ಸುರಪುರ: ಸರಕಾರ ಬರೀ ಕೊರೊನಾ ನಿಯಮಗಳನ್ನು ಪಾಲಿಸುವ ಬಗ್ಗೆ ಮಾತ್ರ ಆದೇಶ ಮಾಡುತ್ತಿದೆ,ಆದರೆ ಬಡ ಕಾರ್ಮಿಕರ ಜೀವನದ ಬಗ್ಗೆ ಕಾಳಜಿ ತೋರುತ್ತಿಲ್ಲ.ಆದ್ದರಿಂದ ಸರಕಾರ ಕೂಡಲೆ ಕಾರ್ಮಿಕರ ನೆರವಿಗೆ ಬರಬೇಕೆಂದು ಪ್ರಾಂತ ಕೂಲಿಕಾರರ ಸಂಘದ ಅಧ್ಯಕ್ಷೆ ಸಿದ್ದಮ್ಮ ಭಜಂತ್ರಿ ಆಗ್ರಹಿಸಿದರು.
ತಾಲೂಕಿನ ಬೋನಾಳ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಕಾರ್ಮಿಕರ ದಿನದ ಸಂದರ್ಭದಲ್ಲಿ ಪ್ರಾಂತ ಕೂಲಿ ಕಾರ್ಮಿಕರ ಸಂಘದ ಧ್ವಜಾರೋಹಣ ನೆರವೇರಿಸಿ ಮಾತನಾಡಿ,ಇಮದು ಲಾಕ್‌ಡೌನ್ ಕಾರಣದಿಂದ ನಮಗೆಲ್ಲ ಕೆಲಸವಿಲ್ಲದೆ ತುಂಬಾ ತೊಂದರೆ ಪಡುವಂತಾಗಿದೆ.ಸರಕಾರ ಬರೀ ಅಕ್ಕಿ ನೀಡಿದೆ ಇದರಿಂದ ಬಡವರ ಜೀವನ ನಡೆಯದು,ಕೂಡಲೆ ಎಲ್ಲಾ ಕಾರ್ಮಿಕರಿಗೆ ಉದ್ಯೋಗ ನೀಡಿ ಕನಿಷ್ಟ ೬೫೦ ರೂಪಾಯಿ ಕೂಲಿ ನಿಗದಿ ಮಾಡಬೇಕೆಂದು ಆಗ್ರಹಿಸಿದರು.ಇದೇ ಸಂದರ್ಭದಲ್ಲಿ ಸರಕಾರದ ವಿರುದ್ಧ ಘೋಷಣೆ ಕೂಗಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ರಾಜು ದೊಡ್ಮನಿ,ದುರ್ಗಪ್ಪ ಮಾಲಗತ್ತಿ,ಹಣಮಂತ ದೊಡ್ಮನಿ, ಪರಶುರಾಮ ಕೊಡೆಕಲ್,ಜುಲೆಕಾ ಬೇಗಂ ಗೋಡೆಕಾರ್ ಸೇರಿದಂತೆ ಅನೇಕರಿದ್ದರು.