ಪೊಲೀಸರ ಶ್ರಮಕ್ಕೆ ಶಾಸಕರ ಖರ್ಗೆ ಶ್ಲಾಘನೆ: ರಕ್ಷಣಾ ಸಾಮಗ್ರಿ ಹಸ್ತಾಂತರ

0
64

ಕಲಬುರಗಿ: ಕೊರೋನಾ ರೋಗದ ವಿರುದ್ದ ಹೋರಾಡುತ್ತಿರುವ ಪೊಲೀಸ್ ಇಲಾಖೆಯ ಸಿಬ್ಬಂದಿಗಳಿಗೆ ರಕ್ಷಾಕವಚಗಳನ್ನು ಮಾನ್ಯ ಶಾಸಕರಾದ ಪ್ರಿಯಾಂಕ್ ಖರ್ಗೆ ಇಂದು ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ಕೊರೋನಾದಂತ ಮಾರಕ‌ ರೋಗ ಜಗತ್ತಿನ ಬಹುಪಾಲು ರಾಷ್ಟ್ರಗಳನ್ನು ತಲ್ಲಣಗೊಳಿಸಿದೆ. ಈ ರೋಗಕ್ಕೆ ದೇಶದಲ್ಲಿಯೇ ಮೊದಲ ಸಾವಾಗಿದ್ದು ನಮ್ಮ ಕಲಬುರಗಿಯಲ್ಲಿ. ಆ ನಂತರದಲ್ಲಿ ಕಟ್ಟುನಿಟ್ಟಾಗಿ ಜಾರಿಗೆ ತಂದ ನಿಯಮಗಳಿಂದಾಗಿ ರೋಗ ವ್ಯಾಪಕವಾಗಿ ಹಬ್ಬದಂತೆ ನಿಯಂತ್ರಿಸಲಾಯಿತು.

Contact Your\'s Advertisement; 9902492681

ಈ ಮಹತ್ಕಾರ್ಯದಲ್ಲಿ ಪೊಲೀಸ್ ಇಲಾಖೆಯ ಪಾತ್ರ ಮಹತ್ವದ್ದಾಗಿದ್ದು ಸಿಬ್ಬಂದಿಗಳು ಹಗಲಿರುಳು ಶ್ರಮಿಸಿ ಕಲಬುರಗಿ‌ ಜಿಲ್ಲೆ ಅದರಲ್ಲೂ ಪ್ರಮುಖವಾಗಿ ನಗರವ್ಯಾಪ್ತಿಯ ಪ್ರಮುಖ ಪ್ರದೇಶಗಳಲ್ಲಿ ನಾಕಾಬಂದಿ, ಚೆಕ್ ಪೋಸ್ಟ್ ಸ್ಥಾಪಿಸಿದರು. ಅಂತಹ ಕಟ್ಟುನಿಟ್ಟಿನ ಕ್ರಮ ಇಂದಿಗೂ ಜಾರಿಯಲ್ಲಿವೆ.

ತಮ್ಮ ಜೀವನ ಹಂಗು ತೊರೆದು ಕೊರೋನಾ ಮಹಾಮಾರಿಯ ವಿರುದ್ದ ಸೆಣಸುತ್ತಿರುವ ಪೊಲೀಸ್ ಸಿಬ್ಬಂದಿಗಳಿಗೆ ರಕ್ಷಣಾ ಸಲಕರಣೆಗಳು ಅಗತ್ಯವಿದ್ದು ಈ ನಿಟ್ಟಿನಲ್ಲಿ ತಾವು ಅವರಿಗೆ ಬೇಕಾಗುವ ಸಾಮಗ್ರಿಗಳನ್ನು ಹಸ್ತಾಂತರಿಸುತ್ತಿರುವುದಾಗಿ ಹೇಳಿದ ಶಾಸಕರು ಇಲಾಖೆಯ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಬೆಂಬಲವಾಗಿ ನಿಲ್ಲುವುದು ತಮ್ಮ ಕರ್ತವ್ಯವಾಗಿದೆ ಎಂದರು.

ಈ ಸಂದರ್ಭದಲ್ಲಿ ಹಾಜಿರಿದ್ದ ಪೊಲೀಸ್ ವರಿಷ್ಠಾಧಿಕಾರಿಗಳಾದ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಅವರಿಗೆ ಈ ಕೆಳಗಿನ ಸಾಮಗ್ರಿಗಳನ್ನು ವಿತರಿಸಿದರು.

50 ಪಿ ಪಿ ಈ ಕಿಟ್ಸ್ (PPE KITS), 100 ಸೆನಿಟೈಜರ್ (500 ml), 400 ಫೇಸ್ ಶೀಲ್ಡ್ , 2000 ಕೈಗವಸುಗಳು, 2500 ಸರ್ಜಿಕಲ್ ಮಾಸ್ಕ್ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಕ ಎಂ ಎಲ್ ಸಿ ತಿಪ್ಪಣ್ಣಪ್ಪ ಕಮಕನೂರ್, ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಜಗದೇವ ಗುತ್ತೆದಾರ್, ಕಾಂಗ್ರೆಸ್ ಪಕ್ಷದ ಟಾಸ್ಕ್ ಫೋರ್ಸ್ ಜಿಲ್ಲಾಧ್ಯಕ್ಷ ಡಾ. ಕಿರಣ್ ದೇಶಮುಖ್ ಮತ್ತಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here