ಸುರಪುರ ಎಐಟಿಯುಸಿ ಕಾರ್ಯಾಲಯದಲ್ಲಿ ವಿಶ್ವ ಕಾರ್ಮಿಕರ ದಿನಾಚರಣೆ

0
15

ಸುರಪುರ: ಇಂದು ಜಗತ್ತಿನ ಎಲ್ಲಾ ಕಾರ್ಮಿಕರು ಸಂದಿಗ್ಧ ಸ್ಥಿತಿಯಲ್ಲಿದ್ದೇವೆ,ಸರಿಯಾದ ಯೊಜನೆಗಳಿಲ್ಲದೆ ಕಾರ್ಮಿಕರ ಬದುಕು ಬೀದಗೆ ಬಿದ್ದಿದೆ.ಆದರೆ ಸರಕಾರಗಳು ಕಾರ್ಮಿಕರ ಜೀವನದ ಬಗ್ಗೆ ಕಿಂಚಿತ್ತೂ ಕಾಳಜಿ ತೋರದೆ ತಮ್ಮಿಷ್ಟದಂತೆ ಯೋಜನೆ ರೂಪಿಸಿ ಕಾರ್ಮಿಕರ ಬದುಕು ನರಕಗೊಳಿಸುತ್ತಿವೆ ಎಂದು ಎಐಟಿಯುಸಿ ಜಿಲ್ಲಾ ಉಪಾಧ್ಯಕ್ಷ ದೇವಿಂದ್ರಪ್ಪ ಪತ್ತಾರ ಬೇಸರ ವ್ಯಕ್ತಪಡಿಸಿದರು.

ನಗರದ ಗುಡಾಳಕೇರಿಯಲ್ಲಿನ ಎಐಟಿಯುಸಿ ತಾಲೂಕು ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಕಾರ್ಮಿಕರ ದಿನವನ್ನು ಸರಳವಾಗಿ ಆಚರಿಸಿ,ಕಾರ್ಮಿಕರ ಬೇಡಿಕೆಗಳ ಭಿತ್ತಿ ಪತ್ರಗಳ ಪ್ರದರ್ಶನ ಮಾಡಿ ಮಾತನಾಡಿ,ಇಂದು ಕೊರೊನಾ ಕಾರ್ಮಿಕರ ಸಂಪೂರ್ಣ ಬದುಕನ್ನೆ ನಾಶ ಮಾಡಿದೆ.ದುಡಿಯಲು ಕೆಲಸವಿಲ್ಲ,ಸರಕಾರಗಳು ಕಾರ್ಮಿಕರ ಬದುಕಿಗೆ ಆಸರೆಯಾಗುತ್ತಿಲ್ಲ.ಕೇವಲ ಆಹಾರ ಧಾನ್ಯಗಳೆಂದು ಅಕ್ಕಿ ನೀಡಿದ ಮಾತ್ರಕ್ಕೆ ಜೀವನ ನಡೆಸಲಾಗದು.

Contact Your\'s Advertisement; 9902492681

ಇದರೊಂದಿಗೆ ಇನ್ನು ಅನೇಕ ಅಗತ್ಯ ವಸ್ತುಗಳ ಅವಶ್ಯಕತೆಯಿದೆ ಅವುಗಳನ್ನು ಪೂರೈಸುವಲ್ಲಿ ಸರಕಾರಗಳು ಸಂಪೂರ್ಣವಾಗಿ ಸೋತಿವೆ.ಇದರಿಂದ ಕಾರ್ಮಿಕರು ದೈನಂದಿನ ಬದುಕಿಗೆ ಕಷ್ಟಪಡುವಂತಾಗಿದೆ.ಆದ್ದರಿಂದ ಸರಕಾರ ಕೂಡಲೆ ಕಾರ್ಮಿಕರಿಗೆ ಪರಿಹಾರ ಧನವನ್ನು ಘೋಷಣೆ ಮಾಡಬೇಕೆಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ದೇವೆಂದ್ರಪ್ಪ ನಗರಗುಂಡ,ಮಲ್ಲಯ್ಯ ವಗ್ಗಾ,ಪರಶುರಾಮ ಹುಲಕಲ್,ರಂಗನಾಥ ದೇಸಾಯಿ,ತಿಮ್ಮಯ್ಯ ತಳವಾರ್,ಯಲ್ಲಪ್ಪ ಬಡಿಗೇರ್ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here