ನಿಸ್ವಾರ್ಥ ಕಾರ್ಯಕ್ಕೊಂದು ಸಲಾಂ: ಹುಸೇನ್ ಮಾಸ್ಟರ್ ಕಾರ್ಯಕ್ಕೆ ಶಿಕ್ಷಕಿಯ ಮೆಚ್ಚುಗೆ

0
43

ಕಲಬುರಗಿ: ನಲಿಕಲಿ ರಾಜ್ಯ ಸಂಪನ್ಮೂಲ ವ್ಯಕ್ತಿ ಹಾಗೂ ಬಸನಾಳ್ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ಹುಸೇನ್‌ಸಾಬ್ ವಡಗೇರಿ ಅವರು ನಲಿಕಲಿ ವಿಡಿಯೋ ಕಾನ್ಫೆರೆನ್ಸ್ ಮೂಲಕ ನಿಸ್ವಾರ್ಥ ಕಾರ್ಯವನ್ನು ಕೈಗೊಂಡಿದ್ದಕ್ಕೆ ಅವರಿಗೊಂದು ಸಲಾಂ ಎಂದು ಚಿತ್ತಾಪೂರ್ ತಾಲ್ಲೂಕಿನ ಬೆಳಗುಂಪದಾದ ಸಹ ಶಿಕ್ಷಕಿ ಸನಿತಾ ಮಾಳಗಿ ಅವರು ಬಣ್ಣಿಸಿದ್ದಾರೆ.

ಹುಸೇನ್ ವಡಗೇರಿ ಅವರ ಸಾರಥ್ಯದಲ್ಲಿ ೨೩ ದಿನದ ವಿಡಿಯೋ ಕಾನ್ಫೆರೆನ್ಸ್ ಜರುಗಲಿದ್ದು ಎಲೆಮರೆಯ ಕಾಯಿಯಂತೆ ಇರುವ ಜಿಲ್ಲೆಯ ಅನೇಕ ಶಿಕ್ಷಕರನ್ನು ಗುರುತಿಸಿ ಅವರಿಗೆ ಒಂದು ವೇದಿಕೆ ಕೊಡಲು ಮತ್ತು ಅನೇಕ ಶಿಕ್ಷಕರಲ್ಲಿ ಉತ್ಸಾಹ ಮೂಡಿಸಲು ಸತತ ಪ್ರಯತ್ನ ಮತ್ತು ರ್ಶರಮದಿಂದ ಶಿಕ್ಷಕರಿಗೆ ಒಂದು ವೇದಿಕೆ ಪ್ರತಿನಿತ್ಯ ಕಲ್ಪಿಸಿಕೊಡುವಂತಹ ಮಹೋನ್ನತ ಕಾರ್ಯವನ್ನು ಮಾಡುತ್ತಿರುವುದನ್ನು ನಾವು ಮರೆಯುವಂತಿಲ್ಲ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Contact Your\'s Advertisement; 9902492681

ಯಾವುದೋ ಮೂಲೆಯಲ್ಲಿ ಇರುವ ಶಿಕ್ಷಕರ ಕಾರ್ಯ ಗುರುತಿಸಿ ಇಂತಹ ನಿಸ್ವಾರ್ಥ ಸೇವೆ ಮಾಡುವ ಹಾಗೂ ಪ್ರತಿನಿತ್ಯ ಪತ್ರಿಕೆಗಳಲ್ಲಿ ವರದಿ ಮಾಡಿ ಎಲ್ಲರನ್ನೂ ಹೊಗಳಿ ಅವರು ಮಾತ್ರ ಗೌಣವಾಗಿ ಇದ್ದು ಪತ್ರಿಕೆಯಲ್ಲಿ ನಮ್ಮನ್ನು ರಾಜ್ಯ ಗುರುತಿಸುವ ಕಾರ್ಯ ಮಾಡುತ್ತಿದ್ದಾರೆ ಎಂದು ಅವರು ಶ್ಲಾಘಿಸಿದ್ದಾರೆ. ಈಗಿನ ಕಾಲದಲ್ಲಿ ನಮ್ಮ ಹತ್ತಿರ ಇರುವವರೇ ನಮಗೆ ಗುರುತಿಸುವುದಿಲ್ಲ. ಪತ್ರಿಕೆಗೆ ಹಾಕಿ ವೇದಿಕೆ ಕೊಡುವುದು ದೂರದ ಮಾತು. ಆದಾಗ್ಯೂ, ಹುಸೇನ್ ವಡಗೇರಿ ಶಿಕ್ಷಕರು ನಲಿಕಲಿ ನಂದಾದೀಪದಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ಸದಸ್ಯರ ಪರವಾಗಿ ಹಾಗೂ ಜಿಲ್ಲೆಯ ಎಲ್ಲ ಶಿಕ್ಷಕರ ಪರವಾಗಿ ಅವರನ್ನು ಅಭಿನಂದಿಸುವೆ ಎಂದು ಅವರು ತಿಳಿಸಿದ್ದಾರೆ.

ಹುಸೇನ್ ವಡಗೇರಿ ಮಾಸ್ಟರ್ ಅವರ ವೃತ್ತಿ ಜೀವನದ ಯಶೋಗಾಥೆ ಕೇಳಿದರೆ ಮೈಮನ ರೋಮಾಂಚನವಾಗುತ್ತದೆ. ಅವರು ಕೂಡ ದೊಡ್ಡ ಸಾಧಕರು. ಅವರ ನೋವು ಮತ್ತು ಅವರು ನಕ್ಸಲ್‌ಪೀಡಿತ ಸ್ಥಳದಲ್ಲಿ ಮಾಡಿದ ಅವರ ಸಾಧನೆ ನಮಗೆಲ್ಲ ಮಾದರಿ ಎಂದು ಅವರು ಹೇಳಿದ್ದಾರೆ. ಕೃಷ್ಣಶರ್ಮಾ ಅವರು ಬರೆದ ಪುಸ್ತಕದಲ್ಲಿ ಬರುವ ಸಣ್ಣತಮ್ಮಯ್ಯ ಜೀವನ ಮತ್ತು ಸಾಧನೆಯನ್ನು ಬಹುತೇಕ ಅವರ ಸಾಧನೆ ಜೀವನ ವೃತ್ತಾಂತ ಹೋಲುತ್ತದೆ ಎಂದು ವಿಶ್ರಾಂತ ನಿರ್ದೇಶಕ ಬೆಳ್ಳಶೆಟ್ಟಿ ಹಾಗೂ ಅಪರ ಆಯುಕ್ತಾಲಯದ (ಯೋಜನೆ) ಉಪ ನಿರ್ದೇಶಕ ಸಕ್ರೆಪ್ಪಗೌಡ ಬಿರಾದಾರ್, ರಾಜ್ಯ ಸಂಪನ್ಮೂಲ ವ್ಯಕ್ತಿ ರವೀಂದ್ರ ಆರ್.ಡಿ. ಅವರು ಹೇಳುವುದರ ಜತೆಗೆ ಇಂತಹ ಸಾಧಕರು ನಮ್ಮಿಂದ ಕಣ್ಮರೆ ಆಗಬಾರದು ಎಂದು ಹೇಳಿದ್ದು ಅವರ ಕಾರ್ಯ ಸಾಧನೆಗೆ ಸಿಕ್ಕ ಗೌರವ ಎಂದು ಅವರು ಬಣ್ಣಿಸಿದ್ದಾರೆ.

ಹುಸೇನ್ ಮಾಸ್ಟರ್ ಅವರ ಕಾರ್ಯ ನಮಗೆಲ್ಲ ಸ್ಫೂರ್ತಿ. ಜತೆಗೆ ಅವರ ಕಾರ್ಯಕ್ಕೆ ಜಿಲ್ಲೆಯ ಎಂಆರ್‌ಪಿ ಮತ್ತು ಅಧಿಕಾರಿಗಳು ಸಹಕಾರ ನೀಡುತ್ತಿರುವುದು ಹೆಮ್ಮೆ. ಈ ಕಾರ್ಯ ರಾಜ್ಯವ್ಯಾಪಿ ಪಸರಿಸಲಿ. ಜಿಲ್ಲೆಯ ಹೆಸರು ಎಲ್ಲ ಕಡೆಗೆ ಹಬ್ಬಲಿ, ವಿಡಿಯೋ ಕಾನ್ಫೆರೆನ್ಸ್ ಕಾರ್ಯ ಯಶಸ್ವಿಯಾಗಲಿ ಎಂದು ನಲಿಕಲಿ ನಂದಾದೀಪದ ಪರವಾಗಿ ಶುಭ ಹಾರೈಸುತ್ತೇನೆ ಎಂದು ಅವರು ಹೇಳಿದ್ದಾರೆ.

ಮುಂದಿನ ಸಿದ್ದತೆಯೊಂದಿಗೆ ಬೆಳಿಗ್ಗೆ ೬ ಗಂಟೆ ಆದರೆ ಸಾಕು ಮೊದಲ ಸಂದೇಶ ವಿಡಿಯೋ ಕಾನ್ಫೆರೆನ್ಸ್‌ನ ಸಾವಿರಾರು ಸುಗಮಕಾರರ ಮೊಬೈಲ್‌ನಲ್ಲಿ ಹೊಸ ವಿಷಯ ಹೊತ್ತು ಹೊಸ ಸಾಧಕರನ್ನು ಹಾಗೂ ಸ್ಥಳೀಯ ಉಪನ್ಯಾಸಕರು ಹಾಗೂ ರಾಜ್ಯಾದ್ಯಂತ ಬೇರೆ ಬೇರೆ ಪರಿಣಿತಿ ವ್ಯಕ್ತಿಗಳಿಂದ ಶೈಕ್ಷಣಿಕ ರಸದೌತಣವನ್ನು ನಮ್ಮೆಲ್ಲರಿಗೂ ನೀಡುತ್ತಿರುವುದು ನಿಜವಾಗಿಯೂ ನಾವು ದಿನ ಶಾಲೆಗೆ ಹೋಗಿ ಕಾರ್ಯ ಮಾಡುತ್ತಿದ್ದೇವೆಯೋ ಎಂಬಂತೆ ಅನಿಸುತ್ತದೆ. ಈ ವಿಡಿಯೋ ಕಾನ್ಫೆರೆನ್ಸ್‌ನಿಂದ ಸಮಯ ಹೇಗೆ ಹೋಗುತ್ತದೆ ಎಂದು ಸಹ ತಿಳಿಯುತ್ತಿಲ್ಲ. ನಮ್ಮ ಕ್ರಿಯಾಶೀಲತೆಗೆ ಇದೊಂದು ಅದ್ಭುತವಾದ ಮೈಲುಗಲ್ಲು ಹಾಕಿ ಹುಸೇನ್ ಮಾಸ್ಟರ್ ಅವರ ಕಾರ್ಯ ಅವಿಸ್ಮರಣೀಯ ಎಂದು ಅವರು ಗುಣಗಾನ ಮಾಡಿದ್ದಾರೆ.

ಮತ್ತೆ ಕಾರ್ಯಕ್ರಮಕ್ಕೆ ಮೆರುಗು ಕೊಡುವುದರ ಜತೆಗೆ ನಾಲ್ಕು ಜನ ಮಾಡುವ ಕೆಲಸವನ್ನು ತಾವೊಬ್ಬರೇ ಮಾಡುವುದು ಸಾಮಾನ್ಯ ಮಾತಲ್ಲ. ಕಾನ್ಫೆರೆನ್ಸ್‌ನಲ್ಲಿ ಬಂದವರನ್ನು ಗುರುತಿಸಿ ಅವರಿಗೆ ಶುಭ ಹಾರೈಸುವುದು, ಪ್ರತಿಯೊಬ್ಬ ಅಧಿಕಾರಿಗಳನ್ನು ನಾಜೂಕಾಗಿ ಮಾತು ಆಡಿಸುವ ರೀತಿ, ಸಾಧಕರು ಮತ್ತು ಉಪನ್ಯಾಸಕರು ಹೇಳುವ ಎಲ್ಲ ವಿಚಾರಗಳನ್ನು ಬರೆದುಕೊಂಡು ಸಾವಿರಾರು ಶಿಕ್ಷಕರಿಗೆ ಕಾರ್ಯಕ್ರಮದ ಸಂದೇಶ ತಲುಪಿಸಿ ಮತ್ತೆ ಹಲವಾರು ಪತ್ರಿಕೆಗಳಿಗೆ ವರದಿ ಕಳಿಸಿ ತಾವು ಮಾತ್ರ ಮೌನವಹಿಸುವ ಹಾಗೂ ಇಷ್ಟು ಸಂದೇಶ ಬರೆದು ಎಲ್ಲರ ಹೆಸರು ಅದರಲ್ಲಿ ಇರುತ್ತದೆ. ಆದಾಗ್ಯೂ, ಆ ವರದಿಯಲ್ಲಿ ತಮ್ಮ ಹೆಸರನ್ನು ಮರೆತು ಹೋಗುವ ವ್ಯಕ್ತಿಯನ್ನು ನೋಡಿದ್ದು ನಾನು ಇದೇ ಮೊದಲು ಎಂದು ಹುಸೇನ್ ಮಾಸ್ಟರ್ ಅವರು ಪ್ರಚಾರ ಬಯಸದೇ ಇರುವುದರ ಕುರಿತು ಬಹಿರಂಗವಾಗಿಯೇ ಅವರು ಶ್ಲಾಘಿಸಿದ್ದಾರೆ.

ಶೈಕ್ಷಣಿಕ ಚಿಂತನೆಯ ಜತೆಗೆ ಇಬ್ಬರನ್ನೂ ಗುರುತಿಸಿ ಬೆಳೆಸುವ ರೀತಿ ನೋಡಿ ಆಶ್ಚರ್ಯವಾಗುತ್ತದೆ. ಇಂತಹ ಸಾಧಕನ ಕುರಿತು ಒಂದರೆಡು ಸಾಲು ಬರೆಯಬೇಕು ಹಾಗೂ ಎಲ್ಲರ ಕಾರ್ಯ ಹೊಗಳಿ ಪ್ರೋತ್ಸಾಹ ನೀಡುವ ಹುಸೇನ್ ಮಾಸ್ಟರ್ ಅವರನ್ನು ನಾವು ಯಾಕೆ ಹೊಗಳಬಾರದು ಮತ್ತು ಪ್ರೋತ್ಸಾಹದ ನುಡಿಗಳನ್ನು ಆಡಿ ಅವರ ಕಾರ್ಯ ಇನ್ನೂ ಘಟ್ಟಿಗೊಳಿಸಬಾರದು ಎಂಬ ಯೋಚನೆಯಿಂದ ಹಾಗೂ ಅವರ ಕಾರ್ಯ ಒಂದು ಸಲಾಂ ಹೇಳುವ ಉದ್ದೇಶದಿಂದ ಅವರ ಕುರಿತು ಬರೆದಿರುವೆ. ನಮಗೆ ಪ್ರೋತ್ಸಾಹ ನೀಡಿದವರಿಗೆ ನಾವು ಪ್ರೋತ್ಸಾಹಿಸೋಣ ಎಂದು ಅವರು ಕರೆ ನೀಡಿದ್ದಾರೆ.

ಅಭಿನಂದನೆಗಳು ಹುಸೇನ್ ಸರ್. ಒಂದು ಮಾತು ನನಗೆ ಯಾವಾಗಲೂ ಕಾಡುತ್ತಿರುತ್ತದೆ. ಒಬ್ಬ ವ್ಯಕ್ತಿಯನ್ನು ನಾವು ಹೊಗಳಬೇಕಾದರೆ ನಮ್ಮಲ್ಲಿ ಅಹಂ ನಾಶವಾಗಬೇಕು. ಆಗಲೇ ಇನ್ನೊಬ್ಬ ವ್ಯಕ್ತಿ ಬಗ್ಗೆ ಒಳ್ಳೆಯ ಮಾತುಗಳನ್ನಾಡಲು ಸಾಧ್ಯ. ಇದು ಅಕ್ಷರಶ: ಸತ್ಯ ಅನ್ನಿಸುತ್ತದೆ. ಸರ್, ನಿಮ್ಮ ಪಯಣ ಹೀಗೆಯೇ ಸಾಗಲಿ ಎಂದು ನಲಿಲಿ ನಂದಾದೀಪದ ಸದಸ್ಯರೆಲ್ಲರೂ ಹಾರೈಸುತ್ತೇವೆ ಎಂದು ಅವರು ಮನದುಂಬಿ ಹರಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here