ಸುರಪುರ: ಸರಕಾರ ಗರ್ಭೀಣಿ ಮಹಿಳೆಯರು ಮತ್ತು ಬಾಣಂತಿಯರು ಹಾಗೂ ಮಕ್ಕಳಿಗಾಗಿ ಪೌಷ್ಠಿಕಾಂಶವುಳ್ಳ ಆಹಾರ ಧಾನ್ಯಗಳನ್ನು ವಿತರಿಸುತ್ತಿದ್ದು ತಾವೆಲ್ಲರು ಇವುಗಳನ್ನು ತೆಗೆದುಕೊಂಡು ಉಪಯೋಗಿಸುವಂತೆ ಆಲ್ದಾಳ ಗ್ರಾಮದ ಅಂಗನವಾಡಿ ಕಾರ್ಯಕರ್ತೆ ಚನ್ನಮ್ಮ ಆರ್.ದೊರೆ ತಿಳಿಸಿದರು.
ಆಲ್ದಾಳ ಗ್ರಾಮದ ಅಂಗನವಾಡಿ ಸಂಖ್ಯೆ ೧ ರಲ್ಲಿ ಹಮ್ಮಿಕೊಂಡಿದ್ದ ಪೌಷ್ಠಿಕ ಆಹಾರ ಪದಾರ್ಥಗಳ ವಿತರಣೆ ಮಾಡಿ ಮಾತನಾಡಿ,ಇಂದು ನಮ್ಮ ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿನ ಮಹಿಳೆಯರು ಮತ್ತು ಮಕ್ಕಳು ಅಪೌಷ್ಠಿಕತೆಯಿಂದ ಬಳಲುತ್ತಿದ್ದು,ಈ ಅಪೌಷ್ಠಿಕತೆಯನ್ನು ಹೋಗಲಾಡಿಸಲು ಸರಕಾರ ಆಹಾರ ಧಾನ್ಯಗಳ ವಿತರಣೆ ಮಾಡುತ್ತಿದ್ದು ಇವುಗಳನ್ನು ಸರಿಯಾದ ಕ್ರಮದಲ್ಲಿ ಉಪಯೋಗಿಸಿದರೆ ಅಪೌಷ್ಠಿಕತೆ ಹೋಗಲಾಡಿಸಲು ಸಾಧ್ಯವಿದೆ ಎಂದರು.
ಸರಕಾರದ ಆದೇಶದಂತೆ ನಿಮ್ಮ ಮನೆ ಬಾಗಿಲಿಗೆ ಬಂದು ಪೌಷ್ಠೀಕಾಂಶವುಳ್ಳ ಪದಾರ್ಥಗಳನ್ನು ನೀಡುತ್ತಿದ್ದು ಮಕ್ಕಳಿಗೂ ಈ ಪದಾರ್ಥಗಳನ್ನು ತಿನ್ನಿಸುವ ಮೂಲಕ ದೇಶ ಅಪೌಷ್ಠಿಕ ಮುಕ್ತಗೊಳಿಸಲು ತಾವೆಲ್ಲರು ಸಹಕರಿಸಬೇಕೆಂದರು.ಆರು ತಿಂಗಳಿಂದ ಮೂರು ವರ್ಷದ ವರೆಗಿನ ಎಲ್ಲಾ ಮಕ್ಕಳಿಗು ಈ ಪದಾರ್ಥಗಳನ್ನು ಕೊಡುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ೯೧ ಜನ ಮಕ್ಕಳಿಗೆ,೧೫ ಜನ ಗರ್ಭೀಣಿಯರಿಗೆ,೧೫ ಜನ ಬಾಣಂತಿಯರಿಗೆ ಹಾಗು ೯ ಜನ ವಲಸೆ ಬಂದ ಮಹಿಳೆಯರಿಗೆ ಆಹಾರ ಧಾನ್ಯಗಳ ಪದಾರ್ಥ ನೀಡಲಾಯಿತು.ಈ ಸಂದರ್ಭದಲ್ಲಿ ಅಡುಗೆ ಸಹಾಯಕಿ ನಿಂಗಮ್ಮ ಮತ್ತು ನೀಲಮ್ಮ,ಆಶಾ ಕಾರ್ಯಕರ್ತೆ ಶಾಂತಮ್ಮ ಸೇರಿದಂತೆ ಅನೇಕ ಜನ ಮಹಿಳೆಯರು ಮತ್ತು ಮಕ್ಕಳಿದ್ದರು.