಸೂಕ್ತ ನಿರ್ವಹಣೆ ಇಲ್ಲದೆ ಕಸ ಕಂಟಿ ಬೆಳೆದು ಕೃಶವಾಗಿದ್ದ ಗಿಡಗಳಿಗೆ ದಿನ ನಿತ್ಯದ ಕೆಲಸದ ಜೊತೆಗೆ ಕರ್ತವ್ಯದ ಮೇಲಿರುವ  ಹಲವಾರು ಸಿಬ್ಬಂದಿಗಳ ಪರಿಶ್ರಮದಿಂದ ಇಂದು ಬಿರು ಬಿಸಿಲ ಬೇಸಿಗೆಯಲ್ಲೂ ಹಸಿರಿನಿಂದ ನಳನಳಿಸುವಂತೆ ಮಾಡಿದ್ದಾರೆ.

Contact Your\'s Advertisement; 9902492681

ಇಲ್ಲಿಯ ಘಟಕ ವ್ಯವಸ್ಥಾಪಕರಾದ ಶ್ರೀಯುತ “C G ಸೊಪ್ಪಿಮಠ” ರವರ ಪರಿಸರದ ಬಗೆಗಿನ ಕಾಳಜಿ ಅತ್ಯಂತ ಪ್ರಶಂಶನಿಯ. ಅವರು ಸ್ವತಃ ತಾವೇ ಮೆಕ್ಯಾನಿಕ್ಸ್ ಹಾಗೂ ಡ್ರೈವರ್ಸ್ ಗಳ ಜೊತೆ ನಿಂತು ಗಿಡಗಳಿಗೆ ನೀರುಣಿಸಿ ಆರೈಕೆ ಮಾಡುತ್ತಾರೆ. ಇದರಿಂದ ಪ್ರೇರೇಪಿತರಾದ ಘಟಕದ ಸಿಬ್ಬಂದಿಗಳಾದ ( ತಾಂತ್ರಿಕ ವರ್ಗ) ಬಸವರಾಜ್ M,ಕನಕಪ್ಪ , ಬಿ.ಚನ್ನದಾಸರ, ಮಾರುತಿ ಪಿ. ವೀರಣ್ಣA ಬಸವರಾಜ್ ಸಿ, ಶಶಿಧರ್, ಮೈಲಾರಪ್ಪ, ಹುಸೇನ್ ಸಾಬ್ ಹಾಗೂ
(ಚಾಲಕ ವರ್ಗ)  ನಿಂಗಪ್ಪ G, ಪೀರ್ ಸಾಬ್, ಮಂಜುನಾಥ K, ಜಗದೀಶ , ಶಾಬುದ್ದಿನ್, ನಾಗರಾಜ್, ಬಾಳಪ್ಪ, ಶೇಖರಗೌಡ, ಬಸವರಾಜ್ P ಮುಂತಾದ ಸಿಬ್ಬಂದಿಗಳು  ಅತ್ತ್ಯುತ್ಸಾಹದಿಂದ ಎಲ್ಲ ಮುಳ್ಳು ಕಂಟಿಗಳನ್ನು ಕಡಿದು, ಎಲ್ಲ ಗಿಡಗಳಿಗೆ ಪಾತಿ ಮಾಡಿ ದಿನವೂ ನೀರುಣಿಸುತ್ತಿದ್ದಾರೆ. ಅವರೆಲ್ಲರ ಪರಿಶ್ರಮದಿಂದ ಇಂದು ಘಟಕದ ಆವರಣ ಸ್ವಚ್ಛವಾಗಿದ್ದು ಬೇಸಿಗೆಯ ಬಿರು ಬಿಸಿಲಿನಲ್ಲೂ ಘಟಕದ ಎಲ್ಲ ಗಿಡಗಳು ಹಸಿರಿನಿಂದ ಹೂನಗೆ ಸೂಸುತ್ತಿವೆ.

ಅದೊಂದು ಸುಂದರ ,ಸೊಬಗಿನ ತೋಟದಂತೆ ಭಾಸವಾಗುತ್ತಿದೆ. ದಿನವೂ ನೀರು ಬಿಡುತ್ತಿದ್ದರಿಂದ ಪಾರಿವಾಳ,ಕಾಗೆ,ಗುಬ್ಬಿ ಗಳಂತ ಹಲವು ಹಕ್ಕಿಗಳು ತಮ್ಮ  ಬಾಯಾರಿಕೆಯನ್ನು ಹಿಂಗಿಸಿಕೊಳ್ಳುವುದರ ಜೊತೆಗೆ ಅವುಗಳ ಕಲರವ ಈಗ ತೋಟದ ತುಂಬಾ ರಿಂಗಣಿಸುತ್ತಿದೆ. ಅಲ್ಲದೆ ಅಳಿಲು ಮೊಲದಂತ ಸಣ್ಣ ಪುಟ್ಟ ಪ್ರಾಣಿಗಳುಆಹಾರ ನೀರಿಗಾಗಿ ಆಗಾಗ ತೋಟದೊಳಗೆ ಕಾಣಸಿಗುತ್ತಿವೆ. ನೀರು ಮತ್ತು ಆಹಾರದ ಆಸರೆ ಇರುವುದ್ದರಿಂದ ವಾನರ
ಸೈನ್ಯವೂ ಅಲ್ಲಿ ಬಿಡು ಬಿಟ್ಟಿದೆ, ಅವುಗಳ ಚಿನ್ನಾಟ ಚೇಷ್ಟೆ ನೋಡುವುದೇ ಚೆನ್ನ. ಇನ್ನು ಎಲ್ಲ ಸಿಬ್ಬಂದಿಗಳು ಅಲ್ಲಿಯೇ ಗಿಡಗಳ ನೆರಳಲ್ಲಿ ಕುಳಿತು ಊಟ ಮಾಡುತ್ತಾರೆ. ಊಟದ ನಂತರ ಎಲ್ಲರು ಸಸಿಗಳ ಆರೈಕೆಯಲ್ಲಿ ತೊಡಗಿಸಿಕೊಳ್ಳುತ್ತಾರೆ.

ಅಲ್ಲದೆ ಇನ್ನು ಹತ್ತಾರು ಬಗೆಯ ಹಣ್ಣಿನ ಗಿಡಗಳನ್ನು ಬೆಳೆಸುವ ಯೋಚನೆ ನಮ್ಮ ಘಟಕ ವ್ಯವಸ್ಥಾಪಕರದ್ದಾಗಿದೆ. ಒಟ್ಟಾರೆ ನಾವು ಈ ಲಾಕ್ ಡೌನ್ ಸಮಯವನ್ನು ಘಟಕದ ಅಗತ್ಯ ಕಾರ್ಯಗಳನ್ನು ಮಾಡುವುದರ ಜೊತೆ ಜೊತೆಗೆ, ಗಿಡ ಮರಗಳನ್ನು ಬೆಳೆಸುವಂತ ಕೆಲಸಕ್ಕೆ ವಿನಿಯೋಗಿಸುತ್ತಿದ್ದೇವೆ ಎಂಬುದೇ ಸಂತಸದ ಸಂಗತಿಯಾಗಿದೆ ಎಂದು ಹೇಳುತ್ತಾರೆ ಇಲ್ಲಿನ ಸಿಬ್ಬಂದಿ ಬಸವರಾಜ್ ಚೌಡ್ಕಿ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here