ಕಲಬುರಗಿ: ಕೂಲಿ ಕಾರ್ಮಿಕರು ಕಷ್ಟವನ್ನು ಎದುರಿಸುತ್ತಾರೆ, ಖುಷಿಯನ್ನು ಹಂಚುತ್ತಾರೆ. ನೋವನ್ನು ನುಂಗುತ್ತಾರೆ, ದೇಶವನ್ನು ಕಟ್ಟುತ್ತಾರೆ. ಇವರು ಶ್ರಮಜೀವಿಗಳು. ನಿಜ, ಕಾರ್ಮಿಕರು ಇಲ್ಲದ ದೇಶವನ್ನು ಊಹಿಸಲು ಸಾಧ್ಯವೇ ಇಲ್ಲ ಎಂದು ಕಲಬುರಗಿ ನ.2 ಡಿಪೋದ ಕಾರ್ಮಿಕ ಸಂಘದ ಅಧ್ಯಕ್ಷ ನಂದಪ್ಪ ಜಮಾದಾರ ಅವರು ಕೆಲವು ಬೆಡಿಕೆಗಳ ಬಗ್ಗೆ ಬಿಟ್ಟಿ ಪತ್ರ ಪ್ರದರ್ಶನ ಮಾಡಿ ಹೇಳಿದರು.
ಕರೋನಾ ವೈರಸ್‍ನಿಂದ ಲಾಕ್‍ಡೌನ್ ಆಗಿರುವುದರಿಂದ ತಮ್ಮ ಮನೆಯಲ್ಲಿ ಕಾರ್ಮಿಕರ ದಿನಾಚರಣೆಯನ್ನು ಆಚರಿಸಿ ಮಾತನಾಡುತ್ತಾ ಅವರು, ಇಂದು ಕಾರ್ಮಿಕರ ದಿನ. ಹೀಗಾಗಿ, ಜಗತ್ತಿನಾದ್ಯಂತ ಕಾರ್ಮಿಕರನ್ನು, ಅವರ ಶ್ರಮವನ್ನು ಇಂದು ಗೌರವಿಸಲಾಗುತ್ತದೆ ಎಂದರು. ಕೋವಿಡ್ -19 ಲಾಕ್‍ಡೌನ್ ಸಂತ್ರಸ್ತರ ನೇರವಿಗೆ ಧಾವಿಸಿ ಕೈಲಾದ ಸಹಾಯವನ್ನು ಮಾಡಬೇಕು. ವೇತನ ರಕ್ಷಿಸಿ, ಆರ್ಥಿಕತೆ ಉಳಿಸಿ, ದಿನದ ಎಂದು ಗಂಟೆ ಮಾತ್ರ ಕೆಲಸ ಮಾಡುತ್ತೇವೆ. ಸರ್ವರಿಗೂ ಉಚಿತ ಸುರಕ್ಷಿತ ಲಸಿಕೆ, ಕೋವಿಡ್ ಪರೀಕ್ಷೆ ನಡೆಸಿ ಚಿಕಿತ್ಸೆ ಒದಗಿಸಿ, ಅಸಂಘಟಿತರಿಗೆ ಆರ್ಥಿಕ ನೆರವು ನೀಡಬೇಕು ಹಾಗೂ ಸೋಂಕಿತ ರೋಗಕ್ಕೆ ಮತ ಧವರ್i ಭಾಷೆ ಪ್ರದೇಶದ ನಂಟಿಲ್ಲ ಮರೆಯದಿರಿ ಎಂದರು.
ಈ ದಿನ ವರ್ಷವಿಡೀ ದುಡಿಯುವ ಕಾರ್ಮಿಕ ವರ್ಗಕ್ಕೆ ಮೀಸಲಾಗಿದೆ. ಕಾರ್ಮಿಕರ ಶ್ರಮ, ತ್ಯಾಗ, ಕಷ್ಟಗಳನ್ನು ಈ ದಿನ ಎಲ್ಲೆಡೆ ಸ್ಮರಿಸಲಾಗುತ್ತದೆ. ಇಂತಹ ಶ್ರಮಜೀವಿಗಳನ್ನು ನೆನೆಯುವ, ಗೌರವಿಸುವ ದಿನವಿದು. ಹೀಗಾಗಿ, ಬಹುತೇಕ ರಾಷ್ಟ್ರಗಳು ಇಂದು ಕಾರ್ಮಿಕರ ದಿನವನ್ನು ಆಚರಿಸುತ್ತವೆ. ಕಾರ್ಮಿಕರ ದಿನ, ಮೇ ಡೇ, ಲೇಬರ್ ಡೇ, ವರ್ಕರ್ಸ್ ಡೇ ಹೀಗೆ ನಾನಾ ಹೆಸರುಗಳಿಂದ ಈ ದಿನವನ್ನು ಕರೆಯಲಾಗುತ್ತದೆ ಎಂದು ಜಮಾದಾರ ಹೇಳಿದರು.
ಈ ಸಂದರ್ಭದಲ್ಲಿ ದೇವಕಿ ಜಮಾದಾರ, ಭಾಗ್ಯಶ್ರೀ ಜಮಾದಾರ, ವಿಜಯಕುಮಾರ ಜಮಾದಾರ, ಅಯ್ಯಪ್ಪ ಜಮಾದಾರ, ಗಾಯತ್ರಿ ಜಮಾದಾರ, ಶಿವಬಸವ ಜಮಾದಾರ, ವಿಷ್ಣು ಜಮಾದಾರ ಉಪಸ್ಥಿತರಿದ್ದರು.