ಡಿ.ಸಿ ಶರತ್ ವರ್ಗಾವಣೆಗೆ ನಾಗಲಿಂಗಯ್ಯ ಮಠಪತಿ ಖಂಡನೆ

0
134

ಕಲಬರುಗಿ: ಮನುಕುಲಕ್ಕೆ ಪಡೆಂಭೂತವಾಗಿ ಕಾಡುತ್ತಿರುವ ಕೂರೋನಾ ವೈರಸ್ ತಡೆಗಟ್ಟುವುದು ಸೇರಿದಂತೆ ಜಿಲ್ಲೆಯ ಅನೇಕ ವಿಷಯಗಳನ್ನು ಸರ್ಮರ್ಥವಾಗಿ ನಿಭಾಯಿಸಿದ ಕಲಬರುಗಿ ಜಿಲ್ಲಾಧಿಕಾರಿ ಶರತ್ ಅವರ ಧೀಡಿರ್ ವರ್ಗಾವಣೆ ಮಾಡಿರುವ ರಾಜ್ಯ ಸರ್ಕಾರದ ಕ್ರಮವನ್ನು ಜನಪರ ಹೋರಾಟಗಾರ ನಾಗಲಿಂಗಯ್ಯ ಮಠಪತಿ ಖಂಡಿಸಿದ್ದಾರೆ

ಈ ಕುರಿತು ಪತ್ರಿಕಾ ಹೇಳಿಕೆಯೊಂದನ್ನು ನೀಡಿರುವ ಅವರು ಇಡೀ ದೇಶದಲ್ಲೇ ಕೂರೋನಾ ವೈರಸ್ಗೆ ಮೊದಲ ಬಲಿಯಾಗಿದ್ದು ಕಲಬರುಗಿಯಲ್ಲಿ ನಂತರ ಕಲಬರುಗಿಯಲ್ಲಿ ಕೂರೋನಾ ರಣಕಹಳೆ ಮೊಳಗಿಸಿದ್ದು ರೋಗದ ಗಂಭೀರತೆ ಅರಿತು ಶರತ್ ಅವರು ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಸೇರಿದಂತೆ ಅಧಿಕಾರಿಗಳ ತಂಡ ಕಟ್ಟಿಕೊಂಡು ಹಗಲಿರುಳು ರೋಗ ಹತೋಟಿಗಾಗಿ ತರಲು ಶ್ರಮಿಸಿದ್ದಾರೆ.

Contact Your\'s Advertisement; 9902492681

ವಿಶೇಷವಾಗಿ ಜಿಲ್ಲಾ ಉಸ್ತುವಾರಿ ಮಂತ್ರಿಗಳು ಹದಿನೈದು ದಿನಗಳಿಗೊಮ್ಮೆ ಬಂದು ಕೇವಲ ಸಭೆಗಳಿಗೆ ಸಿಮೀತರಾದ ಹೊತ್ತಿನಲ್ಲಿ ಜಿಲ್ಲಾಧಿಕಾರಿಗಳು ಜನಪ್ರತಿನಿಧಿಗಳನ್ನು ಅಧಿಕಾರಿಗಳನ್ನು ವಿಶ್ವಾಸಕ್ಕೆ ತಗೆದುಕೊಂಡು ಬಹು ದೊಡ್ಡ ಕೆಲಸ ಮಾಡಿದ್ದಾರೆ ಇತಂಹ ಸಮಯದಲ್ಲಿ ಜಿಲ್ಲಾಧಿಕಾರಿಗಳ ವರ್ಗಾವಣೆ ಮಾಡುವ ಅವಶ್ಯಕತೆ ಎನು ಇತ್ತು ಎಂದು ಪ್ರಶ್ನೆಸಿರುವ ಮಠಪತಿ ವರ್ಗಾವಣೆ ಹಿಂದೆ ರಾಜಕೀಯ ಕೈವಾಡ ಇದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ ಕೂಡಲೇ ಶರತ್ ಅವರ ವರ್ಗಾವಣೆ ರದ್ದು ಗೊಳಿಸುವಂತೆ ಮುಖ್ಯಮಂತ್ರಿಗಳಲ್ಲಿ ಮಠಪತಿ ಕೋರಿದ್ದಾರೆ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here