ವಿದ್ಯಾರ್ಥಿನಿಯರಿಗೆ ತರಬೇತಿ ಶಿಬಿರ, ಬದುಕಿಗೆ ಚೈತನ್ಯ ತುಂಬುವ ರಂಗಭೂಮಿ: ಘಂಟಿ

0
94

ಕಲಬುರಗಿ: ಸಂವಾದ ಯುವ ಸಂಪನ್ಮೂಲ ಕೇಂದ್ರದ ವತಿಯಿಂದ ನಗರದ ಎಂಎಂಕೆ ಚಿತ್ರಕಲಾ ಕಾಲೇಜಿನಲ್ಲಿ ‘ಸಮ್ಮರ್ ಸಂವಾದ’ ವಿದ್ಯಾರ್ಥಿನಿಯರಿಗಾಗಿ ಬೇಸಿಗೆ ತರಬೇತಿ ಶಿಬಿರ ಮೇ 11 ರಿಂದ 15ರವರೆಗೆ ನಡೆಯಿತು.

ಬಿಳಿ ಬಣ್ಣದ ಕಾಗದದ ಮೇಲೆ ತಮ್ಮ ಹೆಸರುಗಳನ್ನು ಬರೆದು ತಮ್ಮ ಕನಸುಗಳನ್ನು ಹೇಳಿಕೊಳ್ಳುವ ಮೂಲಕ ವಿದ್ಯಾರ್ಥಿನಿಯರು ಶಿಬಿರಕ್ಕೆ ಚಾಲನೆ ನೀಡಿದರು. ವಿವಿಧ ಕ್ಷೇತ್ರಗಳ ಸಂಪನ್ಮೂಲಗಳ ವ್ಯಕ್ತಿಗಳು ವಿದ್ಯಾರ್ಥಿನಿಯರಿಗೆ ಮಾರ್ಗದರ್ಶನ ನೀಡಿದರು.

Contact Your\'s Advertisement; 9902492681

ರಂಗಭೂಮಿ ಕುರಿತು ಉಪನ್ಯಾಸ ನೀಡಿದ ರಂಗಕಮರ್ಿ ಶಂಕರಯ್ಯ ಘಂಟಿ, ರಂಗಭೂಮಿಯು ಪ್ರತಿಯೊಬ್ಬರ ಜೀವನದ ಮೇಲೆ ಗಾಢ ಪ್ರಭಾವ ಬೀರುವುದಲ್ಲದೇ ಹೊಸ ಆಲೋಚನೆಗಳಿಗೆ ಎಡೆ ಮಾಡಿಕೊಡುತ್ತದೆ. ಹಿರಿತೆರೆ ಮತ್ತು ಕಿರುತೆರೆಗಿಂತ ಭಿನ್ನವಾದ ರಂಗಭೂಮಿಯು ಬದುಕಿನ ಹಲವು ಪಾಠಗಳನ್ನು ಕಲಿಸುತ್ತದೆ ಎಂದರು.

ನಾಟಕದೊಳಗಿನ ಪಾತ್ರಗಳು, ಅವರಾಡುವ ಸಂಭಾಷಣೆ, ಬೇರೆ ಬೇರೆ ಸ್ವರೂಪದಲ್ಲಿ ಹಾದು ಹೋಗುವ ಸಂಕೇತಗಳು ಮನಸ್ಸಿನಲ್ಲಿ ಅಚ್ಚಳಿಯದೇ ಉಳಿಯುತ್ತವೆ. ಉತ್ತಮ ದೇಶ ಮತ್ತು ಸಮಾಜ ಕಟ್ಟುವ ಕ್ರಿಯೆಯಲ್ಲೂ ಕೂಡ ರಂಗಭೂಮಿ ಪರಿಣಾಮಕಾರಿಯಾಗಿದೆ ಎಂದು ಅವರು ತಿಳಿಸಿದರು.

ಕರಾಟೆಪಟು ಮನೋಹರ ಮಾತನಾಡಿ, ಸಮಾಜದಲ್ಲಿ ಹಿಂಸಾಚಾರದಂತಹ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ಎಚ್ಚರ ವಹಿಸೇಕು. ಸ್ವಯಂ ರಕ್ಷಣೆ ಮಾಡಿಕೊಳ್ಳುವುದನ್ನು ಕಲಿಯಬೇಕು. ಕರಾಟೆ ಕಲಿಕೆಯು ಆತ್ಮರಕ್ಷಣೆಗೆ ಸಹಕಾರಿಯಾಗುತ್ತದೆ ಎಂದರು.

ಪ್ರಾಧ್ಯಾಪಕ ಶಾಂತಲಿಂಗಯ್ಯ ಮಠಪತಿ ಅವರು ಜಾನಪದ ನೃತ್ಯ ಕಲಿಸಿದರು. ಆತ್ಮವಿಶ್ವಾಸ ವೃದ್ಧಿ ಕುರಿತು ಮಾತನಾಡಿದ್ದು ಅಲ್ಲದೇ ಅವರು ವಿವಿಧ ಆಟಗಳನ್ನು ಹೇಳಿಕೊಟ್ಟರು.

ಪತ್ರಕರ್ತ ಸಾಜಿದ್ ಅಲಿ ಅವರು ವೃತ್ತಿ ಮಾರ್ಗದರ್ಶನದ ಕುರಿತು ಉಪನ್ಯಾಸ ನೀಡಿದರು. ಗಾಯಕರಾದ ಸಂದೀಪ್.ಬಿ, ಕಲ್ಯಾಣಿ ಭಜಂತ್ರಿ, ನಾಗರಾಜ್ ಅವರು ಗೀತೆ ಗಾಯನ ಹೇಳಿಕೊಟ್ಟರು. ಚಿತ್ರ ಕಲಾವಿದ ಪರಶುರಾಮ ಅವರು ಬಲೂನ್ನಲ್ಲಿ ಮುಖವಾಡ ರಚಿಸುವುದನ್ನು ಹೇಳಿಕೊಟ್ಟರು.

ಮನೋಹರ ಅವರು ಜಪಾನಿ ಮಾದರಿಯ ಕರಾಟೆ ಕಲಿಸಿದರು.

ಶಿಬಿರದ ಸಮಾರೋಪ ಸಮಾರಂಭದಲ್ಲಿ ವಿದ್ಯಾರ್ಥಿನಿಯರು ಐದು ದಿನಗಳ ತಮ್ಮ ಕಲಿಕೆ ಮತ್ತು ಪಡೆದ ಮಾರ್ಗದರ್ಶನ ಕುರಿತು ಭಾವನೆಗಳನ್ನು ಹಂಚಿಕೊಂಡರು. ಯಾರೊಂದಿಗೂ ಹೆಚ್ಚು ಮಾತನಾಡದ ವಿದ್ಯಾರ್ಥಿನಿಯರು ಕೂಡ ಮುಕ್ತವಾಗಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

ಕವಯತ್ರಿ ರೇಣುಕಾ ಹೆಳವರ ಮತ್ತು ನಾಟಕಕಾರ ಸಾಯಿಬಣ್ಣ ಅತಿಥಿಯಾಗಿ ಪಾಲ್ಗೊಂಡಿದ್ದರು.  ಪ್ರಮುಖರಾದ ಡಾ. ಕೈಲಾಶ್ ದೋಣಿ, ರುಕ್ಮಿಣಿ ನಾಗಣ್ಣವರ, ಪೂಜಾ ಸಿಂಗೆ, ಸಿದ್ಧಾರ್ಥ ಮೇಲಿನಕೇರಿ, ಸುನೀಲ್ ತಳಕೇರಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here