ಗುಲ್ಬರ್ಗ ಡಿಸಿ ವರ್ಗಾವಣೆ ಆದೇಶ ರದ್ದು!

0
532

ಕಲಬುರಗಿ: ಜಿಲ್ಲಾಧಿಕಾರಿ ಬಿ. ಶರತ್ ಅವರ ವರ್ಗಾವಣೆ ಸುದ್ದಿ ಕೇಳಿದ ಜಿಲ್ಲೆಯ ಜನ ಸರ್ಕಾರದ ಈ ಆದೇಶವನ್ನು ಖಂಡಿಸಿ ಕೊರೊನಾ ಹೊತ್ತಿ ಉರಿಯುವ ಈ ಸಂದರ್ಭದಲ್ಲಿ ಸರ್ಕಾರ ಅವರನ್ನು ವರ್ಗಾವಣೆಗೊಳಿಸಿರುವುದು ಸರಿಯಲ್ಲ ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.

ಇನ್ನೂ ಕೆಲವರು ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆ ಆಗುವುದು ಬಿಟ್ಟು ಡಿಸಿ ವರ್ಗಾವಣೆ ಆಗಿರುವುದು ಸರಿಯಲ್ಲ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು.

Contact Your\'s Advertisement; 9902492681

ಕೇಂದ್ರ ಆಡಳಿತಾತ್ಮಕ ನ್ಯಾಯಾಲಯ Dc ಕಲಬುರಗಿ ಯವರ ಆದೇಶವನ್ನು ತಡೆಯಜ್ಞೇ ನೀಡಿದೆ ಅಂತೇ?
ಸುದ್ದಿ ನಿಜವಾದರೆ ನ್ಯಾಯಕ್ಕೆ ಸಂದ ಜಯ ಎಂದು ವಕೀಲ ಗೌರೀಶ ಖಾಸೆಂಪುರೆ ಸಾರ್ವಜನಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಕನ್ಮಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸುರೇಶ ಬಡಿಗೇರ ಹಾಗೂ ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೇವೇಗೌಡ ತೆಲ್ಲೂರ ಬಲವಾಗಿ ಖಂಡಿಸಿ ವರ್ಗಾವಣೆ ರದ್ದತಿಗೆ ಆಗ್ರಹಿಸಿ
ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ವರ್ಗಾವಣೆ ನಿರ್ಧಾರ ಕೈಗೊಂಡಿರುವುದು ತಪ್ಪು ನಿರ್ಧಾರ… ಸರಕಾರ ಕೂಡಲೇ ಈ ಆದೇಶವನ್ನು ಹಿಂಪಡೆಯಬೇಕು ಎಂದು ಪರುಶುರಾಮ ಪುಂಡಪ್ಪ ಕೇಸರಿ ತಮ್ಮ ಅಸಮಾಧಾನ ಹೊರ ಹಾಕಿದರು.

ಡಿಸಿ ವರ್ಗಾವಣೆ ತಡೆ ಹಿಡಿಯಲು ಸಿಎಂ ಅವರು ಕೊನೆಗೆ ಸೂಚಿಸಿದ್ದಾರೆ ಎಂದು ಟಿವಿ ವೀಕ್ಷಕರನೇಕರು ತಿಳಿಸಿದರು.

ಕಲಬುರಗಿ ಡಿಸಿ ಶರತ್ ವರ್ಗಾವಣೆ ರದ್ದು. ಜನರ ಸುನಾಮಿ ಮಾದರಿಯ ಒತ್ತಡದ ಎದುರು ಕೊನೆಗೂ ಮಂಡಿಯೂರಿದ ಯಡಿಯೂರಪ್ಪ ಸರಕಾರ ಭರವಸೆ ನೀಡಿದೆ ಎಂದು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

ಕಲಬುರಗಿ ಜಿಲ್ಲಾಧಿಕಾರಿ ಶರತ್ ಬಿ. ಅವರ ವರ್ಗಾವಣೆಗೆ ತಡೆ ಹಿಡಿಯಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದ್ದು, ಖುದ್ದಾಗಿ ಸಿಎಂ ಯಡಿಯೂರಪ್ಪ ಶರತ್ ಅವರೊಂದಿಗೆ ದೂರವಾಣಿ ಕರೆ ಮಾಡಿ ಮಾತುಕತೆ ನಡೆಸಿ, ಜಿಲ್ಲೆಯಲ್ಲಿ ಉತ್ತಮ ಕೆಲಸ  ಮುಂದುವರೆಸಿ ಕೊರೊನಾ ನಿಯಂತ್ರಣಕ್ಕೆ ಒತ್ತು ನೀಡಲು ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here