ಆಳಂದ: ಬಸವ ಜಯಂತಿ ನಿಮಿತ್ತ ಪಟ್ಟಣದಲ್ಲಿ ಲಿಂಗಾಯತ ಯುವ ಕಾರ್ಯಕರ್ತರೊಬ್ಬರು ಹಸಿವಿನಿಂದ ಬಳಲುತ್ತಿರುವ ಲಾಕ್‌ಡೌನ್ ಸಂತ್ರಸ್ತ ಬಡವರು ಮತ್ತು ನಿರ್ಗತಿಕ ಕುಟುಂಬಗಳಿಗೆ ನೆರವು ಕಲ್ಪಿಸಲು ಮುಂದಾಗಿ ೧೦೦ ಕುಟುಂಬಗಳಿಗೆ ದಿನಸಿ ಸಾಮಗ್ರಿಗಳನ್ನು ವಿತರಿಸಿ ಮಾನವೀತೆ ಮೆರೆದಿದ್ದಾರೆ.
ಪಟ್ಟಣದ ಹನುಮಾನ ಬಡಾವಣೆಯ ರೇವಣಸಿದ್ಧಪ್ಪ ನಾಗೂರೆ ಎಂಬುವರೆ ದಿನಸಿ ಸಾಮಗ್ರಿಗಳ ೫೦ ಕಿಟ್ ಸಿದ್ಧಪಡಿಸಿ ಹಂಚಿಕೆ ಮಾಡುವಂತೆ ತಹಸೀಲ್ದಾರ ದಯಾನಂದ ಪಾಟೀಲ ಅವರಿಗೆ ಗುರುವಾರ ಹಸ್ತಾಂತರಿಸಿದರು. ಅಲ್ಲದೆ, ಇನ್ನೂಳಿದ ೫೦ ಕಿಟ್‌ಗಳನ್ನು ಅರ್ಹರನ್ನು ಗುರುತಿಸಿ ಬಡಾವಣೆಗಳಲ್ಲಿ ಹಂಚಿಕೆ ಮಾಡುವುದಾಗಿ ತಿಳಿಸಿದರು.
ಕುಟುಂಬಗಳಿಗೆ ಗೋಧಿ ಹಿಟ್ಟು, ಸಕ್ಕರೆ, ಚಹಾ ಪುಡಿ, ರವಾ ಎಣ್ಣೆ, ಜೀರಗಿ, ಸಾಸಿವೆ ಮತ್ತು ಉಪ್ಪು ಒಳಗೊಂಡ ಸಿದ್ಧಪಡಿಸಿದ ಕಿಟ್‌ಗಳನ್ನು ಸ್ವೀಕರಿಸಿದ ತಹಸೀಲ್ದಾರ ಅವರು ಜನರ ಹಸಿವು ನಿಗಿಸಲು ಇಂದಿನ ಅಗತ್ಯವಾಗಿದೆ. ಇದಕ್ಕಾಗಿ ತಾಲೂಕು ಆಡಳಿತಕ್ಕೆ ಸಾಮಗ್ರಿಗಳ ಕಿಟ್ ನೀಡಿದ ದಾನಿಗಳಿಗೆ ಅವರು ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಸತೀಶ ಪಾಟೀಲ ಖಾನಾಪೂರ, ಪುರಸಭೆ ಸದಸ್ಯ ಆಸೀಫ್ ಚೋಯಿಸ್, ವಿಎ ಆನಂದ ಪೂಜಾರಿ ಮತ್ತಿತರರು ಇದ್ದರು.